ಅಕ್ಟೋಬರ್ 11 ರವರೆಗೆ ಆರ್ಯನ್ ಖಾನ್ ನ ಕಸ್ಟಡಿಗೆ ಕೋರಿದ NCB!
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಭಾಗಿಯಾಗಿದ್ದ ಮುಂಬೈ ಹಡಗಿನ ರೇವ್ ಪಾರ್ಟಿ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ವೇಳೆ ಡ್ರಗ್ಸ್ ಪತ್ತೆಯಾಗಿದೆ. ಇದರ ಬೆನ್ನಲ್ಲೆ ಎನ್ ಸಿಬಿ ಅಧಿಕಾರಿಗಳು ಅಕ್ಟೋಬರ್ 11 ರವರೆಗೆ ಆರ್ಯನ್ ಖಾನ್ ನನ್ನು ಕಸ್ಟಡಿಗೆ ನೀಡುವಂತೆ ಕೋರಿದೆ. ಜೊತೆಗೆ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆಗೆ ಸಂಬಂಧಿಸಿದ ಪುರಾವೆಗಳು ಸಿಕ್ಕಿವೆ ಎಂದು ಎನ್ ಸಿಬಿ ಹೇಳಿದೆ. ಮಾತ್ರವಲ್ಲದೆ ಆರ್ಯನ್ ಖಾನ್ ಫೋನಿನಲ್ಲಿ ಚಿತ್ರಗಳ ರೂಪದಲ್ಲಿ ಆಘಾತಕಾರಿ ಅಪರಾಧಗಳನ್ನು ಪತ್ತೆ ಮಾಡಿದೆ ಎಂದು ಹೇಳಿದೆ. ಇದೆಲ್ಲದರ ತನಿಖೆಗೆ ಅನುಕೂಲವಾಗಲು ಅಕ್ಟೋಬರ್ 11 ರವರೆಗೆ ಆರ್ಯನ್ ಖಾನ್ ನನ್ನು ಕಸ್ಟಡಿಗೆ ನೀಡುವಂತೆ ಎನ್ ಸಿಬಿ ಕೋರಿದೆ.
ಹೀಗಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಅಕ್ಟೋಬರ್ 11 ರವರೆಗೆ ವಶಕ್ಕೆ ಪಡೆಯುವಂತೆ ಕೋರಿತ್ತು.
ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಅ.2ರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಬಾಲಿವುಡ್ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಭಾಗಿ ಆಗಿದ್ದರು. ಹಾಗಾಗಿ ಅವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಶಾರುಖ್ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.
ಇದರ ಜೊತೆಗೆ ಹಲವು ವರ್ಷಗಳ ಹಿಂದೆಯೇ ಶಾರುಖ್ ಖಾನ್ ಅವರು ಮಗನ ಬಗ್ಗೆ ಮಾತನಾಡಿದ್ದರು. ತಮ್ಮ ಪುತ್ರ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಬೇಕಾದರೂ ಹೋಗಲಿ ಎಂದು ಅವರು ಹೇಳಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
https://twitter.com/ShefVaidya/status/1444554450190815235?ref_src=twsrc%5Etfw%7Ctwcamp%5Etweetembed%7Ctwterm%5E1444554450190815235%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fentertainment%2Fbollywood%2Fwhen-shah-rukh-khan-said-aryan-khan-can-do-drugs-old-video-goes-viral-mdn-278963.html
ಅಂದಹಾಗೆ, ಈ ಎಲ್ಲ ಮಾತುಗಳನ್ನು ಶಾರುಖ್ ಖಾನ್ ಅವರು ತಮಾಷೆಗೆ ಹೇಳಿರಬಹುದು. ಆದರೆ ಅದೆಲ್ಲವೂ ಇಂದು ನಿಜವಾಗಿದೆ. ಹಾಗಾಗಿ ಶಾರುಖ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಈಗ ಆರ್ಯನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.