ಫ್ಯಾಕ್ಟ್‌ಚೆಕ್ : ತಂದೆ-ಮಗಳು ಜೊತೆಯಲ್ಲಿ ಹಾಡುತ್ತಿರುವ ವಿಡಿಯೋವನ್ನು ಕುಕಿ ಮತ್ತು ಮೈತೇಯಿಗಳದ್ದು ಎಂದು ತಪ್ಪಾಗಿ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆ ಮತ್ತು ಪುರುಷನೊಬ್ಬ ಹಾಡುತ್ತಿರುವ ವಿಡಿಯೋವೊಂದು ಪ್ರಸಾರವಾಗುತ್ತಿದ್ದು,  ಸೋಷಿಯಲ್ ಮೀಡಿಯಾದಲ್ಲಿ ಮಣಿಪುರದ ಮೈತಿ ಕುಕಿ ಸಮುದಾಯದವರು ಒಟ್ಟಿಗೆ ಸೇರಿ ಹಾಡುತ್ತಿರುವ ದೃಶ್ಯ ಎಂಬ ಪ್ರತಿಪಾದನೆಯೊಂದಿಗೆ ವೈರಲ್ ಆಗುತ್ತಿದೆ.

https://twitter.com/pbhushan1/status/1688010408488292352

ಎಷ್ಟು ಆಹ್ಲಾದಕರ ಹಾಗೂ ಸುಮಧುರವಾಗಿದೆ. ನಾವು ಮೊದಲು ಮನುಷ್ಯರು. ಬಾಕಿದ್ದೆಲ್ಲ ಕಾಲ್ಪನಿಕ. ಒಬ್ಬರು ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಇನ್ನೊಬ್ಬರು ಮೈತೇಯಿ ಸಮುದಾಯಕ್ಕೆ ಸೇರಿದವರು. ಇದು ವೈವಿಧ್ಯ ಹಾಗೂ ಪ್ರೀತಿಯ ಸೌಂದರ್ಯ’ ಎಂಬ ಹೇಳಿಕೆಯೊಂದಿಗೆ ಖ್ಯಾತ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್‌ ಅವರು ಆ. 6ರಂದು ತಮ್ಮ ಟ್ವಿಟರ್ ಮೂಲಕ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಪುರುಷ ಹಾಗೂ ಮಹಿಳೆಯೊಬ್ಬರು ಹಿಂದಿ ಚಿತ್ರಗೀತೆಯೊಂದನ್ನು ಹಾಡಿರುವ ವಿಡಿಯೊ ಇದಾಗಿದ್ದು, ಪ್ರಶಾಂತ್‌ ಅವರು ಈ ವಿಡಿಯೊ ಜತೆಗೆ ಮೇಲಿನ ಬರಹವನ್ನು ಪೋಸ್ಟ್‌ ಮಾಡಿದ್ದರು. ಈ ವಿಡಿಯೊವನ್ನು 3.9 ಲಕ್ಷ ಜನರು ವೀಕ್ಷಿಸಿದ್ದರು ಹಾಗೂ ವಿಡಿಯೊಕ್ಕೆ 11 ಸಾವಿರ ಲೈಕ್ಸ್‌ ದೊರೆತಿತ್ತು.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನಲೆಯಲ್ಲಿ ಈ ಪೋಸ್ಟ್‌ಅನ್ನು ಮಾಡಲಾಗಿದ್ದು, ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೇ 25ರಂದು ಈ ವಿಡಿಯೊ ಮೊದಲ ಬಾರಿಗೆ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದೆ.

ಇದೇ ವಿಡಿಯೊ ಟ್ವಿಟರ್‌ನಲ್ಲೂ ಇದ್ದು, ಇದನ್ನು ಶೆಕಿನಾ ಮುಖಿಯಾ ಎಂಬವರು ಅಪ್‌ಲೋಡ್‌ ಮಾಡಿದ್ದಾರೆ. ‘ನಾನು ಹಾಗೂ ನನ್ನ ಅ‌ಪ್ಪ ಈ ಸುಂದರ ಹಾಡನ್ನು ಹಾಡಲು ಯತ್ನಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಪ್ರಶಾಂತ್‌ ಭೂಷಣ್‌ ಅವರ ಪೋಸ್ಟ್‌ ಅನ್ನು ತಮ್ಮ ಪೋಸ್ಟ್‌ನೊಂದಿಗೆ ಲಗತ್ತಿಸಿ, ಶೆಕಿನಾ ಅವರು ಸ್ಪಷ್ಟನೆ ನೀಡಿದ್ದು, ನಮಗೂ ಮಣಿಪುರಕ್ಕೂ ಯಾವುದೇ ಸಂಬಂಧವಿಲ್ಲ ‘ನಾವು ಉತ್ತರಾಖಂಡದವರು’  ಎಂದು ಶೆಕಿನಾ ಅವರ ತಂದೆ ವಿಕಾಸ್‌ ಮುಖಿಯಾ ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೊದಲ್ಲಿ ಇರುವವರು ಮಣಿಪುರದವರು ಅಲ್ಲ. ಬದಲಿಗೆ ಉತ್ತರಾಖಂಡದ ತಂದೆ–ಮಗಳ ಜೋಡಿ ಎಂದು ಬೂಮ್ ವರದಿ ಮಾಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಫ್ಯಾಕ್ಟ್‌ಚೆಕ್ : ಫ್ಯಾಕ್ಟ್‌ಚೆಕ್ : ನೆಹರು ತಾಯಿ ಮುಸ್ಲಿಂ ಎಂದು ಸುಳ್ಳು ಸುದ್ದಿ ಹಂಚಿಕೊಂಡ ಬಿಜೆಪಿ ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights