ಟೋಕಿಯೋ ಪ್ಯಾರಾಲಿಂಪಿಕ್ಸ್ : ಜಾವೆಲಿನ್, ಡಿಸ್ಕಸ್ ಥ್ರೋನಲ್ಲಿ ದೇಶಕ್ಕೆ ಮತ್ತೆ ಮೂರು ಪದಕ!
ದೇಶಕ್ಕೆ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಮತ್ತೆ ಮೂರು ಪದಕಗಳು ಲಭಿಸಿದೆ. ಜಾವೆಲಿನ್ ಥ್ರೋ ಕ್ಲಾಸ್ ಎಫ್ 45ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ. ಸುಂದರ್ ಸಿಂಗ್ ಕಂಚಿನ ಪದಕ ಪಡೆದರು. ಇನ್ನೂ ಡಿಸ್ಕಸ್ ಥ್ರೋ ಪಂದ್ಯದ ಎಫ್56 ವಿಭಾಗದಲ್ಲಿ ಯೋಗೀಶ್ ಬೆಳ್ಳಿ ಪದಕ ಗೆದ್ದು ದೇಶದ ಮೆಚ್ಚುಗೆ ಪಡೆದಿದ್ದಾರೆ.
ಪಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಜೋರಾಗಿದೆ. ಡಿಸ್ಕಸ್ ಪಂದ್ಯದ ಎಫ್56 ವಿಭಾಗದಲ್ಲಿ ಯೋಗೀಶ್ ಕಥುನಿಯಾ ಬೆಳ್ಳಿ ಪದಕ ಗೆದ್ದು ಭಾರತದ ಪ್ಯಾರಾಲಿಂಪಿಕ್ ಕಮಿಟಿ ಮತ್ತು ವಿಶೇಷವಾಗಿ ಅವರ ತಾಯಿಯ ಬೆಂಬಲಕ್ಕಾಗಿ ಧನ್ಯವಾದ ಹೇಳಿದ್ದಾರೆ.
#WATCH | Tokyo: Discus thrower Yogesh Kathuniya got emotional after winning a silver medal in class F56 in paralympics
"I am exalted on winning the silver medal. I want to thank SAI, PCI (Paralympic Committee of India), & especially my mother for their support," he says pic.twitter.com/OlKhLSxkAC
— ANI (@ANI) August 30, 2021
ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯೋಗೀಶ್ ತಾಯಿ ಮೀನಾದೇವಿ ’ಬೆಳ್ಳಿ ಪದಕ ನನಗೆ ಚಿನ್ನದ ಪದಕಕ್ಕೆ ಸಮಾನ. ಇಂದು ನನ್ನ ಸಂತೋಷಕ್ಕೆ ಮಿತಿ ಇಲ್ಲ’ ಎಂದು ಹೇಳಿದ್ದಾರೆ.
Outstanding performance by Yogesh Kathuniya. Delighted that he brings home the Silver medal. His exemplary success will motivate budding athletes. Congrats to him. Wishing him the very best for his future endeavours. #Paralympics
— Narendra Modi (@narendramodi) August 30, 2021
ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಈಗಾಗಲೇ ಮಹಿಳಾ ವಿಭಾಗದ 10 ಮೀಟರ್ ಏರ್ ರೈಫಲ್ ನಲ್ಲಿ ಅವಾನಿ ಲೇಖರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.