ಹಾಲಿ ಸಿಎಂ ಬದಲು ಮಾಜಿ ಸಿಎಂ ಫೋಟೋ ಹಾಕಿ ಆರೋಗ್ಯ ಇಲಾಖೆ ಎಡವಟ್ಟು!
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಸುಮಾರು ಎರಡು ತಿಂಗಳಾದರರೂ ಸಿಎಂ ಬೊಮ್ಮಾಯಿ ಫೋಟೋ ಬದಲು ಯಡಿಯೂರಪ್ಪ ಫೋಟೋ ಹಾಕಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಎರಡು ರಕ್ತದಾನ ಸಂಗ್ರದ ಬಸ್ ಗಳಿಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಚಾಲನೆ ನೀಡಿದರು. ಈ ವೇಳೆ ಡಾ. ಕೆ ಸುಧಾಕರ್ ಚಾಲನೆ ನೀಡಿದ ಬಸ್ ಗಳಿಗೆ ಹಾಕಲಾಗಿದ್ದ ಬ್ಯಾನರ್ ಗಳಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೆಸರು ಬದಲಿಗೆ ಬಿಎಸ್ ಯಡಿಯೂರಪ್ಪ ಹೆಸರು ಹಾಕಿ ಎಡವಟ್ಟು ಮಾಡಲಾಗಿದೆ.
ಕೊರೊನಾ ಕಾರಣದಿಂದ ರಕ್ತದಾನ ಮಾಡುವುದು ಹಾಗೂ ಪಡೆಯುವುದು ಸಂಪೂರ್ಣವಾಗಿ ನಿಂತು ಹೋಗಿತ್ತು. ಹೀಗಾಗಿ ರಕ್ತದ ಸಂಗ್ರದಲ್ಲಿ ಭಾರೀ ತೊಂದರೆಯಾಗಿತ್ತು. ಈ ಸಮಸ್ಯೆಯನ್ನು ತಪ್ಪಿಸಲು ಇಂದು ಡಾ. ಸುಧಾಕರ್ ರಸ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿದರು. ಶಿಬಿರದಲ್ಲಿ ಎರಡು ರಕ್ತ ಸಂಗ್ರಹದ ಬಸ್ ಗಳಿಗೆ ಚಾಲನೆ ಕೂಡ ನೀಡಲಾಯಿತು.
ಆದರೆ ಈ ಬಸ್ ಗಳ ಮೇಲೆ ಬಿಎಸ್ ಯಡಿಯೂರಪ್ಪ ಮಾಜಿ ಸಿಎಂ ಆದರೂ ಇಲ್ಲಿ ಮಾತ್ರ ಹಾಲಿ ಸಿಎಂ ಆಗಿರುವುದು ಕಂಡು ಬಂತು. ಸಂಚಾರಿ ಬಸ್ ನಲ್ಲಿ ಎಲ್ಲೆಡೆ ಬಿಎಸ್ ವೈ ಫೋಟೋ ಹಾಕಲಾಗಿರುವುದು ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಇಬ್ಬರಿಗೂ ಅಗೌರವ ತೋರಿಸಿದ್ರಾ ಎನ್ನುವ ಅನುಮಾನ ಮೂಡಿಸಿದೆ. ಲಾಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಈ ಕಾರ್ಯಕ್ರಮದ ಸಹಭಾಗಿತ್ವ ವಹಿಸಿರುವುದು ಬಸ್ ಮೇಲೆ ಅಂಟಿಸಿದ ಪೋಸ್ಟರ್ ನಲ್ಲಿ ಕಾಣಬಹುದು.