ಗಣಿ ಉದ್ಯಮಿಗಳ ಧನದಾಹಕ್ಕೆ ಬಿರುಕು ಬಿಟ್ಟ ಬಡವರ ಮನೆಗಳು….!

ಮನುಷ್ಯನಿಗೆ ಎಷ್ಟು ದುರಾಸೆ ಅಂದ್ರ ತನಗೆ ದುಡ್ಡು ಬೇಕು ಅಂದ್ರೆ ಇಡೀ ಊರನ್ನೆ ಹಾಳು ಮಾಡೋದಕ್ಕೆ ಏಸೋನಲ್ಲ. ಯಾರ ನೆಮ್ಮದಿ ನಿದ್ರೆಗೆ ಬೇಕಾದ್ರು ಕೈಹಾಕ್ತಾನೆ ಈ ನೀಜ ಬುದ್ದಿ ಮಾನವ. ತನ್ನ ಸ್ವಾರ್ಥಕ್ಕೋಸ್ಕರ ಪ್ರಕೃತಿ ಒಡಲನ್ನು ಬಗೆದು, ಇಡೀ ಗ್ರಾಮದ ಜನರ ನಿದ್ದೆಗೆಡಿಸುತ್ತಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕಿನ ಮಾಕೇನಹಳ್ಳಿ ಗ್ರಾಮ. ಮನುಷ್ಯನ ಹಣ ದಾಹಕ್ಕೆ ನಿರ್ಮಾಣವಾಗಿರುವ ಐದು ಕಲ್ಲುಗಾಣಿಗಾರಿಕೆ ಬಂಕರ್ಗಳು ಹಾಗೂ ಕ್ರಷರ್ಗಳು ಇಡೀ ಗ್ರಾಮದ ಜನರ ನೆಮ್ಮದಿ ಹಾಳೂ ಮಾಡಿ, ಒಂದಷ್ಟು ಕುಟುಂಬಗಳಿ ಈಗಾಗಲೆ ಊರು ಬಿಟ್ಟಿದ್ದಾರೆ. ಜಿಲ್ಲೆಯ ಗಡಿಯಂಚಿನಲ್ಲಿರುವ ಈ ಗ್ರಾಮದಲ್ಲಿನ ಜನರು, ಪ್ರತಿನಿತ್ಯ ಗಣಿಗಾರಿಕೆಯ ಸ್ಪೋಟದ ಭಯಾನಕ ಶಬ್ಧ ಹಾಗೂ ಕ್ರಷರ್ನಿಂದ ಉತ್ಪತ್ತಿಯಾಗುತ್ತಿರುವ ಬೃಹತ್ ದೂಳಿಗೆ ಭಯಭೀತರಾಗಿದ್ದಾರೆ. ಜಲ್ಲಿ ಕಲ್ಲು ಹಾಗೂ ಗೃಹನಿರ್ಮಾಣಕ್ಕೆ ಉಪಯೋಗಿಸುವ ಸಾಮಾಗ್ರಿಗಳಿಗಾಗಿ ಬೆಟ್ಟದಂತೆರುವ ಕಲ್ಲು ಬಂಡೆಯನ್ನು ಕರಗಿಸುತ್ತಿದ್ದಾರೆ. ಹರ್ಷ, ಸೂರ್ಯ, ವಿನಾಯಕ, ಎಸ್.ಎಲ್.ಎನ್, ಎಸ್.ಎಲ್.ಆರ್ ಎಂಬ ಕಂಪನಿಗಳ ಗಣಿಗಾರಿಕೆ ಜೋರಾಗಿದೆ.

ಇನ್ನೂ ಮುಖ್ಯವಾಗಿ ಈ ಗಣಿಗಾರಿಕೆಯಿಂದ ಮಾಕೇನಹಳ್ಳಿ ಗ್ರಾಮದ ನೂರಾರು ಮನೆಗಳೇಲ್ಲಾ ಬಿರುಕು ಬಿಟ್ಟಿದೆ. ಇತ್ತ ಮನೆಯ ಗೋಡೆಗಳು ಸಂಪೂರ್ಣ ಹಾಳಾಗುವ ಪರಿಸ್ಥಿತಿಗೆ ಬಂದು ತಲುಪಿದ್ದು, ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಮಲಗಲು ಸಹ ಆಗದೇ, ಬಾಣಂತಿ, ಚಿಕ್ಕಪುಟಾಣಿಗಳು ಸಹ ನಿದ್ರೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಭೂ ಸಂಪತ್ತನ್ನು ಉಳಿಸಬೇಕಾದ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯತಿಯಿಂದ ಹಿಡಿದು ಮೇಲ್ಮಟ್ಟದ ಆಡಳಿತ ವ್ಯವಸ್ಥೆ ವರೆಗೆ ಕ್ರಷರ್ಗಳಿಂದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹ ಜಾಣ ಕುರುಡನ್ನು ಪ್ರದರ್ಶೀಸುತ್ತಿದೆ. ಇನ್ನೂ ಕಲ್ಲು ಗಣಿಗಾರಿಕೆಯಿಂದ ಇಡೀ ಗ್ರಾಮವೇ ನಲುಗಿದ್ದು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದಲೆ ರಾಜಾರೊಷವಾಗಿ ಈ ಗಣಿಗಾರಿಕೆ ನಡೆಯುತ್ತಿದೆ ಎನ್ನುತ್ತಾರೆ ಮಾಕೇನಹಳ್ಳಿ ಗ್ರಾಮಸ್ಥರು.

   

ಒಟ್ಟಾರೆ ಪ್ರಕೃತಿಯಲ್ಲಿನ ಗಣಿ ಮತ್ತು ಭೂಸಂಪತ್ತುಗಳನ್ನು ಉಳಿಸಬೇಕಾಗಿರುವ ಗಣಿ ಭೂ ವಿಜ್ಞಾನ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಇನ್ನಾದರು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ನೀಡುವುದರೊಂದಿಗೆ, ಭೂಗರ್ಭದ ಸಂಪತ್ತನ್ನು ಉಳಿಸಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights