ಪತ್ನಿ ರೂಪಾ ಹತ್ಯೆ ಬಳಿಕ ಇಬ್ಬರಿಗೆ ಮೂಹೂರ್ತ ಫಿಕ್ಸ್ ಮಾಡಿದ್ದ ಕಾಂತರಾಜ್!

ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದ ರೂಪ ಹತ್ಯೆ ಪ್ರಕರಣ ಪತಿ ಬಂಧನದ ಬಳಿಕ ಭಾರೀ ಟ್ವಿಸ್ಟ್ ಪಡೆದುಕೊಂಡಿದೆ. ಪತ್ನಿ ರೂಪಾಳ ಶೀಲ ಶಂಕಿಸಿದ ಕಾಂತರಾಜ್ ಮಡದಿ ಮರ್ಡರ್ ಬಳಿಕ ಇಬ್ಬರಿಗೆ ಮೂಹೂರ್ತ ಫಿಕ್ಸ್ ಮಾಡಿದ್ದ ಎನ್ನುವ ವಿಚಾರ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ.

ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದ ಕಾಂತರಾಜ್ ಸೆ.22ರಂದು ಕತ್ತು ಸೀಳಿ ರೂಪಾಳನ್ನು ಬರ್ಬರವಾಗಿ ಹತ್ಯೆಗೈದು ಮನೆ ಬೀಗ ಹಾಕಿ ಪರಾರಿಯಾಗಿದ್ದನು. ಬಳಿಕ ಕಾಂತರಾಜುವನ್ನು ಎಪಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಕಾಂತರಾಜುವಿನಿಂದ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ನಡೆದಿರುವ ಘಟನೆ ಬಗ್ಗೆ ತನಿಖೆ ಮಾಡುವ ವೇಳೆ ಆರೋಪಿ ಕಾಂತರಾಜು ಸಾಕಷ್ಟು ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ.

ಪೊಲೀಸ್ ವಿಚಾರಣೆ ವೇಳೆ ಕಾಂತರಾಜು, “ಇಬ್ಬರನ್ನು ಕೊಲೆ ಮಾಡೋದಿದೆ ಬಿಟ್ಬಿಡಿ ಸರ್. ಆ ಇಬ್ಬರನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಪತ್ನಿಯನ್ನು ಕೊಂದ ಪಶ್ಚಾತಾಪವಿಲ್ಲದೇ ಕಾಂತರಾಜು ಪೊಲೀಸರ ಮುಂದೆ ಬೇಡಿಕೊಂಡಿದ್ದಾನೆ.

ಆರೋಪಿ ಕಾಂತರಾಜು ಚಿಕ್ಕಮ್ಮ ಹಾಗೂ ಅವರ ಮಗನನ್ನು ಕೊಲ್ಲುವ ಪ್ಲ್ಯಾನ್ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಚಿಕ್ಕಮ್ಮನ ಮಗನೊಂದಿಗೆ ಪತ್ನಿ ರೂಪಗೆ ಸಂಬಂಧವಿತ್ತು ಎಂದು ಹೇಳಿದ್ದಾನೆ. ರೂಪ ಹತ್ಯೆ ಬಳಿಕ ಚಿಕ್ಕಮ್ಮ ಹಾಗೂ ಮಗನಿಗೆ ಕರೆ ಮಾಡಿದ್ದ ಕಾಂತರಾಜು ‘ಎಂಥ ಮಗನಿಗೆ ಜನ್ಮ ನೀಡಿದ್ದೀಯಾ?’ ಎಂದು ಚಿಕ್ಕಮ್ಮನಿಗೆ ಬೈದಿದ್ದಾನೆ. ಜೊತೆಗೆ ಚಿಕ್ಕಮ್ಮನ ಮಗನಿಗೆ ಕರೆ ಮಾಡಿ’ ನಿಮ್ಮನ್ನೋ ನಾನು ಬಿಡುವುದಿಲ್ಲ. ನಿಮ್ಮನ್ನೂ ಕೊಲೆ ಮಾಡುತ್ತೇನೆ’ ಎಂದು ಹೇಳಿದ್ದಾನೆ.

‘ಸಾಕಷ್ಟು ದಿನಗಳಿಂದ ತನ್ನ ಪತ್ನಿ ಚಿಕ್ಕಮ್ಮನ ಮಗನ್ನೊಂದಿಗೆ ಸಂಬಂಧಿ ಇಟ್ಟುಕೊಂಡಿದ್ದಳು. ಧರ್ಮಸ್ಥಳಕ್ಕೆ ಹೋಗಿ ಅವಳಿಂದ ಆಣೆ ಮಾಡಿಸಿಕೊಂಡಿದ್ದೆ. ಯಾವುದೇ ಸಂಬಂಧಿ ಇಟ್ಟುಕೊಂಡಿಲ್ಲ ಎಂದಿದ್ದಳು. ಆದರೆ ಅದೇ ಕೆಲಸ ರೂಪ ಮುಂದುವರೆಸಿದ್ದಳು. ಹೀಗಾಗಿ ಕೊಲೆ ಮಾಡಿದೆ’ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

ಕೊಲೆ ಮಾಡಿ ಹಾಸನಕ್ಕೆ ಹೋಗಿ ಮಾರಕಾಸ್ತ್ರಗಳನ್ನು ಬಿಸಾಡಿದ ಕಾಂತರಾಜು, ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಮೀರಿದ್ದ ತಪ್ಪಿಗೆ ಕೇಶಮುಂಡನೆ ಮಾಡಿಕೊಂಡು ಮೈಸೂರಿಗೆ ಬಂದು  ಚಿಕ್ಕಮ್ಮ ಹಾಗೂ ಮಗನ ನನ್ನು ಹುಡುಕಾಡುತ್ತಾನೆ. ಆದರೆ ಈ ವೇಳೆ ಕಾಂತರಾಜು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧನದ ಬಳಿಕ ಕಾಂತರಾಜುಗೆ ಪತ್ನಿ ಕೊಲೆ ಬಗ್ಗೆ ಪಶ್ಚಾತಾಪ ಕಾಣಿಸಿದೆ ಅವನಲ್ಲಿ ಆಕ್ರೋಶ ಕಂಡು ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights