ಭಾರತ VS ಇಂಗ್ಲೆಂಡ್‌ ಮೊದಲ ಟೆಸ್ಟ್‌: ಟಾಸ್‌ ಗೆದ್ದ ಇಂಗ್ಲೆಂಡ್‌; 67 ರನ್‌ಗೆ 2 ವಿಕೆಟ್‌ ಪತನ!

ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್‌ ತಂಡಗಳ‌ ನಡುವೆ ಇಂದು ಮೊದಲ ಕ್ರಿಕೆಟ್‌ ಟೆಸ್ಟ್‌ ಆರಂಭವಾಗಿದ್ದು, ಇಂಗ್ಲೆಂಡ್‌ ಟಾಸ್‌ ಗೆದ್ದು ಬ್ಯಾಂಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ, ಉಭಯ ತಂಡಗಳು ಉತ್ತಮ ಆರಂಭವನ್ನು ಪ್ರದರ್ಶಿಸುತ್ತಿವೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಆರಂಭವಾಗಿದೆ.  ಇಂಗ್ಲೆಂಡ್ ತಂಡದ ರೋನಿ ಬರ್ನ್ಸ್ ಮತ್ತು ಡೊಮಿನಿಕ್ ಸಿಬ್ಲೆ ಫೇಸ್‌ ಬ್ಯಾಟ್ಸ್‌ಮನ್‌ಗಳಾಗಿ ಸ್ಕ್ರೀಸ್‌ಗೆ ಇಳಿದಿದ್ದು, ಜೊತೆಯಾಟದೊಂದಿಗೆ ಈಗಾಗಲೇ ಅರ್ಧ ಶತಕ ಬಾರಿಸಿದ್ದಾರೆ.

ತಂಡದ ಮೊತ್ತ 63 ರನ್ ಗಳಾಗಿದ್ದ ವೇಳೆ 33 ರನ್ ಗಳಿಸಿದ್ದ ರೋನಿ ಬರ್ನ್ಸ್ ಅಶ್ವಿನ್ ಬೌಲಿಂಗ್ ನಲ್ಲಿ ಪಂತ್ ಗೆ ಕ್ಯಾಚ್ ನೀಡಿ ಔಟಾದರು. ಪ್ರಸ್ತುತ ಡೇನಿಯಲ್ ಲಾರೆನ್ಸ್ ಕ್ರೀಸ್ ಗೆ ಆಗಮಿಸಿದದ್ದರು. ಅವರು ಒಂದೂ ರನ್‌ಗಳಿಸದೇ ಎಲ್‌ಬಿಡಬ್ಲ್ಯೂ ಕೊಟ್ಟು ಓಟ್‌ ಆಗಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. 26 ರನ್ ಗಳಿಸಿರುವ ಡೊಮಿನಿಕ್ ಸಿಬ್ಲೆ ಮತ್ತು ಈಗಷ್ಟೇ ಇನ್ನಿಂಗ್ಸ್ ಆರಂಭಿಸಿರುವ ಜೋ ರೂಟ್‌ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಬಾಲ್ಯದಲ್ಲಿ ಕೈಗೊಂಬೆ ಆಟ ನೋಡಿರಲಿಲ್ಲ; ಈಗ ನೋಡುತ್ತಿದ್ದೇನೆ: ಕ್ರಿಕೆಟಿಗ ಮನೋಜ್ ತಿವಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights