ಕಳೆದ 05 ವರ್ಷಗಳಲ್ಲಿ 405 ಶಾಸಕರ ಪಕ್ಷಾಂತರ; ಕಾಂಗ್ರೆಸ್‌ ತೊರೆದವರು 170 ಮಂದಿ!

2016-2020ರ ನಡುವೆ ನಡೆದ ಚುನಾವಣೆಯ ಸಂದರ್ಭದಲ್ಲಿ 170 ಶಾಸಕರು ಕಾಂಗ್ರೆಸ್ ತೊರೆದ್ದಾರೆ. ಆದರೆ, 18 ಬಿಜೆಪಿ ಶಾಸಕರು ಮಾತ್ರ ಈ ಅವಧಿಯಲ್ಲಿ ಪಕ್ಷಗಳನ್ನು ಬದಲಾಯಿಸಿದ್ದಾರೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು  ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ.

ಎಡಿಆರ್ ಪ್ರಕಟಿಸಿರುವ ಹೊಸ ವರದಿಯಲ್ಲಿ, 2016-2020ರ ನಡುವೆ 405 ಶಾಸಕರು ರಾಜಕೀಯ ಪಕ್ಷಗಳನ್ನು ಬದಲಾಯಿಸಿದ್ದಾರೆ. ಈ ಪೈಕಿ 182 ಮಂದಿ ಬಿಜೆಪಿಗೆ ಸೇರಿಕೊಂಡಿದ್ದಾರೆ. 38 ಮಂದಿ ಕಾಂಗ್ರೆಸ್‌ಗೆ ಸೇರಿದ್ದರೆ, 25 ಮಂದಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)ಗೆ ಸೇರಿದ್ದಾರೆ.

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಲೋಕಸಭಾ ಸಂಸದರು ಬಿಜೆಪಿಯನ್ನು ತೊರೆದು ಇತರ ಪಕ್ಷಗಳಿಗೆ ಸೇರಿದ್ದಾರೆ. ಏಳು ರಾಜ್ಯಸಭಾ ಸದಸ್ಯರು ಕಾಂಗ್ರೆಸ್ ತೊರೆದು 2016-2020ರ ನಡುವೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಮತ್ತೊಂದು ಪಕ್ಷಕ್ಕೆ ಸೇರಿದ್ದಾರೆ ಎಂದು ವರದಿ ತಿಳಿಸಿದೆ.

2016-2020ರ ನಡುವೆ ನಡೆದ ಚುನಾವಣೆಯ ಸಂದರ್ಭದಲ್ಲಿ 170 ಶಾಸಕರು ಕಾಂಗ್ರೆಸ್ ತೊರೆದಿದ್ದರೆ, 18 ಶಾಸಕರು ಮಾತ್ರ ಬಿಜೆಪಿಯನ್ನು ತೊರೆದು ಬೇರೆ ಪಕ್ಷಕ್ಕೆ ಸೇರಿದ್ದಾರೆ ಎಂದು ಎಡಿಆರ್‌ ತಿಳಿಸಿದೆ.

“ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯ ಅಸೆಂಬ್ಲಿಗಳಲ್ಲಿ ಇತ್ತೀಚೆಗೆ ಸರ್ಕಾರಗಳು ಪತನಗೊಳ್ಳಲು ಆಡಳಿತಾರೂಢ ಪಕ್ಷದ ಶಾಸಕರ ಪಕ್ಷಾಂತರವೇ ಕಾರಣ ಎಂಬುದನ್ನ ಗಮನಿಸಬೇಕು” ಎಂದು ವರದಿ ತಿಳಿಸಿದೆ.

2016-2020ರ ನಡುವೆ, ರಾಜಕೀಯ ಪಕ್ಷಗಳನ್ನು ಬದಲಾಯಿಸಿದ 16 ಮಂದಿ ರಾಜ್ಯಸಭಾ ಸಂಸದರಲ್ಲಿ 10 ಮಂದಿ ಬಿಜೆಪಿಗೆ ಸೇರಿದ್ದಾರೆ ಮತ್ತು ಪಕ್ಷಗಳನ್ನು ಬದಲಿಸಿದ 12 ಲೋಕಸಭಾ ಸಂಸದರಲ್ಲಿ ಐವರು 2019 ರ ಸಂಸತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದಾರೆ ಎಂದು ಅದು ಹೇಳಿದೆ.

ವರದಿಗಾಗಿ, ರಾಷ್ಟ್ರೀಯ ಚುನಾವಣಾ ವಾಚ್ ಮತ್ತು ಎಡಿಆರ್ 433 ಸಂಸದರು ಮತ್ತು ಶಾಸಕರ ಸ್ವಯಂ-ಪ್ರಮಾಣವಚನ ಅಫಿಡವಿಟ್‌ಗಳನ್ನು ವಿಶ್ಲೇಷಿಸಿವೆ. ಈ ಮೂಲಕ ದೇಶದ 405 ಶಾಸಕರು ಮತ್ತು 12 ಮಂದಿ ಲೋಕಸಭಾ ಸಂಸದರು ಪಕ್ಷಗಳನ್ನು ಬದಲಾಯಿಸಿದ್ದಾರೆ ಮತ್ತು ಕಳೆದ ಐದು ವರ್ಷಗಳಲ್ಲಿ ನಡೆದ ಮರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ BJP ಮತ್ತು ಕಾಂಗ್ರೆಸ್‌ ಒಂದೇ ರೀತಿಯ ಸಂದಿಗ್ಧತೆಯನ್ನು ಎದುರಿಸುತ್ತಿವೆ; ಏನು ಮತ್ತು ಯಾಕೆ? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights