ಟಿಕೆಟ್‌ ಇಲ್ಲದೆ ರೈಲಿನಲ್ಲಿ ಹಣ್ಣು ಮಾರುತ್ತಿದ್ದ ಕರ್ನಾಟಕದ ಮಹಿಳೆ ಮೇಲೆ RPF ಪೊಲೀಸರಿಂದ ಹಲ್ಲೆ!

ರೈಲಿನಲ್ಲಿ ಹಣ್ಣು ಮಾರುತ್ತಿದ್ದ ಕರ್ನಾಟಕದ ಮಹಿಳೆ ಟಿಕೆಟ್‌ ಇಲ್ಲದೆ ಪ್ರಯಾಣ ಮಾಡಿದ್ದಕ್ಕಾಗಿ ಆಕೆಗೆ ಆರ್‌ಪಿಎಫ್ ಕಾನ್ಸ್‌ಸ್ಟೇಬಲ್‌ ಒಬ್ಬರು ಥಳಿಸಿದ್ದಾರೆ. ಘಟನೆಯಲ್ಲಿ ಪೆಟ್ಟುತಿಂದ ಮಹಿಳೆ ಇಂಜಿಯರ್‌ ಕೂಡ ಆಗಿದ್ದು, ಆಕೆ ಒಡಿಶಾದ ರೂರ್ಕೆಲಾ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆ ದಾಖಲಿಸಿದ ಎಫ್‌ಐಆರ್ ಪ್ರಕಾರ, ಹೌರಾದಿಂದ ಕರ್ನಾಟಕಕ್ಕೆ ಬರುತ್ತಿದ್ದ ಗೀತಾಂಜಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಹಿಳೆ ಹಣ್ಣು ಮಾರುತ್ತಿದ್ದರು. ತನ್ನ ಬಳಿ ಟಿಕೆಟ್ ಇಲ್ಲ ಎಂದು ಹೇಳಿದಾಗ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್‌ಸ್ಟೇಬಲ್ ಆಕೆಯ ತಲೆಯ ಮೇಲೆ ಲಾಠಿಯಿಂದ ಹೊಡೆದಿದ್ದಾನೆ. ದಾಳಿಯಿಂದಾಗಿ ಆಕೆಯ ತಲೆಗೆ ಗಾಯಗಳಾಗಿವೆ.

“ಪನ್ಪೋಷ್ ರೈಲ್ವೇ ನಿಲ್ದಾಣದಲ್ಲಿ, ಆರ್‌ಪಿಎಫ್ ಕಾನ್‌ಸ್ಟೇಬಲ್ ನನಗೆ ಟಿಕೆಟ್ ತೋರಿಸುವಂತೆ ಕೇಳಿದರು. ನನ್ನ ಬಳಿ ಹಣವಿಲ್ಲದ ಕಾರಣ ನನ್ನ ಬಳಿ ಟಿಕೆಟ್ ಇಲ್ಲ ಎಂದು ಹೇಳಿದೆ. ಈ ಸಮಯದಲ್ಲಿ, ಅವರು ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ಅಲ್ಲದೆ, ಇದ್ದಕ್ಕಿದ್ದಂತೆ ನನ್ನ ತಲೆಯ ಮೇಲೆ ತನ್ನ ಲಾಠಿಯಿಂದ ಹೊಡೆಯಲು ಪ್ರಾರಂಭಿಸಿದರು” ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

“ಟಿಟಿಇ ನನ್ನ ಮೇಲೆ ದಂಡ ವಿಧಿಸಿದ್ದರೆ, ನಾನು ದೂರುತ್ತಿರಲಿಲ್ಲ. ಆದರೆ, ಆರ್‌ಪಿಎಫ್ ಕಾನ್‌ಸ್ಟೇಬಲ್ ನನ್ನನ್ನು ನಿಂದಿಸಿದರು ಮತ್ತು ನಿರ್ದಯವಾಗಿ ಹೊಡೆದರು. ನನ್ನನ್ನು ನಿಂದಿಸಲು ಮತ್ತು ಹೊಡೆಯಲು ಅವರಿಗೆ ಯಾವ ಅಧಿಕಾರವಿದೆ? ಎಂದು ಆಕೆ ಪ್ರಶ್ನಿಸಿದ್ದಾರೆ.

ಮಹಿಳೆ ತಾನು ಧಾರವಾಡದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಆದಾಗ್ಯೂ, ಆಕೆಗೆ ತನ್ನ ಓದಿಗೆ ತಕ್ಕಂತೆ ಸೂಕ್ತ ಕೆಲಸ ಸಿಗಲಿಲ್ಲ.  ಆದ್ದರಿಂದ ರೈಲಿನಲ್ಲಿ ಹಣ್ಣುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ರೂರ್ಕೆಲಾದ ಜಿಆರ್‌ಪಿಯ ಇನ್‌ಸ್ಪೆಕ್ಟರ್-ಇನ್-ಚಾರ್ಜ್ ರಂಜನ್ ಪಟ್ನಾಯಕ್ ಅವರು ಮಹಿಳೆಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಆರ್‌ಪಿಎಫ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಬಡತನ, ನಿರುದ್ಯೋಗ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 850 ಜನರು ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights