ಜಪಾನ್‌ನಲ್ಲಿ ಭಾರಿ ಹಿಮಪಾತ : ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ 1,000ಕ್ಕೂ ಹೆಚ್ಚು ವಾಹನಗಳು!

ಹಿಮಪಾತ… ಕಣ್ಣು ಹಾಹಿಸಿ ನೋಡಿದಲ್ಲೆಲ್ಲ ಹಿಮ. ಮನೆಗಳು, ವಾಹನಗಳು, ಮರ-ಗಿಡಗಳು ಎಲ್ಲವೂ ಹಿಮದಿಂದಲೇ ನಿರ್ಮಾಣವಾದಂತೆ ಕಾಣಿಸುವತ್ತಿವೆ. ಇಂಥಹ ದೃಶ್ಯಗಳು ಕಂಡುಬಂದಿದ್ದು ಜಪಾನ್ ನಲ್ಲಿ.

ಹೌದು… ಬುಧವಾರದಿಂದ ಜಪಾನ್‌ನಲ್ಲಿ ಭಾರಿ ಹಿಮ ಬೀಳುತ್ತಿದ್ದು ಇದರ ಪರಿಣಾಮವಾಗಿ 1,000 ಕ್ಕೂ ಹೆಚ್ಚು ವಾಹನಗಳು ಸಿಕ್ಕಿಬಿದ್ದಿವೆ. ಈ ಬಾರಿ ಜಪಾನ ದಾಖಲೆಯ ಹಿಮಪಾತವನ್ನು ಹೊಂದಿದ್ದು  ಕೆಲವು ಭಾಗಗಳನ್ನು ಹಿಮದ ಪೂರ್ತಿಯಾಗಿ ಆವರಿಸಿಬಿಟ್ಟಿದೆ. ವಾಹನ ಸವಾರರು ಗುರುವಾರ ರಾತ್ರಿಯಿಂದ ತಮ್ಮ ಕಾರುಗಳಲ್ಲಿ ಕಾಲ ಕಳೆಯುವಂತಾಗಿದೆ.

ಈ ಹಿಮಪಾತ ಜಪಾನ ನಿಗಾಟಾ ಮತ್ತು ಗುನ್ಮಾ ಪ್ರಾಂತ್ಯಗಳ ಮೇಲೆ ಕೇಂದ್ರೀಕೃತವಾಗಿದ್ದು, ಇಲ್ಲಿ ಮೂರು ದಿನಗಳಲ್ಲಿ ಸುಮಾರು 2 ಮೀಟರ್ (6.6 ಅಡಿ) ಹಿಮಪಾತ ದಾಖಲಾಗಿದೆ. ಜಪಾನ್ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಭಾರೀ ಹಿಮಪಾತದಿಂದ  10,000 ಕ್ಕೂ ಹೆಚ್ಚು ಮನೆಗಳನ್ನು ವಿದ್ಯುತ್ ಇಲ್ಲದೆ ಕಾಲಕಳೆಯುವಂತಾಗಿದೆ.

ಟೋಕಿಯೊವನ್ನು ಜಪಾನ್ ಸಮುದ್ರದ ತೀರದಲ್ಲಿರುವ ನಿಗಾಟಾದೊಂದಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಜನರು ಬುಧವಾರ ಸಂಜೆ ಹಿಮದಿಂದ ತಮ್ಮ ಮಾರ್ಗದಲ್ಲೇ ಕಾಲಕಳೆಯುತ್ತಿದ್ದಾರೆ. 16.5 ಕಿ.ಮೀ. ದೂರದವರೆಗೂ ವಾಹನಗಳು ನಿಂತುಕೊಂಡಿವೆ.

ನಿಗಾಟಾ ಪ್ರಾಂತ್ಯದ ಬೀದಿಗಳಿಂದ ಜನರು ಹಿಮವನ್ನು ತೆರವುಗೊಳಿಸುವ ಚಿತ್ರಗಳು ಮತ್ತು ಹಿಮದಿಂದ ಆವೃತವಾದ ಕನೆಟ್ಸು ಎಕ್ಸ್‌ಪ್ರೆಸ್‌ವೇಯಲ್ಲಿ ಸಿಲುಕಿರುವ ವಾಹನಗಳ ಫೋಟೋಗಳು ವೈರಲ್ ಆಗಿದ್ದು ಜಪಾನ್‌ನ ಪರಿಸ್ಥಿತಿ ತೋರಿಸುತ್ತಿದೆ.

ಹತ್ತಿರದ ಜೋಶಿನೆಟ್ಸು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ಟ್ರಾಫಿಕ್ ಜಾಮ್ ಸಂಭವಿಸಿದ್ದು, 300 ವಾಹನಗಳು ಸಿಕ್ಕಿಬಿದ್ದಿವೆ. ಜಪಾನ್‌ನ ಹವಾಮಾನ ಸಂಸ್ಥೆ ಪ್ರಕಾರ, ಈ ಪ್ರದೇಶದಲ್ಲಿ ಶುಕ್ರವಾರದವರೆಗೆ ಭಾರೀ ಹಿಮ ಬೀಳುತ್ತಲೇ ಇರುತ್ತದೆ. ಹೆಪ್ಪುಗಟ್ಟಿದ ರಸ್ತೆಗಳು ಮತ್ತು ಹಿಮಪಾತದ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights