ಯಡಿಯೂರಪ್ಪರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಯುದ್ಧವೇ ನಡೆಯುತ್ತಿದೆ: ಸುರ್ಜೇವಾಲ್
ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪ ಸಾಕಾಗಿದ್ದಾರೆ. ಬಿಎಸ್‌ವೈಗೆ ಸಿಎಂ ಖುರ್ಚಿ ಹೆಚ್ಚುದಿನ ಉಳಿಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡುವ ನಂತರ, ಬಿಜೆಪಿಯೊಳಗಿನ ಭಿನ್ನಾಪ್ರಾಯದ ಹೊಗೆ ಬಹಿರಂಗವಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿಯೊಳಗಿನ ಬಂಡಾಯದ ಬಗ್ಗೆ ಮಾತನಾಡುರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ್ ಅವರು, ದೆಹಲಿಯ ನೆರವಿನೊಂದಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಕರ್ನಾಟಕದಲ್ಲಿ ಯುದ್ಧವೇ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಕನ್ನಡದಲ್ಲಿ ಟ್ವೀಟ್ ಮಾಡಿರುವ ಅವರು, ಅಧಿಕಾರ ಲಾಲಸೆಯ ದೊಂಬರಾಟದಲ್ಲಿ ಯಾವುದೇ ಬೆಲೆ ತೆತ್ತಾದರೂ ಮಂತ್ರಿಗಿರಿ ಪಡೆಯುವ ಚಟ ಬಿಜೆಪಿ ಮೈಮೇಲೆರಿದೆ. ಆದರೆ ಪ್ರವಾಹ, ಅತಿವೃಷ್ಠಿ, ಕೊರೋನಾ ಸಂತ್ರಸ್ತ ಕನ್ನಡಿಗರ ಕಷ್ಟ ಇವರಿಗೆ ಕೇಳದಾಗಿದೆ ಎಂದು ಟೀಕಿಸಿದ್ದಾರೆ.
ದೆಹಲಿಯ ನೆರವಿನೊಂದಿಗೆ ಬಿಎಸ್ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಕುರ್ಚಿಯಿಂದ ತೆಗೆದುಹಾಕಲು ಕರ್ನಾಟಕದಲ್ಲಿ ಯುದ್ಧವೇ ನಡೆಯುತ್ತಿದೆ.
ಅಧಿಕಾರ ಲಾಲಸೆಯ ದೊಂಬರಾಟದಲ್ಲಿ ಯಾವುದೇ ಬೆಲೆ ತೆತ್ತಾದರೂ ಮಂತ್ರಿಗಿರಿ ಪಡೆಯುವ ಚಟ ಬಿಜೆಪಿ ಮೈಮೇಲೆರಿದೆ.
ಆದರೆ ಪ್ರವಾಹ, ಅತಿವೃಷ್ಠಿ, ಕರೋನಾ ಸಂತ್ರಸ್ತ ಕನ್ನಡಿಗರ ಕಷ್ಟ ಇವರಿಗೆ ಕೇಳದಾಗಿದೆ! pic.twitter.com/jEIqoYrkNi
— Randeep Singh Surjewala (@rssurjewala) October 21, 2020
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ವಿಡಿಯೋವನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಸರ್ಕಾರವನ್ನು ಉರುಳಿಸಲುಬಿಜೆಪಿಯೊಳಗೇ ಯುದ್ಧ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಎಸ್‌ವೈ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸುರ್ಜೇವಾಲ್