ಫ್ಯಾಕ್ಟ್‌ಚೆಕ್ : ನೆಹರು ತಾಯಿ ಮುಸ್ಲಿಂ ಎಂದು ಸುಳ್ಳು ಸುದ್ದಿ ಹಂಚಿಕೊಂಡ ಬಿಜೆಪಿ ಬೆಂಬಲಿಗರು

ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು ಜವಾಹರಲಾಲ್ ನೆಹರು ಮತ್ತು ಮಹಿಳೆಯೊಬ್ಬರು ಫೋಟೊವನ್ನು ಹಂಚಿಕೊಂಡು. ಯುವ ನೆಹರು ತನ್ನ ಮುಸ್ಲಿಂ ತಾಯಿಯೊಂದಿಗೆ ಇರುವ ಚಿತ್ರ ಎಂಬ ಪ್ರತಿಪಾದನೆಯೊಂದಿಗೆ ಫೋಟೊವನ್ನು ಪ್ರಸಾರಮಾಡಲಾಗಿದೆ.

Image

ಯುವಕ ಜೆ.ಎಲ್‌. ನೆಹರೂ ಅವರು ತಮ್ಮ ತಾಯಿ ಥುಸ್ಸು ರೆಹಮಾನ್‌ ಭಾಯಿ ಅವರೊಂದಿಗೆ ಇದ್ದಾರೆ ಎನ್ನಲಾದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆ ಆಗುತ್ತಿದೆ. ‘ನೆಹರೂ ಅವರ ತಂದೆ ಮೋತಿಲಾಲ್‌ ನೆಹರೂ ಅವರಿಗೆ ಒಟ್ಟು ಐವರು ಹೆಂಡತಿಯರಿದ್ದರು. ಅವರಲ್ಲಿ ಒಬ್ಬರು ಮುಸ್ಲಿಂ ಮಹಿಳೆ ರೆಹಮಾನ್‌ ಭಾಯಿ. ಇವರು ಮೋತಿಲಾಲ್‌ ಅವರ ಎರಡನೇ ಪತ್ನಿ’ ಎಂದೂ ಹೇಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಫೋಟೊವ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೋತಿಲಾಲ್ ಅವರ ವಂಶವೃಕ್ಷವನ್ನು ದಿ ಕ್ವಿಂಟ್ ವರದಿಯೊದರಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ.

ವರದಿಯ ಪ್ರಕಾರ ಮೋತಿಲಾಲ್‌ ಹಾಗೂ ಅವರ ಎರಡನೇ ಪತ್ನಿ ಸ್ವರೂಪ್‌ ರಾಣಿ (ಥುಸ್ಸು, ಕಾಶ್ಮೀರಿ ಪಂಡಿತರ ಒಂದು ಪಂಗಡ) ಅವರ ಮೊದಲನೇ ಮಗ ಜವಾಹರಲಾಲ ನೆಹರೂ. ದಂಪತಿಗೆ ನೆಹರೂ ಅವರೂ ಸೇರಿ ವಿಜಯಲಕ್ಷ್ಮಿ ಪಂಡಿತ್‌ ಮತ್ತು ಕೃಷ್ಣಾ ನೆಹರೂ ಎಂಬ ಮೂವರು ಮಕ್ಕಳಿದ್ದಾರೆ. ಮಗುವಿಗೆ ಜನ್ಮ ನೀಡುವ ವೇಳೆಯಲ್ಲಿ ಮಗು ಹಾಗೂ ಮೋತಿಲಾಲ್‌ ಅವರ ಮೊದಲ ಪತ್ನಿ ಸಾವನ್ನಪ್ಪುತ್ತಾರೆ. ಆಗ ಸ್ವರೂಪ್‌ ರಾಣಿ ಅವರನ್ನು ಮೋತಿಲಾಲ್‌ ಅವರು ಮದುವೆ ಆಗುತ್ತಾರೆ. ಬಿ. ಆರ್‌. ನಂದಾ ಅವರು ಬರೆದ ‘ದಿ ನೆಹರೂಸ್‌: ಮೋತಿಲಾಲ್‌ ಅಂಡ್‌ ಜವಾಹರ್‌ಲಾಲ್‌’ ಎಂಬ ಪುಸ್ತಕದಲ್ಲಿ ಈ ಮಾಹಿತಿ ಇದೆ.

ನೆಹರೂ ಅವರು ತಮ್ಮ ಆತ್ಮಕಥೆಯಲ್ಲಿ ತಮ್ಮ ಪೂರ್ವಜರ ಬಗ್ಗೆ ಇದೇ ರೀತಿಯ ಕಥೆಯನ್ನು ವಿವರಿಸಿದರು ಮತ್ತು ಅವರ ಕುಟುಂಬವು ‘ನೆಹರು’ ಎಂದು ಹೇಗೆ ಕರೆಯಲ್ಪಟ್ಟಿತು ಎಂಬುದನ್ನು ವಿವರಿಸಿದರು.

ಪತ್ರಕರ್ತೆ ಸಾಗರಿಕ ಘೋಷ್‌ ಅವರು ‘ಇಂದಿರಾ: ಇಂಡಿಯಾಸ್‌ ಮೋಸ್ಟ್‌ ಪವರ್‌ಫುಲ್‌ ಪ್ರೈಮ್‌ ಮಿನಿಸ್ಟರ್‌’ ಎಂಬ ಪುಸ್ತಕ ಬರೆದಿದ್ದಾರೆ. ಮೋತಿಲಾಲ್‌ ಅವರಿಗೆ ಐವರು ಪತ್ನಿಯರಿದ್ದರು ಎಂಬುದನ್ನು ಇವರೂ ನಿರಾಕರಿಸುತ್ತಾರೆ. ಆದ್ದರಿಂದ, ನೆಹರೂ ಅವರು ತಮ್ಮ ತಾಯಿ ಸ್ವರೂಪ್‌ ರಾಣಿ ಅವರೊಂದಿಗೆ ಇರುವ ಫೋಟೊವನ್ನು, ನೆಹರು ಅವರು ತಮ್ಮ ತಾಯಿ ಥುಸ್ಸು ರೆಹಮಾನ್‌ ಭಾಯಿ ಅವರೊಂದಿಗೆ ಇರುವ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನೆಹರು ಕುಟುಂಬಕ್ಕೆ ಸಂಬಂಧಿಸಿದಂತೆ ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯ ಸಿದ್ದಂತದ ಪ್ರತಿಪಾದಕರು ಇದೇ ರೀತಿಯ ಸುಳ್ಳುಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಆದ್ದರಿಂದ ಇಂತಹ ಪೋಸ್ಟ್‌ಗಳ ಬಗ್ಗೆ ಎಚ್ಚರವಿರಲಿ.

ಕೃಪೆ: ಬೂಮ್ ಮತ್ತು ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಣಿಪುರಕ್ಕೆ ಹೋದ ಬಿಜೆಪಿ ನಾಯಕರಿಗೆ ಸ್ಥಳಿಯರಿಂದ ಹೊಡೆತ ಬಿದ್ದದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights