ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದು ಸಚಿವೆ ಸ್ಮೃತಿ ಇರಾನಿಗಲ್ಲ! ಮತ್ತ್ಯಾರಿಗೆ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನರ್ಹತೆ ರದ್ದಾದ ಬಳಿಕ ಸಂಸತ್‌ನಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ್ದು, ಇದೇ ವೇಳೆ ಅವರು ಸ್ಮೃತಿ ಇರಾನಿ ಅವರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾಹುಲ್ ಗಾಂಧಿ ಅವರ ಭಾಷಣದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಭಾಷಣ ನಿಗದಿಯಾಗಿತ್ತು. ತಮ್ಮ ಭಾಷಣ ಮುಗಿಸಿ ಲೋಕಸಭೆಯಿಂದ ಹೊರ ನಡೆಯುವ ಮುನ್ನ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ಅವರ ಕಡೆಗೆ ನೋಡುತ್ತಾ ‘ಫ್ಲೈಯಿಂಗ್ ಕಿಸ್’ ಕೊಟ್ಟರು ಎಂದು ಆರೋಪಿಸಲಾಗುತ್ತಿದೆ.
Absolutely shameful conduct by Rahul Gandhi, who blew a ‘flying kiss’ on his way out of the Parliament, gesturing towards a lady MP…
Absolutely sickening.
This is not the first time Rahul Gandhi has displayed such disgusting behaviour. Earlier he was seen winking and throwing… pic.twitter.com/bshrt8PxO3
— Harsh Chaturvedi BJP (@harshcha) August 9, 2023
“ಸಂಸತ್ತಿನಿಂದ ಹೊರ ಬರುವಾಗ ‘ಫ್ಲೈಯಿಂಗ್ ಕಿಸ್’ ನೀಡಿ, ಮಹಿಳಾ ಸಂಸದೆ ಕಡೆಗೆ ಸನ್ನೆ ಮಾಡಿದ ರಾಹುಲ್ ಗಾಂಧಿಯವರ ವರ್ತನೆ ಸಂಪೂರ್ಣ ನಾಚಿಕೆಗೇಡಿನ ಸಂಗತಿ. ರಾಹುಲ್ ಗಾಂಧಿ ಈ ರೀತಿ ಅಸಹ್ಯಕರ ವರ್ತನೆ ತೋರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಂಸತ್‌ನಲ್ಲಿ ಕಣ್ಣು ಹೊಡೆಯುತ್ತಾ ಸಂಸತ್‌ಗೆ ಅವಮಾನ ತೋರಿದ್ದರು. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರು ಎಷ್ಟು ಅಸುರಕ್ಷಿತರಾಗಿದ್ದರೆ ಎಂದರೆ, ರಾಹುಲ್ ಗಾಂಧಿ ಮಹಿಳೆಯರನ್ನು ಕಾಮದ ವಸ್ತುಗಳಂತೆ ಪರಿಗಣಿಸುತ್ತಾರೆ! ರಾಹುಲ್ ಮಹಿಳೆಯರನ್ನು ಅವಮಾನಿಸಿದ್ದಾರೆ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಸ್ಮೃತಿ ಇರಾನಿ ಆರೋಪ :
#WATCH | Union Minister and BJP MP Smriti Irani says, "I object to something. The one who was given the chance to speak before me displayed indecency before leaving. It is only a misogynistic man who can give a flying kiss to a Parliament which seats female members of Parliament.… pic.twitter.com/xjEePHKPKN
— ANI (@ANI) August 9, 2023
ಮಣಿಪುರ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಮೊದಲು ರಾಹುಲ್ ಗಾಂಧಿ ಮಾತನಾಡಿದರು. ತಮ್ಮ ಭಾಷಣದ ಬಳಿಕ ಬೇರೊಂದು ಕಾರ್ಯಕ್ರಮ ಇದ್ದ ಕಾರಣ ಅವರು ಲೋಕಸಭೆಯಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ಸ್ಮೃತಿ ಇರಾನಿ ಅವರು ಭಾಷಣ ಮಾಡಲು ಎದ್ದು ನಿಂತರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಆಡಳಿತ ಪಕ್ಷದ ಸದಸ್ಯರು ಕುಳಿತುಕೊಳ್ಳುವ ಮೇಜಿನತ್ತ ತಿರುಗಿ ಫ್ಲೈಯಿಂಗ್ ಕಿಸ್ ಮಾಡಿದರು. ಮಹಿಳಾ ಸಂಸದೆಯರ ಕಡೆ ತಿರುಗಿ ರಾಹುಲ್ ಗಾಂಧಿ ಅವರು ಅಸಭ್ಯ ವರ್ತನೆ ತೋರಿದ್ದಾರೆ ಎಂದು ಸ್ಮೃತಿ ಇರಾನಿ ಆರೋಪಿಸಿದ್ದರು.
ಮಹಿಳಾ ದ್ವೇಷದ ಮನೋಭಾವ ಹೊಂದಿರುವ ವ್ಯಕ್ತಿ ಮಾತ್ರ ಈ ರೀತಿ ಮಾಡಲು ಸಾಧ್ಯ ಎಂದ ಸ್ಮೃತಿ ಇರಾನಿ, ಲೋಕಸಭೆಯಲ್ಲಿ ನಾನು ಎಂದಿಗೂ ಇಂಥಾ ವರ್ತನೆಯನ್ನು ನೋಡಿರಲಿಲ್ಲ ಎಂದು ಹರಿಹಾಯ್ದರು. ಮಹಿಳೆಯ ಘನತೆಗೆ ಧಕ್ಕೆ ತರುವ ರೀತಿ ರಾಹುಲ್ ಗಾಂಧಿ ವರ್ತಿಸಿದ್ದಾರೆ ಅನ್ನೋದು ಸ್ಮೃತಿ ಇರಾನಿ ಅವರ ಆರೋಪ.

ಹಾಗಾಗಿ, ಸಂಸತ್‌ನಲ್ಲಿ ಅನುಚಿತ ವರ್ತನೆ ತೋರಿದ ರಾಹುಲ್ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶೋಭಾ ಕಂರದ್ಲಾಜೆ ಸೇರಿ 21 ಸಂಸದೆಯರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ. ಹಾಗಿದ್ದರೆ ಬಿಜೆಪಿ ಮಹಿಳಾ ಸಂಸದರು ಆರೋಪಿಸಿದಂತೆ ಸಂಸದ ರಾಹುಲ್ ಗಾಂಧಿ ಬಿಜೆಪಿ ಮಹಿಳಾ ಸಂಸಂದರನ್ನು ಟಾರ್ಗೆಟ್ ಮಾಡಿ ಪ್ಲೇನ್ ಕಿಸ್ ನೀಡಿದ್ದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಬಿಜೆಪಿ ಮಹಿಳಾ ಸಂಸದರು ಮಾಡುತ್ತಿರುವ ಆರೋಪವನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಸಂಸರ್ ಟಿವಿ ಯೂಟ್ಯೂಬ್‌ನಲ್ಲಿ ಪ್ರಸಾರವಾದ ರಾಹುಲಾ ಗಾಂಧಿ ಭಾಷಣದ ದೃಶ್ಯಗಳನ್ನು ಗಮನಿಸಿದಾಗ, ಬಿಜೆಪಿ ಮಹಿಳಾ ಸಂಸದರು ಆರೋಪಿಸಿರುವ ದೃಶ್ಯವು 36 ನಿಮಿಷ 58 ಸೆಕೆಂಡುಗಳ ಅವಧಿಯಲ್ಲಿ ಕಾಣಬಹುದು.
ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಂಸತ್‌ನಲ್ಲಿ ರಾಹುಲ್ ಗಾಂಧಿ ನಂತರ ಸ್ಮೃತಿ ಇರಾನಿ ಮಾತನಾಡುವ ಸರದಿ ಇರುತ್ತದೆ ಅದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾತನಾಡುವಾಗಲೇ ಮಧ್ಯ ಪ್ರವೇಶಿಸಲು ಮುಂದಾಗುತ್ತಾರೆ. ಅದೇ ಸಂದರ್ಭದಲ್ಲಿ ಭಾಷಣ ಮುಗಿಸಿದ ರಾಹುಲ್ ಸ್ಪೀಕರ್ ಕುಳಿತಿರುವ ದಿಕ್ಕಿನತ್ತ ಫ್ಲೈಯಿಂಗ್ ಕಿಸ್ ನೀಡುವಂತ ಸನ್ನೆ ಮಾಡುವುದನ್ನು ಕಾಣಬಹುದು.
ಕಾಂಗ್ರೆಸ್ ಸ್ಪಷ್ಟನೆ
ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ತಮ್ಮ ಭಾಷಣ ಮುಗಿಸಿದ ಬಳಿಕ ನಿರ್ಗಮಿಸುತ್ತಿದ್ದರು. ಈ ವೇಳೆ ಅವರು ತಾನು ಹೊರಡುತ್ತಿದ್ದೇನೆ ಎಂದು ಆ ರೀತಿ ಸಾಂಕೇತಿಕವಾಗಿ ಹೇಳಿದ್ದಾರೆ ಅಷ್ಟೇ ಎಂದಿದೆ. ರಾಹುಲ್ ಗಾಂಧಿ ಅವರು ಆಡಳಿತ ಪಕ್ಷದ ಸದಸ್ಯರು ಕುಳಿತುಕೊಳ್ಳುವ ಸಾಲಿನತ್ತ ತಮ್ಮ ಸಂಕೇತ ಮಾಡಿದ್ದಾರೆ. ಯಾವುದೇ ಮಹಿಳಾ ಸದಸ್ಯೆ ಅಥವಾ ಸಚಿವೆಯತ್ತ ಅವರು ಫ್ಲೈಯಿಂಗ್ ಕಿಸ್ ಮಾಡಿಲ್ಲ ಎಂದು ಕಾಂಗ್ರೆಸ್ ವಿವರಿಸಿದೆ.
ರಾಹುಲ್ ಗಾಂಧಿ ಅವರು ಎಲ್ಲರನ್ನೂ ತಮ್ಮ ಸಹೋದರರು ಹಾಗೂ ಸಹೋದರಿಯರು ಎಂದು ಭಾವಿಸುತ್ತಾರೆ. ಲೋಕಸಭೆಯಿಂದ ನಿರ್ಗಮಿಸುವ ವೇಳೆ ಅವರು ಸ್ನೇಹ ಪೂರ್ವಕವಾಗಿ ಫ್ಲೈಯಿಂಗ್ ಕಿಸ್ ಮಾಡಿದ್ದಾರೆ. ಯಾರೊಬ್ಬರನ್ನೂ ಗುರಿಯಾಗಿಸಿ ಅವರು ಫ್ಲೈಯಿಂಗ್ ಕಿಸ್ ಮಾಡಿಲ್ಲ. ಸಮಸ್ತ ಆಡಳಿತ ಪಕ್ಷದ ಮೇಜಿನತ್ತ ಅವರು ಈ ಸಾಂಕೇತಿಕವಾಗಿ ಫ್ಲೈಯಿಂಗ್ ಕಿಸ್ ಮಾಡಿದ್ದಾರೆ ಎಂದಿರುವ ಕಾಂಗ್ರೆಸ್ ನಾಯಕರು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಥವಾ ಯಾವುದೇ ಸಂಸದೆಯ ಕಡೆಗೆ ಬೊಟ್ಟು ಮಾಡಿ ಫ್ಲೈಯಿಂಗ್ ಕಿಸ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
‘ಮೊಹಬ್ಬತ್ ಕಿ ದುಕಾನ್’ ಎಂದು ರಾಹುಲ್ ಗಾಂಧಿ ನಡೆಯನ್ನು ಸಮರ್ಥಿಸಿದ ಶಿವಸೇನಾ ಸಂಸದೆ
”ಕೇಸರಿ ಪಕ್ಷಕ್ಕೆ ಪ್ರೀತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ, ಅದಕ್ಕೆ ದ್ವೇಷವೇ ತುಂಬಾ ಅಭ್ಯಾಸವಾಗಿದೆ” ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ ಬುಧವಾರ ಹೇಳಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ‘ಫ್ಲೈಯಿಂಗ್ ಕಿಸ್’ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಚತುರ್ವೇದಿ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
”ನಾನು ಸಂದರ್ಶಕರ ಗ್ಯಾಲರಿಯಲ್ಲಿದ್ದೆ … ರಾಹುಲ್ ಗಾಂಧಿ ಅವರು ಹೋಗುವಾಗ ನಾನು ನೋಡಿದೆ, ಅವರು ಪ್ರೀತಿಯ ಸೂಚಕವಾಗಿ ‘ಫ್ಲೈಯಿಂಗ್ ಕಿಸ್ ಮಾಡಿದರು. ಅವರು ಕೇವಲ ಮಹಿಳೆಯರಿಗೆ ಮಾತ್ರ ಮಾಡಲಿಲ್ಲ. ಅವರನ್ನು ಮೊಹಬ್ಬತ್ ಕಿ ದುಕಾನ್ ಎಂದು ಕರೆಯಲಾಗುತ್ತದೆ” ಎಂದು ಶಿವಸೇನಾ ಸಂಸದರು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಂಸತ್‌ನಲ್ಲಿ ರಾಹುಲ್ ಗಾಂಧಿ ಮಣಿಪುರದ ಹಿಂಸಾಚಾರ ವಿಚಾರವನ್ನು ಪ್ರಸ್ತಾಪಿಸಿ ಮಣಿಪುರ ಹಿಂಸಾಚಾರವನ್ನು ತಡೆಯಿವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತೀಕ್ಷವಾಗಿ ತರಾಟೆಗೆ ತೆಗೆದುಕೊಂಡ ನಂತರ ರಾಹುಲ್ ಗಾಂಧಿಯ ಪ್ರಶ್ನೆಗೆ ಉತ್ತರಿಸದೆ ಬಿಜೆಪಿ ರಾಹುಲ್ ಗಾಂಧಿ ಸ್ಪೀಕರ್ ಅವರನ್ನು ಉದ್ದೇಶಿಸಿ ಸಂಸತ್ ಗೆ ನೀಡಿದ ಸನ್ನೆಯನ್ನು ತಪ್ಪಾಗಿ ಅರ್ಥೈಸಿ ಸುಳ್ಳು ಆರೋಪ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮಗುವಿನ ಹುಟ್ಟುಹಬ್ಬಕ್ಕೆ ದೀಪ ಬೆಳಗಿಸಿದ ಕಾರಣಕ್ಕೆ ಮುಸ್ಲಿಂ ಗಂಡನಿಂದ, ಹಿಂದೂ ಪತ್ನಿ ಮೇಲೆ ಹಲ್ಲೆ ನಡೆಯಿತೇ?

