FACT CHECK | 65 ವರ್ಷದ ಅಜ್ಜಿಯನ್ನು ಮದುವೆಯಾದ 21 ವರ್ಷದ ಯುವಕ ಎಂದು ಸ್ಕ್ರಿಪ್ಟ್‌ ವಿಡಿಯೋ ಹಂಚಿಕೆ

65 ವರ್ಷದ ಮಹಿಳೆಯೊಬ್ಬರು 21 ವರ್ಷದ ಯುವಕನನ್ನು ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. , 65 ವರ್ಷದ ಮಹಿಳೆಯೊಬ್ಬರು 21 ವರ್ಷದ ಪುರುಷನನ್ನು ಮದುವೆಯಾಗಿರುವುದನ್ನು ಕಾಣಬಹುದು. ಹರಿಯಾಣದ 21 ವರ್ಷದ ಮೊಹಮ್ಮದ್ ಇರ್ಫಾನ್ ತನ್ನ ಅಜ್ಜಿ ಸುಲ್ತಾನಾ ಖತೂನ್ ಅವರನ್ನು ವಿವಾಹವಾದರು ಎಂಬ ಹೇಳಿಕೆಯೊಂದಿಗೆ ನವವಿವಾಹಿತ ಯುವಕ ಮತ್ತು ವೃದ್ಧ ಮಹಿಳೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘21 ವರ್ಷದ ಯುವಕನೊಬ್ಬ 65 ವರ್ಷದ ಅಜ್ಜಿ ಸುಲ್ತಾನಾ ಕಟೂನ್ ಜೊತೆ ಮದುವೆಯಾಗಿರೋ ವಿಲಕ್ಷಣ ಘಟನೆ ಹರಿಯಾಣದಲ್ಲಿ ನಡೆದಿದೆ. 21 ವರ್ಷದ ಮೊಹಮ್ಮದ್ ಇರ್ಫಾನ್ ಆತನ ಅಜ್ಜಿ 65 ವರ್ಷದ ಸುಲ್ತಾನಾ ಖತೂನ್ ಅವರನ್ನು ಮದುವೆಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೊಹಮ್ಮದ್ ಇರ್ಪಾನ್ ತನ್ನ ಸ್ವಂತ ಅಜ್ಜಿಯನ್ನು ಮದುವೆಯಾಗಿದ್ದಾನೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ದೇಸಿ ಛೋರಾ 2.0 ಎಂಬ ಯೂಟ್ಯೂಬ್ ಚಾನೆಲ್​ನಲ್ಲಿ ನವೆಂಬರ್ 20, 2022 ರಂದು ಅಪ್‌ಲೋಡ್‌ ಮಾಡಿದ ವಿಡಿಯೋ ಲಭ್ಯವಾಗಿದೆ. ವೀಡಿಯೊದ ಪ್ರಕಾರ, ರೋಹಿತ್ ಎಂಬ 21 ವರ್ಷದ ವ್ಯಕ್ತಿ ತನ್ನ 52 ವರ್ಷದ ಪ್ರಾಧ್ಯಾಪಕಿ ಶಾಂತಿಯನ್ನು ಮದುವೆಯಾಗಿದ್ದಾನೆ.

ಇದು ವೈರಲ್ ಆಗಿರುವ ಚಿತ್ರಗಳು ಈ ಸ್ಕ್ರಿಪ್ಟ್ ಮಾಡಿದ ವೀಡಿಯೊದಿಂದ ಬಂದಿವೆ ಎಂದು ಸೂಚಿಸುತ್ತದೆ. ಸುಮಾರು 10 ನಿಮಿಷಗಳ ಈ ವೀಡಿಯೋವನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಸಂದರ್ಭ 0.23 ಸೆಕೆಂಡುಗಳಲ್ಲಿ ಒಂದು ಡಿಸ್‌ಕ್ಲೈಮರ್ ಇದೆ. ಈ ಡಿಸ್‌ಕ್ಲೈಮರ್ ಪ್ರಕಾರ, ಈ ವೀಡಿಯೊ ಸಂಪೂರ್ಣವಾಗಿ ಸ್ಕ್ರಿಪ್ಟ್ ಆಗಿದೆ ಮತ್ತು ನೈಜವಲ್ಲಎಂಬುದು ಸ್ಪಷ್ಟವಾಗಿದೆ.

ಈ ಯೂಟ್ಯೂಬ್ ಚಾನೆಲ್​ನಲ್ಲಿ ನಾವು ಇದೇ ರೀತಿಯ ಇನ್ನೂ ಹಲವು ವಿಡಿಯೋಗಳನ್ನು ಕಂಡುಕೊಂಡಿದ್ದೇವೆ, ಅವುಗಳಲ್ಲಿ ಈ ವೈರಲ್ ವಿಡಿಯೊದಲ್ಲಿರುವ ಯುವಕ ಮತ್ತು ಹೆಂಗಸು ಇರುವುದನ್ನು ಕಾಣಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಸ್ಕ್ರಿಪ್ಟ್ ಮಾಡಿದ ವಿಡಿಯೋದ ಚಿತ್ರಗಳನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿದ ಮಹಿಳೆ ಮುಸ್ಲಿಂ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights