ಇಂಧನ ಬೆಲೆ ಏರಿಕೆಗೆ ಸೆಡ್ಡು: ಸೌರ ಬೈಸಿಕಲ್‌ ನಿರ್ಮಿಸಿದ್ದಾರೆ 12 ವರ್ಷದ ಮಕ್ಕಳು!

ತಮಿಳುನಾಡಿನ ಶಿವಗಂಗೈ ಜಿಲ್ಲೆಯ ವೀರಗುರುಹರಿಕೃಷ್ಣನ್ (12) ಮತ್ತು ಸಂಪತ್ಕೃಷ್ಣನ್ (11) ಸಹೋದರರು ದೇಶದ ಚಿತ್ತವನ್ನು ತಮ್ಮತ್ತ ಸೆಳೆದಿದ್ದಾರೆ. ಅವರು ಇಂಧನ ಬೆಲೆ ಏರಿಕೆಯನ್ನು ನಿಭಾಯಿಸಲು ಸೌರ ಬೈಸಿಕಲ್ ನಿರ್ಮಿಸಿದ್ದಾರೆ.

ಸಹೋದರರು, ಕ್ರಮವಾಗಿ ಎಂಟು ಮತ್ತು ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತಾವು ಬಳಸಿದ ಬೈಸಿಕಲ್ ಅನ್ನು ಸೌರಶಕ್ತಿ ಚಾಲಿತ ಬೈಸಿಕಲ್‌ಆಗಿ ಪರಿವರ್ತಿಸಲು ನಿರ್ಧರಿಸಿದರು.ಈ ಬೈಸಿಕಲ್ ಬೆಲೆ 10,000 ವಾಗಿದ್ದು, ಇದರಲ್ಲಿ 30 ಕಿ.ಮೀ ವರೆಗೆ ಪ್ರಯಾಣಿಸಬಹುದು. ನಂತರ ಇದನ್ನು ಸಾಮಾನ್ಯ ಬೈಸಿಕಲ್ ಆಗಿಯೂ ಬಳಸಬಹುದು.

ಚಕ್ರವು ಸೌರಶಕ್ತಿ ಚಾಲಿತ ಬ್ಯಾಟರಿಯಿಂದ ಚಲಿಸುತ್ತದೆ ಮತ್ತು ಅದರ ಮೇಲೆ ಸೌರ ಫಲಕಗಳನ್ನು ಸಹ ಹೊಂದಿದೆ.

“ನಾವು ಲಾಕ್‌ಡೌನ್ ಸಮಯದಲ್ಲಿ ರಜೆ ಇದ್ದುದರಿಂದಾಗಿ ಸೈಕ್ಲಿಂಗ್ ಮಾಡುತ್ತಿದ್ದೆವು. ಆ ಸಮಯದಲ್ಲಿ ಯೂಟ್ಯೂಬ್ ನೋಡುವಾಗ ನಮಗೆ ನಾವು ನಮ್ಮದೇ ಆದ ವಸ್ತುಗಳಿಂದ ಹೊಸದನ್ನು ಕಂಡುಹಿಡಿಯುವ ಆಲೋಚನೆ ಬಂದಿತು. ನೀವು ಎಲ್ಲಾ ರೀತಿಯ ಬೈಸಿಕಲ್‌ಗಳನ್ನು ಈ ಸ್ವರೂಪಕ್ಕೆ ಬದಲಾಯಿಸಬಹುದು. ಈ ಬೈಸಿಕಲ್‌ನ ಬೆಲೆ ಕೇವಲ 10 ಸಾವಿರ ರೂ.. ಸೂರ್ಯನ ಬೆಳಕಿನಲ್ಲಿ 5 ಗಂಟೆಗಳ ಕಾಲ ಜಾರ್ಜ್‌ ಆದಾಗ ಇದರಲ್ಲಿ 30 ಕಿ.ಮೀ ವರೆಗೆ ಪ್ರಯಾಣಿಸಬಹುದು”ಎಂದು ವೀರಗುರುಹರಿಕೃಷ್ಣನ್ ನ್ಯೂಸ್ 18 ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಬೈಸಿಕಲ್ ಅನ್ನು ಆನ್ ಮಾಡಿದರೆ ಪ್ರಸ್ತುತ ವಿನ್ಯಾಸದ ಆಧಾರದ ಮೇಲೆ ಗಂಟೆಗೆ 25 ರಿಂದ 35 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ವೇಗವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಸೂಕ್ತವಾದ ಸಾಧನಗಳನ್ನು ಅಳವಡಿಸುವ ಯೋಜನೆಯೂ ಇದೆ. ಈ ಬೈಸಿಕಲ್ ಒಟ್ಟು 150 ಕಿ.ಗ್ರಾಂ ತೂಕವನ್ನು ಹೊತ್ತು ಸಾಗುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲದೆ, ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡುವ ಸ್ಲಾಟ್‌ಗಳು ಸಹ ಬೈಸಿಕಲ್‌ನಲ್ಲಿ ಲಭ್ಯವಿದೆ.”

ಇದನ್ನೂ ಓದಿ: ‘ನಾವು ಅವರೆಲ್ಲರನ್ನೂ ಕೊಲ್ಲುತ್ತೇವೆ’: ಮಾರಣಾಂತಿಕ ಬೆದರಿಕೆ ಹಾಕಿದ್ದ ಮಿಜೋರಾಂ ಸಂಸದರ ವಿರುದ್ದ ಅಸ್ಸಾಂ ಕ್ರಮ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights