FACT CHECK | ರಾಹುಲ್ ಗಾಂಧಿಗೆ ನೀಡಿದ್ದ VVIP ಸ್ಥಾನಮಾನವನ್ನು ರದ್ದುಗೊಳಿಸಿದೆಯೇ ಮೋದಿ ಸರ್ಕಾರ?

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ  ನಾಯಕ, ಸಂಸದ, ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಾಮಾನ್ಯ ಸಂಸದರಿಗೆ ಹೋಲಿಸಿದರೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಮಹತ್ವದ್ದಾಗಿದೆ.

ಆದರೆ ರಾಹುಲ್ ಗಾಂಧಿಯವರ ವಿಡಿಯೋವೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದ್ದು, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರಾಹುಲ್ ಗಾಂಧಿಯವರ VVIP ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ ಮತ್ತು ಸಾಮಾನ್ಯ ಪ್ರಯಾಣಿಕರಂತೆಯೇ ವಿಮಾನ ನಿಲ್ದಾಣಗಳಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಹರಡುತ್ತಿದೆ. ಈ ವಿಡಿಯೋ ವೈರಲ್ ಆದ ನಂತರ ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತು ಗಾಂಧಿ ಕುಟುಂಬದ ಅಭಿಮಾನಿಗಳು ಸೇರಿದಂತೆ ಸಾನಮಾಜಿಕ ಮಾಧ್ಯಮಗಳ ಬಳಕೆದಾರರು ತೀವ್ರ ಆಕ್ರೋಶಗೊಂಡಿದ್ದಾರೆ. ರಾಹುಲ್ ಗಾಂಧಿಯವರ ವಿವಿಐಪಿ ಸ್ಥಾನಮಾನವನ್ನು ಏಕೆ ತೆಗೆದುಹಾಕಲಾಯಿತು ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ವಿವೇಕ್ ಮಿಶ್ರಾ ಎಂಬ ವ್ಯಕ್ತಿ ಈ ವೀಡಿಯೊವನ್ನು X ನಲ್ಲಿ ಹಂಚಿಕೊಂಡು “ನರೇಂದ್ರ ಮೋದಿ ಆಡಳಿತದಲ್ಲಿ ರಾಹುಲ್ ಗಾಂಧಿ ಸಾಮಾನ್ಯ ಪ್ರಜೆಯಾಗಿದ್ದಾರೆ. ಇದು ದೊಡ್ಡ ನೋವು. ಮೊದಲು ಅವರ ಕಾರು ವಿಮಾನ ನಿಲ್ದಾಣದ ರನ್‌ವೇವರೆಗೂ ಹೋಗುತ್ತಿತ್ತು. ಇದು ಮೋದಿಯಿಂದ ಸಾಧ್ಯವಾಯಿತು” ಎಂದು ಅವರು ಬರೆದಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರಾದ ಯುಗಲ್ ಶರ್ಮಾ, ಅರುಣ್ ಕುಮಾರ್ ಸಿಂಗ್ ಮತ್ತು ಧರ್ಮ ವಾ ದೇಶ್ ಸೆ ಉಪರ್ ಕೋಯಿ ನಹಿ ಅವರ ಖಾತೆಗಳಿಂದ ಇದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದೇ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮೊದಲಿಗೆ ವೈರಲ್ ವಿಡಿಯೋ ಯಾವಾಗಿನದ್ದು ಎಂದು ಪರಿಶೀಲಿಸಿದಾಗ, ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ವಿಮಾನ ನಿಲ್ದಾಣಕ್ಕೆ ಬಂದ ನಂತರ ಈ ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದಾಗ ತೆಗೆದ ವೀಡಿಯೊವನ್ನು ಈಗ ನಡೆದಿದೆ ಎಂಬಂತೆ ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಗುತ್ತಿರವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಟೈಮ್ಸ್‌ ಆಫ್‌ ಇಂಡಿಯಾದ ವರದಿಯೊಂದು ಲಭ್ಯವಗಿದೆ. ಇದರಲ್ಲಿ 2019ರ ನವೆಂಬರ್‌ನಲ್ಲಿ ಕೇಂದ್ರ ಸರಕಾರ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದಿತ್ತು. ಇವರಿಗೆ ಝಡ್‌ ಪ್ಲಸ್‌ ಭದ್ರತೆ ನೀಡಲಾಗಿತ್ತು. ಎಸ್‌ಪಿಜಿ ಇದ್ದರೆ ಮಾತ್ರ ವಿಮಾನಗಳಲ್ಲಿ ತಪಾಸಣೆ ಇಲ್ಲದೆ ಪ್ರವೇಶಿಸುವ ಆಯ್ಕೆ ಇತ್ತು. ಆದರೆ ಇದು ಝಡ್‌ ಪ್ಲಸ್‌ ಭದ್ರತೆ ಇಲ್ಲ ಎಂದು ಇದರಲ್ಲಿ ವಿವರಿಸಲಾಗಿದೆ. ಅಂದರೆ ಹಿಂದೆ ಈ ಘಟನೆ ನಡೆದ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನಾಗಿರಲಿಲ್ಲ, ಹಾಗಾಗಿ ಅವರಿಗೆ ಈ ಪ್ರೋಟೊಕಾಲ್ ಆಯ್ಕೆ ಇರಲಿಲ್ಲ.

ಆದರೆ ವೈರಲ್‌ ವಿಡಿಯೋದ ಘಟನೆ ನಡೆದ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿವಿಐಪಿ ಪಟ್ಟಿಯಲ್ಲಿ ಇರಲಿಲ್ಲ; ಅಂದರೆ ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿರಲಿಲ್ಲ. ಹೀಗಾಗಿ ಮೋದಿ ಸರಕಾರ ರಾಹುಲ್‌ ಗಾಂಧಿಗಿದ್ದ ಪ್ರೋಟೋಕಾಲ್ ಹಿಂತೆಗೆದುಕೊಂಡಿದ್ದರಿಂದ ಸಾಮಾನ್ಯರಂತೆ ತಪಾಸಣೆಗೆ ಒಳಗಾಗಬೇಕಾದುದು ನಿಜವಾದರೂ ಈಗ ಅವರಿಗೆ ಈ ಸೌಲಭ್ಯ ಇದೆ. ಹಾಗಾಗಿ ಕೇಂದ್ರದಲ್ಲಿರುವ ಮೋದಿ ಸರ್ಕಾರ ರಾಹುಲ್ ಗಾಂಧಿಯವರ VVIP ಸ್ಥಾನಮಾನವನ್ನು ತೆಗೆದುಹಾಕಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಹಿಂದೆ ಮೋದಿ ಸರಕಾರ ರಾಹುಲ್ ಗಾಂಧಿಗೆ ಇದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದಿದ್ದರಿಂದ ತಪಾಸಣೆಗೆ ಒಳಪಡಬೇಕಾಗಿತ್ತು. ಈಗ ಅವರು ಲೋಕಸಭೆ ವಿರೋಧ ಪಕ್ಷದ ನಾಯನಾಗಿರುವುದರಿಂದ ಅವರಿಗೆ ಮತ್ತೆ VVIP ಪಟ್ಟಿ ಅಡಿಯಲ್ಲಿ ತಪಾಸಣೆಯಿಂದ ವಿನಾಯಿತಿ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರಾಹುಲ್ ಗಾಂಧಿಯವರಿಗೆ ನೀಡುತ್ತಿದ್ದ VVIP ಪ್ರೋಟೊಕಾಲ್‌ಅನ್ನು ತೆಗೆದು ಹಾಕಲಾಗಿದೆ ಎಂಬುದು ಅರ್ಧ ಸತ್ಯ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗಂಗಾ ನದಿಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಸಿಕ್ಕಿವೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights