ಸದಸ್ಯರ ರಾಜೀನಾಮೆ ವಿಚಾರ : ತಮ್ಮ ಆಲೋಚನೆಗಳನ್ನು ಮೇಲ್ ಮಾಡಿ ಎಂದ ಕಮಲ್ ಹಾಸನ್!

ನಟ ರಾಜಕಾರಣಿ ಕಮಲ್ ಹಾಸನ್ ಅವರು ಮಕ್ಕಲ್ ನೀಧಿ ಮಾಯಮ್ ಪಕ್ಷದ ಮೂಲಕ ತಮಿಳುನಾಡು ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲಲು ವಿಫಲರಾಗಿದರು. ಬಳಿಕ ಪಕ್ಷದ ಕೆಲ ಸದಸ್ಯರು ರಾಜೀನಾಮೆ ಸಲ್ಲಿಸುತ್ತಿದ್ದು ಮಂಗಳವಾರ ಪಕ್ಷದ ಸದಸ್ಯರಿಗೆ ತಮ್ಮ ಆಲೋಚನೆಗಳನ್ನು ಮೇಲ್ ಮಾಡಲು ಕೇಳಿಕೊಂಡಿದ್ದಾರೆ.

ಕೊಯಮತ್ತೂರು (ದಕ್ಷಿಣ) ಕ್ಷೇತ್ರದಲ್ಲಿ ಸೋಲನುಭವಿಸಿದ ಎಂಎನ್‌ಎಂ ಸಂಸ್ಥಾಪಕ ಕಮಲ್ ಹಾಸನ್ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಸಂಘಟನೆಯಲ್ಲಿ ಪ್ರಜಾಪ್ರಭುತ್ವ ಕೊರತೆಯಿದೆ ಎಂದು ಆರೋಪಿಸಿ ಪಕ್ಷದ ಉಪಾಧ್ಯಕ್ಷ ಆರ್ ಮಹೇಂದ್ರನ್ ಅವರು ಪಕ್ಷ ತ್ಯಜಿಸಿದರು. ಮಹೇಂದ್ರನ್ ಅವರನ್ನು ಅನುಸರಿಸಿ, ಇತರ ಆರು ಮಂದಿ ತಮ್ಮ ರಾಜೀನಾಮೆಗಳನ್ನು ಕಳುಹಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಈ ಮನವಿಯನ್ನು ಕಮಲ್ ಹಾನಸ್ ಮಾಡಿದ್ದಾರೆ.

ಕೊಯಮತ್ತೂರಿನ ಸಿಂಗನಲ್ಲೂರ್ ಕ್ಷೇತ್ರದಿಂದ ಯಶಸ್ವಿಯಾಗಿ ಸ್ಪರ್ಧಿಸಿದ ಮಹೇಂದ್ರನ್, ಪಕ್ಷದ ಚಾಲನೆಯಲ್ಲಿ ಕೆಲವು ಸಲಹೆಗಾರರನ್ನು ದೂಷಿಸುವುದರ ಜೊತೆಗೆ ಹಸನ್ ಅವರು ಪಕ್ಷವನ್ನು ನಡೆಸುವ ವಿಧಾನವು ಸರಿಯಿಲ್ಲ ಎಂದು ಹೇಳಿದರು.

ತಮಿಳುನಾಡಿಗೆ ಬದಲಾವಣೆ ತರುವ ಉದ್ದೇಶದಿಂದ ಪಕ್ಷವು ಏಪ್ರಿಲ್ 6 ರಂದು ನಡೆದ ಮೊದಲ ವಿಧಾನಸಭಾ ಚುನಾವಣೆಯನ್ನು ಎದುರಿಸಿದೆ.  ಯುದ್ಧದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಹಾಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಕ್ಷೇತ್ರದಲ್ಲಿ ಶತ್ರುಗಳ ಜೊತೆಗೆ ದೇಶದ್ರೋಹಿಗಳು ಇದ್ದಾರೆ. ದೇಶದ್ರೋಹಿಗಳನ್ನು ಕಳೆ ಕಿತ್ತಲು ನಾವು ಸಿದ್ದರಿದ್ದೆವು. ಆದರೆ ಆ ಪಟ್ಟಿಯ ಮೇಲ್ಭಾಗದಲ್ಲಿ ಡಾ. ಆರ್ ಮಹೇಂದ್ರನ್ ಇದ್ದರು” ಎಂದು ಹಾಸನ್ ಹೇಳಿದ್ದಾರೆ. ಮಹೇಂದ್ರನ್ ಅವರ ಅಪ್ರಾಮಾಣಿಕತೆ ಮತ್ತು ಅದಕ್ಷತೆಯಿಂದ ಇತರರನ್ನು ದೂಷಿಸಲು ಮತ್ತು ಸಹಾನುಭೂತಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಎಂಎನ್‌ಎಂ 234 ವಿಧಾನಸಭಾ ಸ್ಥಾನಗಳಲ್ಲಿ 154 ಸ್ಪರ್ಧಿಸಿತು. ಉಳಿದ 80 ಸ್ಥಾನಗಳಲ್ಲಿ ಎಂಎನ್‌ಎಂನ ಎರಡು ಮೈತ್ರಿ ಪಾಲುದಾರಾದ, ಆರ್.ಶರತ್‌ಕುಮಾರ್ ನೇತೃತ್ವದ ಎಐಎಸ್ಎಂಕೆ ಮತ್ತು ಟಿ.ಆರ್.ಪರಿವೇಂದ್ರ ಅವರ ಐಜೆಕೆ ತಲಾ 40 ಸ್ಥಾನಗಳಿಗೆ ಸ್ಪರ್ಧಿಸಿದ್ದವು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights