ಫ್ಯಾಕ್ಟ್‌ಚೆಕ್ : ಮಗುವಿನ ಹುಟ್ಟುಹಬ್ಬಕ್ಕೆ ದೀಪ ಬೆಳಗಿಸಿದ ಕಾರಣಕ್ಕೆ ಮುಸ್ಲಿಂ ಗಂಡನಿಂದ, ಹಿಂದೂ ಪತ್ನಿ ಮೇಲೆ ಹಲ್ಲೆ ನಡೆಯಿತೇ?

ಹಿಂದೂ ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿ ದೌರ್ಜನ್ಯ ಎಸಗುತ್ತಿರುವ ಮುಸ್ಲಿಂ ಪತಿ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಬೆಂಗಳೂರಿನಲ್ಲಿ ಐಟಿ ವೃತ್ತಿಪರರಾಗಿರುವ ಮೊಹಮ್ಮದ್ ಮುಷ್ತಾಕ್ ಅವರನ್ನು ಹಿಂದೂ ಹುಡುಗಿ ವಿವಾಹವಾದರು.
ತನ್ನ ಮಗುವಿನ ಜನ್ಮದಿನದಂದು ಅವರು ಹಿಂದೂ ಸಂಪ್ರದಾಯದಂತೆ ದೀಪವನ್ನು ಬೆಳಗಿಸಿದರು.
ಅ ಜಿಹಾದಿ  ಅವಳನ್ನು ಹೇಗೆ ನಡೆಸಿಕೊಂಡಿದ್ದಾನೆ ಎಂದು ನೋಡಿ. ಇದು ಪ್ರತಿಯೊಬ್ಬ ಹಿಂದೂ ಹುಡುಗಿ ನೋಡಬೇಕಾದದ್ದು ಮತ್ತು ಇಡೀ ರಾಷ್ಟ್ರ.. Love jihad. ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

 

ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರಿನ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ಮಗುವಿನ ಎದುರೇ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹೇಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಬರೆದಿದ್ದಾರೆ, “ಲವ್ ಜಿಹಾದ್ ನಂತರ ಹಿಂದೂಗಳಿಗೆ ಏನಾಗುತ್ತದೆ. ಹಿಂದೂ ಹುಡುಗಿ ಮುಸ್ಲಿಂ ಗಂಡನಿಂದ ಹೇಗೆ ಹಿಂಸೆಗೊಳಗಾಗಿದ್ದಾಳೆ ನೋಡಿ ಎಂದು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

 

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಏನ್‌ಸುದ್ದಿ.ಕಾಂ ಗೆ ವಾಟ್ಸಾಪ್ ಮಾಡುವ ಮೂಲಕ ವಾಸ್ತವ ಏನೆಂದು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ವಿಡಿಯೊದಲ್ಲಿರುವ ವ್ಯಕ್ತಿ ಮೊಹಮ್ಮದ್ ಮುಷ್ತಾಕ್ ಜಿಕೆ ಎಂದು, ಅವನು ಬೆಂಗಳೂರಿನ IT ಕಂಪನಿಯಲ್ಲಿ ಕೆಲಸ ಮಾಡುತ್ತಾನೆಂದು ನಮೂದಿಸಲಾಗಿದೆ.

ಇದನ್ನೆ ಆಧಾರವಾಗಿಟ್ಟುಕೊಂಡು ಕೀವರ್ಡ್ ಸರ್ಚ್ ನಡೆಸಿದಾಗ, 4 ಅಕ್ಟೋಬರ್ 2022 ರಂದು ಇಂಡಿಯಾ ಟುಡೇ ಪ್ರಕಟಿಸಿದ ವಿಡಿಯೊ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ ಹಲ್ಲೆ ಮಾಡುತ್ತಿರುವ ವ್ಯಕ್ತಿ ಮತ್ತು ಮಹಿಳೆ ಇಬ್ಬರು ದಂಪತಿಗಳಾಗಿದ್ದು, ಮೊಹಮ್ಮದ್ ಮುಷ್ತಾಕ್ ತನ್ನ ಪತ್ನಿ ಆಯಿಷಾ ಮೇಲೆ ಹಲ್ಲೆ ಮಾಡುತ್ತಿರುವಂತೆ ವಿಡಿಯೊದಲ್ಲಿ ತೋರಿಸಲಾಗಿದೆ. ಅಂದರೆ ಇಬ್ಬರೂ ಮೂಲದಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ್ದವರಾಗಿದ್ದಾರೆ.

ಆಯಿಷಾ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾ, ತನ್ನ ಪತಿ ಒಬ್ಬ ಮನೋರೋಗಿಯಾಗಿದ್ದು , ಮತ್ತೋರ್ವ ಮಹಿಳೆಯನ್ನು ಮರುಮದುವೆಯಾಗಿ, ಅವಳೊಂದಿಗೆ ಮಗುವನ್ನು ಪಡೆದ ನಂತರವೂ ನನಗೆ ವಿಚ್ಛೇದನ ನೀಡಲು ನಿರಾಕರಿಸಿದ್ದಾರೆ ಎಂದು ಆಯಿಷಾ ಹೇಳಿದ್ದಾರೆ.

ಗ್ರೌಂಡ್ ರಿಪೋರ್ಟ್ ಎಂಬ ವೆಬ್‌ಸೈಟ್ ಮಾಡಿದ ವರದಿಯ ಪ್ರಕಾರ, ವೀಡಿಯೊ 2015 ರ ಹಿಂದಿನದ್ದಾಗಿದೆ. ಮೊಹಮ್ಮದ್ ಮುಷ್ತಾಕ್ , 30 ಮಾರ್ಚ್ 2009 ರಂದು ಆಯೇಷಾ ಬಾನು ಅವರನ್ನು ಮದುವೆಯಾಗಿದ್ದರು. ಅವರಿಗೆ 1 ಆಗಸ್ಟ್ 2013 ರಂದು ಮಗು ಜನಿಸಿದ್ದು, ನಂತರ ಪತಿ ಪತ್ನಿಯ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು ಇದರಿಂದ ಅವರು ಬೇರೆಯಾಗಲು ನಿರ್ಧರಿಸಿದರು. ಎಂದು ವರದಿಯಾಗಿದೆ.

ಈ ಘಟನೆ ನಡೆದಿರುವುದು 2015 ರಲ್ಲಿ ಎಂದು ಗ್ರೌಂಡ್ ರಿಪೋರ್ಟ್‌ ವರದಿ ಮಾಡಿದ್ದು  ಸಾನಾಜಿಕ ಮಾಧ್ಯಮಗಳಲ್ಲಿ  ಇದು ಪದೇ ಪದೇ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈಗ ಮತ್ತೆ ಇದೇ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಗುತ್ತಿದೆ. ಈ ಇಬ್ಬರು ಮುಸ್ಲಿಂ ದಂಪತಿಗಳು ವಿಚ್ಛೇದನ ಪಡೆದು ಬೇರೆಯಾಗಿದ್ದಾರೆ. ಮತ್ತು ಆಕೆಯ ಗಂಡ ಮರುಮದುವೆಯಾಗಿದ್ದು, ಹೆಣ್ಣು ಮಗು ಜನಿಸಿದೆ.

ಇದಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಹೇಳುತ್ತಿರುವಂತೆ ಹಲ್ಲೆಗೊಳಗಾಗುತ್ತಿರುವ ಮೊದಲನೇ ಹೆಂಡತಿ ಆಯಿಷಾ ಮತ್ತು ಮುಷ್ತಾಕ್ ಇಬ್ಬರು ಒಂದೇ ಸಮುದಾಯಕ್ಕೆ (ಸುನ್ನಿ ಮುಸ್ಲಿಂ ಸಮುದಾಯಕ್ಕೆ) ಸೇರಿದವರಾಗಿದ್ದಾರೆ ಎಂಬುದು 21 ಡಿಸೆಂಬರ್ 2021 ರ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನಿಂದ ದೃಢಪಟ್ಟಿದೆ. ಹಾಗಾಗಿ ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸ್ಪಷ್ಟವಾಗಿದೆ.

Image Credit: Indian Kanoon

ಮಗುವಿನ ಪಾಲನೆಗಾಗಿ ಮುಷ್ತಾಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, “ಪತಿಯ ಎರಡನೇ ಮದುವೆಯ ಆಧಾರದ ಮೇಲೆ ಮೊದಲ ಹೆಂಡತಿ ತನ್ನ ಪತಿಯ ಮನೆಯಿಂದ ದೂರ ಉಳಿಯಲು ಮುಂದಾದರೆ, ಅವಳು ಸಾಮಾನ್ಯವಾಗಿ ತನ್ನ ಅಪ್ರಾಪ್ತ ಮಗುವಿನ ವಿಶೇಷ ಪಾಲನೆಯನ್ನು ಉಳಿಸಿಕೊಳ್ಳಬಹುದು ಎಂದು ಹೇಳುತ್ತದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿಗಳ ವಿಚ್ಛೇದನ ಅರ್ಜಿ ವಿಚಾರಣೆಯ ತೀರ್ಪನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾರೆ ವೈರಲ್ ವೀಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಮತ್ತು ಹಲ್ಲೆಗೊಳಗಾಗುತ್ತಿರುವ ಮಹಿಳೆ ದಂಪತಿಗಳಾಗಿದ್ದು. ಮುಷ್ತಾಕ್ ಮತ್ತು ಆಯಿಷಾ ಇಬ್ಬರು ಸುನ್ನಿ ಎಂಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಅಲ್ಲದೆ ಇದೊಂದು ಹಳೆಯ 2013 ಪ್ರಕರಣವಾಗಿದ್ದು ಈಗ ವಿಡಿಯೋವನ್ನು ಲವ್ ಜಿಹಾದ್ ಪ್ರಕರಣ ಎಂದು ಪ್ರತಿಪಾದಿಸಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಗ್ರೌಂಡ್ ರಿಪೋರ್ಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನೆಹರು ತಾಯಿ ಮುಸ್ಲಿಂ ಎಂದು ಸುಳ್ಳು ಸುದ್ದಿ ಹಂಚಿಕೊಂಡ ಬಿಜೆಪಿ ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights