ಟಿ-20 ಇತಿಹಾಸದಲ್ಲಿ ದಾಖಲೆ ಬರೆದ ಗೇಲ್ ಮೇಲೆ ಐಪಿಎಲ್ ನೀತಿ ಉಲ್ಲಂಘನೆಯಿಂದಾಗಿ ದಂಡ!
ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯದಲ್ಲಿ ಕಿಂಗ್ಸ್ 11 ಪಂಜಾಬ್ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.
8 ಸಿಕ್ಸರ್, 6 ಫೋರ್ಸ್ ಬಾರಿಸಿ ಶತಕದ ಸಮೀಪದಲ್ಲಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, 19,4ನೇ ಓವರ್ ನಲ್ಲಿ ಜೋಫ್ರಾ ಆರ್ಚರ್ ಎಸೆತಕ್ಕೆ ಬೌಲ್ಡ್ ಆದರು. ಶತಕದ ಸಮೀಪದಲ್ಲಿ ಔಟಾಗಿದ್ದಕ್ಕೆ ಹತಾಶೆಗೊಂಡ ಗೇಲ್, ಬ್ಯಾಟನ್ನು ನೆಲಕ್ಕೆ ಎಸೆದು ಬೇಸರ ತೋರಿಸಿಕೊಂಡಿದ್ದರು. ಗೇಲ್ ವರ್ತನೆ ಐಪಿಎಲ್ ನೀತಿ ಉಲ್ಲಂಘಿಸಿದಂತಾಗಿದೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ. ನಿಯಮ 1ರ ಪ್ರಕಾರ ಅಂಪೈರ್ ತೀರ್ಮಾನವೇ ಅಂತಿಮ ಮತ್ತು ಅದಕ್ಕೆ ಬದ್ಧರಾಗಿರಬೇಕು ಎಂದು ಐಪಿಎಲ್ ಹೇಳಿದೆ.
https://twitter.com/IPL/status/1322191922182541313?ref_src=twsrc%5Etfw%7Ctwcamp%5Etweetembed%7Ctwterm%5E1322191922182541313%7Ctwgr%5Eshare_3&ref_url=https%3A%2F%2Fpublictv.in%2Fchris-gayle-set-a-new-record-in-t20
ಹೌದು… ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟ್ ಮಾಡಿದ್ದು ಕ್ರಿಸ್ ಗೇಲ್ ಅವರ ಅಬ್ಬರದ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡಕ್ಕೆ 189 ರನ್ ಗಳ ಗುರಿಯನ್ನು ನೀಡಿತ್ತು. ಪಂಜಾಬ್ 20 ಓವರ್ ಗಳಲ್ಲಿ 4 ವಿಕೆಟ್ ಗೆ 185 ರನ್ ಗಳಿಸಿತ್ತು. ಕ್ರಿಸ್ ಗೇಲ್ ಈ ಪಂದ್ಯದ ಮೂಲಕ ಟಿ-20ಯಲ್ಲಿ ಮೊದಲ ಬಾರಿಗೆ 1 ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ. ಇಂದು ಅವರು ಒಟ್ಟೂ ಎಂಟು ಸಿಕ್ಸರ್ ಸಿಡಿಸಿದ್ದರು. ಗೇಲ್ 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್ ಸೇರಿ 99 ರನ್ ಗಳಿಸಿದ್ದರು.