ಫ್ಯಾಕ್ಟ್‌ಚೆಕ್ : ಮುಸ್ಲಿಮರು ವಿಶೇಷ ರೈಲನ್ನು ಅಲಂಕರಿಸುತ್ತಿರುವ ಸಂದರ್ಭವನ್ನು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೆ

ಮಸೀದಿಯ ಆಕಾರದ ಹಸಿರು ಬಣ್ಣದ ಗುಮ್ಮಟವನ್ನು ರೈಲಿನ ಮುಂಭಾಗಕ್ಕೆ ಅಲಂಕರಿಸಿರುವ ಈ ರೈಲು ತೆಲಂಗಾಣದ ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಹೋಗಲು ಸಿದ್ದಗೊಂಡಿದೆ, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಎಲ್ಲಾ ಸಿದ್ದತೆ ನಡೆಯುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/ajaychauhan41/status/1686945226018189312?s=46&t=kIszbQH_arRSG8kPbuGeZw

ತೆಲಂಗಾಣದ ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಪ್ರಯಾಣಿಸುವ ರೈಲನ್ನು ಮುಸ್ಲಿಮರು ಅಲಂಕರಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಮಸೀದಿ ವಿನ್ಯಾಸದೊಂದಿಗೆ ಅಲಂಕೃತಗೊಂಡ ರೈಲಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂಬ ಕೋಮು ದ್ವೇಷದ ನಿರೂಪಣೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಈ ರೀತಿ ಸಿಂಗಾರಮಾಡಲು ಕಾರಣವೇನು, ಒಂದು ವೇಳೆ ರೈಲನ್ನು ಈ ರೀತಿ ಅಲಂಕಾರ ಮಾಡುವಾಗ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರೈಲ್ವೆ ಇಲಾಖೆ ಯಾಕೆ ಸುಮ್ಮನಿದೆ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, SaleemzoneOfficial ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೊವನ್ನು ಅಕ್ಟೋಬರ್ 2017 ರಂದು “ಹಲ್ಕಟ್ಟಾ ಶೇರೀಫ್ ಸ್ಯಾಂಡಲ್ ಮತ್ತು ದರ್ಗಾ ಹೊಸ ವೀಡಿಯೊ 2017 ಅಕ್ಟೋಬರ್ 4” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ.

1978 ರಲ್ಲಿ ನಿಧನರಾದ ಬಾದ್‌ ಶಾ ಕ್ವಾದ್ರಿ ಎಂಬ ಸಂತರು ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ವಾಡಿಯ ಹೊರಗಿನ ಹಲ್ಕಟ್ಟಾ ಶರೀಫ್‌ನಲ್ಲಿ ಸಮಾಧಿಯಾಗಿದ್ದಾರೆ ಎಂದು ಕಂಡುಬಂದಿದೆ. ಜನರು ಪ್ರತಿ ವರ್ಷ ಬಡೇಶ ಕ್ವಾದ್ರಿಯ ಮರಣ ವಾರ್ಷಿಕೋತ್ಸವ ಅಥವಾ ‘ಉರ್ಸ್’ಗಾಗಿ ಹಲ್ಕಟ್ಟಾ ಶರೀಫ್‌ಗೆ ಪ್ರಯಾಣಿಸುತ್ತಾರೆ. ದಕ್ಷಿಣ ಮಧ್ಯ ರೈಲ್ವೇ (SCR) ಹೈದರಾಬಾದ್‌ನಿಂದ ವಾಡಿಯಲ್ಲಿರುವ ಹಜರತ್-ಎ-ಶರೀಫ್‌ನ ಉರ್ಸ್-ಎ-ಶರೀಫ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ ಎಂದು 2004 ಮತ್ತು 2007 ರಲ್ಲಿ ದಿ ಹಿಂದೂ ವರದಿ ಮಾಡಿದೆ.

ಅಲಂಕಾರಗೊಂಡಿರುವ ರೈಲಿಗೂ ಪಶ್ಚಿಮ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳುದು ಬಂದಿದೆ. ಕ್ವಾದ್ರಿ ಚಿಸ್ತಿ ಯಮಾನಿ ಅವರ 46 ನೇ ವಾರ್ಷಿಕೋತ್ಸವದ ಆಚರಣೆಗಳಲ್ಲಿ ಪಾಲ್ಗೊಳ್ಳಲ್ಲು ಬರುವ ಯಾತ್ರಾರ್ಥಿಗಳಿಗಾಗಿ  ದಕ್ಷಿಣ ಮಧ್ಯ ರೈಲ್ವೆಯು ಹೈದರಾಬಾದ್ ಮತ್ತು ವಾಡಿ ಜಂಕ್ಷನ್ ನಡುವೆ ನಾಲ್ಕು ವಿಶೇಷ ರೈಲುಗಳನ್ನು ನಿಯೋಜಿಸಲಾಗಿತ್ತು ಎಂದು ವರದಿಯಾಗಿದೆ.

ಪ್ರತಿ ವರ್ಷ, ಕಲಬುರಗಿಯ ಹಲ್ಕಟ್ಟಾ ಶರೀಫ್ ದರ್ಗಾದಲ್ಲಿ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗಾಗಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಏರ್ಪಾಡು ಮಾಡುತ್ತದೆ. ಯಾತ್ರಾರ್ಥಿಗಳು ಈ ವಿಶೇಷ ರೈಲುಗಳನ್ನು ದರ್ಗಾ ಬೋರ್ಡ್, ಇಸ್ಲಾಮಿಕ್ ಫಲಕಗಳಿಂದ ಅಲಂಕರಿಸಿರುತ್ತಾರೆ. ಹೈದರಾಬಾದ್‌ನಿಂದ ಹಲ್ಕಟ್ಟಾ ಶರೀಫ್ ದರ್ಗಾಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಹಿಂದಿನ ಆಚರಣೆಗಳನ್ನು ತೋರಿಸುವ ಕೆಲವು ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಭಾರತೀಯ ರೈಲ್ವೇಯು ಚಾರ್ ಧಾಮ್ ಯಾತ್ರೆ, ಗಂಗಾ ಪುಷ್ಕರಗಳು ಮತ್ತು ಇತರ ವಿಶೇಷ ಹಿಂದೂ ಕಾರ್ಯಕ್ರಮಗಳ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಏರ್ಪಡಿಸಿದೆ. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮುಸ್ಲಿಮರು ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ಚಲಿಸುವ ಸಾಮಾನ್ಯ ರೈಲನ್ನು ಅಲಂಕರಿಸುವುದನ್ನು ತೋರಿಸುವುದಿಲ್ಲ.

(A comparison of visuals from YouTube video and viral video)

ಒಟ್ಟಾರೆಯಾಗಿ ಹೇಳುವುದಾದರೆ, ಹಲ್ಕಟ್ಟಾ ಶರೀಫ್ ದರ್ಗಾಕ್ಕೆ ನಿಗದಿಪಡಿಸಲಾದ ವಿಶೇಷ ರೈಲನ್ನು ಮುಸ್ಲಿಮರು ಅಲಂಕರಿಸಿದ ವಿಡಿಯೋವನ್ನು ಹಂಚಿಕೊಂಡು ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ರೈಲನ್ನು ಮುಸ್ಲಿಮರು ಅಲಂಕರಿಸಿದ್ದು ಬಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಂಚಿಕೊಳ್ಳಲಾಗಿದೆ.

ಭಾರತೀಯ ರೈಲ್ವೆ ಇಲಾಖೆಯು ವಿಷೇಷ ಸಂದರ್ಭದಲ್ಲಿ ಇಂತಹ ವಿಶೇಷ ರೈಲು ಸೇವೆಗಳನ್ನು ನಿಯೋಜಿಸುವ ಪದ್ದತಿಯನ್ನು ಅನುಸರಿಸುತ್ತಾ ಬಂದಿದೆ. ಅದನ್ನೆ ಕೆಳಗಿನ ವಿಡಿಯೋದಲ್ಲಿ ಗಮನಿಸಬಹುದು.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಣಿಪುರಕ್ಕೆ ಹೋದ ಬಿಜೆಪಿ ನಾಯಕರಿಗೆ ಸ್ಥಳಿಯರಿಂದ ಹೊಡೆತ ಬಿದ್ದದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights