ನಡು ರಸ್ತೆಯಲ್ಲಿ ಹೊತ್ತಿ‌ ಉರಿದ ಕಾರ್ : ಓರ್ವ ಮಹಿಳೆ ಸಜೀವ ದಹನ!

ಹೊಂಡಾ ಕಾರ್ ವೊಂದು ನಡು ರಸ್ತೆಯಲ್ಲಿ ಹೊತ್ತಿ‌ ಉರಿದು ಕಾರಿನಲ್ಲಿದ್ದ ಓರ್ವ ಮಹಿಳೆ ಸಜೀವ ದಹನಗೊಂಡ ಧಾರುಣ ಘಟನೆ ಬೀದರ್ ನ ಹುಮನಾಬಾದ್ ತಾಲೂಕಿನ ನಿರ್ಣಾ ಕ್ರಾಸ್ ಬಳಿ ನಡೆದಿದೆ.

ಹೌದು… ಕಲ್ಯಾಣಿ‌ ಸಜಿವ ದಹನಗೊಂಡ‌ ಮಹಿಳೆ. ಕಾರಿನಲ್ಲಿ ನಾಲ್ಕು ಜನ ಉದಗಿರಿ ಯಿಂದ ಹೈದ್ರಾವಾದ್ ಗೆ ತೆರಳುತ್ತಿದ್ದರು. ತೀರಾ ಚಳಿಯಾಗುತ್ತಿದ್ದ ಕಾರಣ ಕಾರಿನ ಮಾಲೀಕ ಹೀಟರ್ ಹಾಕಿದ್ದರು. ಈ ವೇಳೆ ಕಾರಿಗೆ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿದೆ. ಘಟನೆಯಲ್ಲಿ 3 ಜನ ಪ್ರಾಣಾಪಾಯದಿಂದ ಪಾರಾದರು. ಆದರೆ ದುರಾದೃಷ್ಟ ಓರ್ವ ಮಹಿಳೆ ಸಜೀವ ದಹನಗೊಂಡಿದ್ದಾರೆ.

ಸ್ಥಳಕ್ಕೆ ಮನ್ನಾಖೇಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights