ಬಂಗಾಳದಲ್ಲಿ ಮಮತಾಗೆ ಮತ್ತೊಂದು ಶಾಕ್: ಸಚಿವ ರಾಜಿಬ್ ಬ್ಯಾನರ್ಜಿ ರಾಜೀನಾಮೆ!
ಪಶ್ಚಿಮ ಬಂಗಾಳವು ರಾಜ್ಯ ಚುನಾವಣೆಯ ವಸ್ತಿಲಿನಲ್ಲಿರುವಾಗಲೇ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತರೂಢ ಟಿಎಂಸಿ ಪಕ್ಷಕ್ಕೆ ಆಘಾತಗಳ ಮೇಲೆ ಆಘಾತಗಳು ಎದುರಾಗುತ್ತಿವೆ. ಈಗಾಗಲೇ ಹಲವು ಟಿಎಂಸಿ ಶಾಸಕರು, ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ಈ ಆಘಾತಗಳಿಂದ ಚೇತರಿಸಿಕೊಳ್ಳುತ್ತಾ ಚುನಾವಣಾ ಸಿದ್ದತೆ ನಡೆಸುತ್ತಿರುವ ಟಿಎಂಸಿಗೆ ಪಕ್ಷದ ಸಚಿವ ಮತ್ತೊಂದು ಶಾಕ್ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ರಾಜಿಬ್ ಬ್ಯಾನರ್ಜಿ ಅವರು ತಮ್ಮ ಸಚಿವ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಅರಣ್ಯ ಸಚಿವನಾಗಿದ್ದ ನಾನು ನನ್ನ ಮಂತ್ರಿ ಸ್ಥಾನಕ್ಕೆ ಮತ್ತು ನನ್ನ ಕಚೇರಿಗೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಲು ನಾನು ವಿಷಾದಿಸುತ್ತೇನೆ. ಪಶ್ಚಿಮ ಬಂಗಾಳದ ಜನರ ಸೇವೆ ಮಾಡುವುದಕ್ಕೆ ಅವಕಾಶ ದೊರೆತಿದ್ದು ನನ್ನ ಭಾಗ್ಯ. ಈ ಅವಕಾಶಕ್ಕಾಗಿ ಮನಸಾರೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬ್ಯಾನರ್ಜಿ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
#UPDATE: Governor Jagdeep Dhankhar accepts the resignation of Rajib Banerjee who stepped down as the Forest Minister of the state. https://t.co/w5XoS2nvjq
— ANI (@ANI) January 22, 2021
ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದು, ರಾಜ್ಯಪಾಲರು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಇದನ್ನೂ ಓದಿ: BJPಯಲ್ಲಿ ಹಿರಿಯರು – ಕಿರಿಯರ ನಡುವೆ ಘರ್ಷಣೆ; ಬಿಜೆಪಿ ಕಚೇರಿ ದ್ವಂಸ