ಕರ್ನಾಟಕ ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮಸೂದೆ ಅಂಗೀಕಾರ; ಕಾಂಗ್ರೆಸ್ ವಾಕ್‌ಔಟ್!
ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧ ಮತ್ತು ವಾಕ್‌ಔಟ್ ನಡುವೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಯನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ವೇಳೆ, ಜೆಡಿಎಸ್ ಸದಸ್ಯರು ಸದನದಲ್ಲಿ ಹಾಜರಿದ್ದರು. ಮಂಗಳವಾರ ಮಂಡನೆಯಾದ ಮಸೂದೆ ಗುರುವಾರ ಚರ್ಚೆಗೆ ಬಂದಿತ್ತು.
ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ವಾರ್ಡ್‌ಗಳು ಅಥವಾ ಕ್ಷೇತ್ರಗಳ ಗಡಿಗಳನ್ನು ಗುರುತಿಸಲು ಡಿಲಿಮಿಟೇಶನ್ ಕಮಿಷನ್ಅನ್ನು ರಚಿಸಿ, ಅದಕ್ಕೆ ಅಧಿಕಾರವನ್ನು ನೀಡಲು ತಿದ್ದುಪಡಿ ಮಸೂದೆಯು ಅವಕಾಶ ನೀಡುತ್ತದೆ.
ಪ್ರಸ್ತುತ, ಕರ್ನಾಟಕ ರಾಜ್ಯ ಚುನಾವಣಾ ಆಯೋಗವು (ಎಸ್ಇಸಿ) ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸುತ್ತಿದೆ. ಆದರೆ, ಸರ್ಕಾರವು ಎಸ್‌ಇಸಿಯ ಮೇಲೆ ನಿಯಂತ್ರಣ ಸಾಧಿಸಲು ಈ ಕ್ರಮವನ್ನು ಜಾರಿಗೆ ತರುತ್ತಿದೆ. ಇದರಿಂದಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ವಿಳಂಬಗೊಳಿಸುವ ಉದ್ದೇಶವನ್ನು ಹೊಂದಿದೆ. ಆಡಳಿತಾರೂಢ ಬಿಜೆಪಿಗೆ ಚುನಾವಣೆಗಳನ್ನು ಎದುರಿಸುವ ಧೈರ್ಯವಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸದನದಿಂದ ವಾಕ್‌ಔಟ್ ಮಾಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಅವರು ಎಸ್ಇಸಿ ಡಿಲಿಮಿಟೇಶನ್ ಪ್ರಕ್ರಿಯೆಯ ಬಗ್ಗೆ ಮಂಡಿಸಿದರು. ಈ ವೇಳೆ ಅವರು ಇದಕ್ಕೆ 2,600 ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ಎಸ್ಇಸಿಗೆ ಅಧಿಕಾರಗಳನ್ನು ನೀಡುವ ಮೊದಲು ರಾಜ್ಯ ಸರ್ಕಾರವು ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಮಾಡುತ್ತಿದೆ. ಈ ಕ್ರಮವನ್ನು ಡೇಟಾ ಮತ್ತು ಜನಸಂಖ್ಯೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎಂದು ಅವರು ವಾದಿಸಿದ್ದಾರೆ.
‘ಎಸ್‌ಇಸಿ ಮೇಲೆ ಬಿಜೆಪಿ ನಿಯಂತ್ರಣ ಸಾಧಿಸುವುದು ದುರದೃಷ್ಟಕರ’
ಮಸೂದೆಯನ್ನು ಪರಿಚಯಿಸುವ ಹಿಂದೆ ಯಾವುದೇ ಒಳ್ಳೆಯ ಉದ್ದೇಶಗಳನ್ನು ಕಾಣಲು ಸಾಧ್ಯವಿಲ್ಲ. ಸರ್ಕಾರವು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇದನ್ನು ತರುತ್ತಿದೆ. ಸಾಮಾಜಿಕ ನ್ಯಾಯ ನೀಡುವಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ ಎಂದು ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ನಮ್ಮ ಪಕ್ಷವು ಇದನ್ನು ವಿರೋಧಿಸುತ್ತದೆ. ನಾವು ವಾಕ್‌ಔಟ್ ಮಾಡುತ್ತೇವೆ. ಹಿರಿಯ ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಅವರು ಅಧಿಕಾರದಲ್ಲಿದ್ದಾಗ ಎಸ್ಇಸಿಗೆ ಡಿಲಿಮಿಟೇಶನ್ ಕಾರ್ಯವನ್ನು ವಹಿಸಿದ್ದರು. ಈಗ, ಬಿಜೆಪಿ ಸರ್ಕಾರವು ಎಸ್‌ಇಸಿ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳುತ್ತಿದೆ, ಇದು ದುರದೃಷ್ಟಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಎಸ್‌ಇಸಿಯನ್ನು ರಾಜ್ಯ ಸರ್ಕಾರ ಬದಿಗೊತ್ತಿದೆ: ಪ್ರಿಯಾಂಕ್
ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಸೂದೆಯನ್ನು ತರುವ ಮೂಲಕ ರಾಜ್ಯ ಸರ್ಕಾರವು ಎಸ್ಇಸಿಯನ್ನು ಬದಿಗೊತ್ತುತ್ತಿದೆ. “ಇದರ ಅರ್ಥವೇನೆಂದರೆ ಎಸ್ಇಸಿ ಡಿಲಿಮಿಟೇಶನ್ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲವೇ?” ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಭಾರತವನ್ನು ಮತ್ತೊಂದು ತಾಲಿಬಾನ್ ದೇಶವಾಗಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ

