ಫ್ಯಾಕ್ಟ್‌ಚೆಕ್ : ಗುಂಡು ಹಾರಿಸಿದ ಬಜರಂಗದಳದ ಕಾರ್ಯಕರ್ತನನ್ನು ಪೊಲೀಸ್‌ ಅಧಿಕಾರಿ ಎಂದು ಸುಳ್ಳು ಸುದ್ದಿ ಮಾಡಿದ ಜೀ ನ್ಯೂಸ್

ಇತ್ತೀಚೆಗೆ ಹರಿಯಾಣದ ನುಹ್‌ನಲ್ಲಿ ನಡೆದ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ  ವ್ಯಕ್ತಿಯೊಬ್ಬ ಬಹಿರಂಗವಾಗಿ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗುಂಡು ಹಾರಿಸಿದ ವ್ಯಕ್ತಿ ಬಜರಂಗ ದಳ ಸಂಘಟನೆಗೆ ಸೇರಿದ ವ್ಯಕ್ತಿ ಎಂದು ಕೆಲವರು ಪೋಸ್ಟ್‌ಅನ್ನು ಹಂಚಿಕೊಂಡಿದ್ದರೆ ಜೀ ನ್ಯೂಸ್ ಆತನನ್ನು ಪೊಲೀಸ್ ಅಧಿಕಾರಿ ಎಂದು ಸುದ್ದಿ ಪ್ರಸಾರ ಮಾಡಿದೆ.

ವ್ಯಕ್ತಿಯೊಬ್ಬರು ದೇವಾಲಯದ ಆವರಣದಲ್ಲಿ ನಿಂತು ಅತ್ಯಾಧುನಿಕ ರೈಫಲ್‌ನಿಂದ ಗುಂಡು ಹಾರಿಸುವ ಮತ್ತು ಆ ದೇವಾಲಯದ ಆವರಣದಲ್ಲಿ ಪೊಲೀಸರು ಇರುವ, ದೃಶ್ಯವಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ‘ಗುಂಡು ಹಾರಿಸಿದ ವ್ಯಕ್ತಿ ಮಫ್ತಿಯಲ್ಲಿರುವ ಪೊಲೀಸ್ ಅಧಿಕಾರಿ’ ಎಂದು ಝೀನ್ಯೂಸ್‌ ವರದಿ ಮಾಡಿತ್ತು. ಆ ವರದಿಯ ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಕೊಳ್ಳಲಾಗುತ್ತಿದೆ. ಗುಂಡು ಹಾರಿಸಿದ್ದು ಬಜರಂಗ ದಳದ ಕಾರ್ಯಕರ್ತನಲ್ಲ, ಬದಲಿಗೆ ಪೊಲೀಸ್‌ ಅಧಿಕಾರಿ ಎಂದು ಆ ಸ್ಕ್ರೀನ್‌ಶಾಟ್‌ನ ಜತೆಗೆ ಸಂದೇಶ ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ವಾಹಿನಿ ಈ ಎರಡರಲ್ಲಿ ನಿಜಾಂಶ ಏನು? ಯಾರ ಪ್ರತಿಪಾದನೆ ಸರಿ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಜೀ ನ್ಯೂಸ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸುದ್ದಿಯನ್ನು ಪರಿಶೀಲಿಸದಾಗ, ಇಂಡಿಯಾ ಟಿವಿ ವರದಿಯೊಂದು ಲಭ್ಯವಾಗಿದ್ದು. ‘ವಿಡಿಯೊದಲ್ಲಿರುವ ವ್ಯಕ್ತಿ ಪೊಲೀಸ್‌ ಅಧಿಕಾರಿಯಲ್ಲ. ಬದಲಿಗೆ ಆತ ಬಜರಂಗ ದಳದ ಕಾರ್ಯಕರ್ತ ಆಶೋಕ್‌ ಬಾಬಾ. ‘ಆ ವಿಡಿಯೊದಲ್ಲಿ ಇರುವ ವ್ಯಕ್ತಿ ನಾನೇ. ನಾನೇ ಗುಂಡು ಹಾರಿಸಿದ್ದು, ನಾನು ಬಜರಂಗದ ದಳದ ಕಾರ್ಯಕರ್ತ’ ಎಂದು ಟಿ.ವಿ.ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆತ ಹೇಳಿಕೊಂಡಿದ್ದಾನೆ.

ಈ ವರ್ಷದ ಜೂನ್ 22 ರಂದು ಅಶೋಕ್ ಬಾಬಾ ಅವರ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊವನ್ನು ಆಲ್ಟ್‌ನ್ಯೂಸ್ ಹಂಚಿಕೊಂಡಿದೆ. ಅದರಲ್ಲಿ ಆತನನ್ನು ಬಜರಂಗದಳ ಫರಿದಾಬಾದ್‌ನ ಶಾಖೆಯ ಸಂಯೋಜಕ ಎಂದು ಕರೆದುಕೊಂಡಿದ್ದಾನೆ.

ಅಶೋಕ್ ಬಾಬಾ ಅವರ ಹೆಸರನ್ನು ಉಲ್ಲೇಖಿಸಿ ಬಜರಂಗದಳ ಫರಿದಾಬಾದ್ ಅವರು 2022 ರಲ್ಲಿ ಹೊರಡಿಸಿದ ಪತ್ರವನ್ನು ನಾವು ಕಂಡುಕೊಂಡಿದ್ದೇವೆ, ಆದರೆ ಅವರ ಹೆಸರನ್ನು ಗೋ ರಕ್ಷಾ ಪ್ರಮುಖ್ (ಗೋಸಂರಕ್ಷಣೆಯ ಮುಖ್ಯಸ್ಥ) ಎಂದು ಪಟ್ಟಿ ಮಾಡಲಾಗಿದೆ. ಇದರಿಂದ ಬಾಬಾ ಬಜರಂಗ ದಳದೊಂದಿಗೆ ನಂಟು ಹೊಂದಿರುವುದು ದೃಢಪಟ್ಟಿದೆ.

ಆನಂತರ, ಝೀನ್ಯೂಸ್‌ ಸಹ ತಾನು ಮಾಡಿದ್ದ ವರದಿ ಮತ್ತು ವರದಿಯ ಲಿಂಕ್‌ ಇದ್ದ ಟ್ವೀಟ್‌ ಅನ್ನು ಅಳಿಸಿ ಹಾಕಿದೆ. ಆದರೆ, ವರದಿಯ ಸ್ಕ್ರೀನ್‌ಶಾಟ್‌ ಅನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಹರಿಯಾಣ ಪೊಲೀಸ್ ಸಹಾಯಕ ಮಹಾನಿರ್ದೇಶಕಿ ಮಮತಾ ಸಿಂಗ್‌ ಅವರನ್ನು ಕೇಳಲಾಗಿತ್ತು. ವಿಡಿಯೊವನ್ನು ತಾನೂ ನೋಡಿದ್ದು, ಸ್ಥಳದಲ್ಲಿ ಪೊಲೀಸರು ಮಫ್ತಿಯಲ್ಲೂ ಇದ್ದರು. ಆ ವ್ಯಕ್ತಿಯ ಬಗ್ಗೆ ಮತ್ತು ಆತ ಬಳಸಿದ ರೈಫಲ್ಸ್‌ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಿತ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ. ಎಂದು ಮಾಹಿತಿ ನೀಡಿದ್ದಾರೆ’ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನುಹ್‌ನಲ್ಲಿ ಕೋಮು ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯನ್ನು ಮಫ್ತಿಯಲ್ಲಿ ನಿಯೋಜಸಲಾಗಿತ್ತಾದರೂ, ಬಿಳಿ ಶರ್ಟ್ ಧರಿಸಿ ಗುಂಡು ಹಾರಿಸಿದ ವ್ಯಕ್ತಿ ಪೊಲೀಸ್ ಅಧಿಕಾರಿಯಲ್ಲ. ಆತನನ್ನು ಅಶೋಕ್ ಬಾಬ ಬಜರಂಗದಳದ ಕಾರ್ಯಕರ್ತ ಎಂದು ಪೊಲೀಸರು ದೃಢಪಸಿದ್ದಾರೆ. ಹಾಗಾಗಿ ಜೀನ್ಯೂಸ್ ಸುದ್ದಿ ವಾಹಿನಿ ಪ್ರಕಟಿಸಿದ ವರದಿ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮುಸ್ಲಿಮರು ವಿಶೇಷ ರೈಲನ್ನು ಅಲಂಕರಿಸುತ್ತಿರುವ ಸಂದರ್ಭವನ್ನು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights