ಕೊರೊನಾ ಉಲ್ಬಣ: ನಾಗ್ಪುರದಲ್ಲಿ ಮಾರ್ಚ್15 ರಿಂದ 21 ರವರೆಗೆ “ಲಾಕ್‌ಡೌನ್‌” ಜಾರಿ!‌

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಮಾರ್ಚ್ 15 ರಿಂದ 21 ರವರೆಗೆ “ಕಟ್ಟುನಿಟ್ಟಾದ ಲಾಕ್ ಡೌನ್” ಜಾರಿಗೊಳಿಸಲಾಗುವುದು ಎಂದು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ನಿತಿನ್ ರಾವತ್‌ ಗುರುವಾರ ಪ್ರಕಟಿಸಿದ್ದಾರೆ.

ಕಳೆದ ತಿಂಗಳಿನಿಂದ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಜಿಲ್ಲಾ ಅಧಿಕಾರಿಗಳ ಜೊತೆ ನಿತಿನ್‌ ರಾವತ್‌ ಅವರು ಸಭೆ ನಡೆಸಿದ್ದು, ಮಾರ್ಚ್ 15 ರಿಂದ 21 ರವರೆಗೆ ನಾಗ್ಪುರದಲ್ಲಿ ಲಾಕ್ ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಲಾಕ್ ಡೌನ್ ಸಮಯದಲ್ಲಿ, ಖಾಸಗಿ ಕಚೇರಿಗಳು ಮುಚ್ಚಲ್ಪಡುತ್ತವೆ. ಆದರೆ ಸರ್ಕಾರಿ ಕಚೇರಿಗಳು ಶೇಕಡಾ 25 ರಷ್ಟು ಸಿಬ್ಬಂಧಿಯೊಂದಿಗೆ ಕಾರ್ಯನಿರ್ವಹಿಸುತ್ತವೆ ಎಂದು ರಾವತ್‌ ಹೇಳಿದ್ದಾರೆ.

ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ. ಲಾಕ್‌ಡೌನ್ ಅವಧಿಯಲ್ಲಿ ಮಾತ್ರ ಮದ್ಯವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಜನರು ಅನಗತ್ಯವಾಗಿ ಹೊರಹೋಗಬಾರದು ಎಂದು ರಾವತ್‌ ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳೆದ ವರ್ಷ ಜನವರಿಯಲ್ಲಿ ರಾಜ್ಯದ ಎಲ್ಲಾ 36 ಜಿಲ್ಲೆಗಳಿಗೆ ರಕ್ಷಕ ಮಂತ್ರಿಗಳನ್ನು ನೇಮಿಸಿದ್ದರು.

ಬುಧವಾರ, ಜಿಲ್ಲೆಯಲ್ಲಿ 1,710 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತ ಪ್ರಕರಣಗಳ ಸಂಖ್ಯೆ 1,62,053 ಕ್ಕೆ ತಲುಪಿದೆ. ಪ್ರಸ್ತುತ 12,166 ಸಕ್ರಿಯ ಪ್ರಕರಣಗಳಿವೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ವೈರಸ್ ಸೋಂಕಿನಿಂದ ಒಟ್ಟು 4,417 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕಳೆದ 05 ವರ್ಷಗಳಲ್ಲಿ 405 ಶಾಸಕರ ಪಕ್ಷಾಂತರ; ಕಾಂಗ್ರೆಸ್‌ ತೊರೆದವರು 170 ಮಂದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights