ಇಬ್ಬರು ಸಹೋದರಿಯರ ಮೇಲೆ ನಿರಂತರ ಅತ್ಯಾಚಾರ; ನಕಲಿ ವೈದ್ಯನಿಗೆ 40 ವರ್ಷ ಜೈಲು ಶಿಕ್ಷೆ!

ಛತ್ತಿಸ್‌ಘಡದ ರಾಯ್‌ಪುರ್‌ ಎಂಬಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ್ದ ನಕಿಲಿ ವೈದ್ಯನಿಗೆ 40 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ ದಂಡ ವಿಧಿಸಿ ಅಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.

ಇಬ್ಬರು ಸೋದರಿಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ನಕಲಿ ವೈದ್ಯ ಸಮಯ್ ಲಾಲ್ ದೆವಾಂಗನ್ ವಿರುದ್ಧ 2017 ರಲ್ಲಿ ದಾಖಲಾಗಿದ್ದವು.

ಪ್ರಕರಣಗಳ ವಿಚಾರಣೆ ನಡೆಸಿರುವ ರಾಯ್‌ಪುರ್‌ನ ಹೆಚ್ಚುವರಿ ನ್ಯಾಯಾಲಯವು, ಎರಡು ಪ್ರಕರಣಗಳಲ್ಲಿ 40 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯು ತಲಾ 20 ವರ್ಷ ಜೈಲು ಶಿಕ್ಷೆಯಾಗಿದ್ದು, ಎರಡು ಶಿಕ್ಷೆಗಳು ಒಂದರ ನಂತರ ಒಂದು ಸತತವಾಗಿ ಜಾರಿಯಾಗಲಿವೆ ಎಂದು ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪೂಜಾ ಜೈಸ್ವಾಲ್, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (2) (ಎನ್) (ಅದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು) ಅಡಿಯಲ್ಲಿ ಅಪರಾಧಿಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯ ಅಪರಾಧಿಗೆ 10,000 ರೂ.ಗಳ ದಂಡವನ್ನು ಸಹ ವಿಧಿಸಿದ್ದಾರೆ.

2016 ರ ಡಿಸೆಂಬರ್‌ನಲ್ಲಿ 21 ಮತ್ತು 19 ವರ್ಷದ ಸಂತ್ರಸ್ತ ಯುವತಿಯರನ್ನು ಅವರ ಕುಟುಂಬ ಸದಸ್ಯರು ಹೊಟ್ಟೆ ಮತ್ತು ಸೊಂಟದ ನೋವಿನ ಚಿಕಿತ್ಸೆಗಾಗಿ ಈ ನಕಲಿ ವೈದ್ಯನ ಬಳಿಗೆ ಕರೆದೊಯ್ದಿದ್ದರು.

ಆತ “ಬ್ಲ್ಯಾಕ್ ಮ್ಯಾಜಿಕ್” ಮೂಲಕ ಗುಣಪಡಿಸುವ ನೆಪದಲ್ಲಿ 2017 ರ ಆರಂಭದಿಂದಲೂ ಸಹೋದರಿಯರ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯುವತಿಯರಿಗೆ ಬೆದರಿಕೆ ಹಾಕಿದ್ದ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

Read Also: ಅಸ್ಸಾಂನಲ್ಲಿ BJP ಮತ್ತು ಕಾಂಗ್ರೆಸ್‌ ಒಂದೇ ರೀತಿಯ ಸಂದಿಗ್ಧತೆಯನ್ನು ಎದುರಿಸುತ್ತಿವೆ; ಏನು ಮತ್ತು ಯಾಕೆ? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights