FACT CHECK | ಮಲ್ಲಿಕಾರ್ಜುನ ಖರ್ಗೆ ನೀರು ಕುಡಿಯಲು ರಾಹುಲ್ ಮತ್ತು ಸೋನಿಯಾ ಗಾಂಧಿ ಅನುಮತಿ ಪಡೆಯಬೇಕೆ?

ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತಾವು ನೀರು ಕುಡಿಯಬೇಕೆಂದರೂ ಸೋನಿಯಾ ಮತ್ತು ರಾಹುಲ್ ಗಾಂಧಿಯ ಅನುಮತಿ ಪಡೆಯಬೇಕು ಎಂದು ಪ್ರತಿಪಾದಿಸಿ ಬಲಪಂಥೀಯ ಪ್ರತಿಪಾದಕ ರಿಷಿ ಬಾಗ್ರಿ ಎಂಬ ಬಿಜೆಪಿಯ ಎಕ್ಸ್‌ ಖಾತೆಯ ಬಳಕೆದಾರ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ನೀರಿನ ಲೋಟವನ್ನು ತೋರಿಸಿ ನಂತರ ನೀರು ಕುಡಿಯುತ್ತಿರುವ ವಿಡಿಯೋವನ್ನು ಪ್ರಸಾರಮಾಡಲಾಗಿದೆ. ಹಾಗಿದ್ದರೆ ಮಲ್ಲಿಕಾರ್ಜುನ ಖರ್ಗೆ ನೀರು ಕುಡಿಯಬೇಕೆಂದರೂ ರಾಹುಲ್ ಮತ್ತು ಸೋನಿಯಾ ಗಾಂಧಿಯ ಅನುಮತಿ ಪಡೆಯಬೇಕೆ? ಮಲ್ಲಿಕಾರ್ಜುನ ಖರ್ಗೆಯವರಿಗೆ ಅದಕ್ಕೂ ಸ್ವಾತಂತ್ರವಿಲ್ಲವೇ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 21 ಮಾರ್ಚ್ 2024ರಂದು (ಇಂದು) ದಿ ಪ್ರಿಂಟ್ ತನ್ನ ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಪತ್ರಿಕಾಗೋಷ್ಠಿಯ ವಿಡಿಯೋ ಲಭ್ಯವಾಗಿದೆ.

“ಕಾಂಗ್ರೆಸ್‌ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿ ಮೋದಿ ವ್ಯವಸ್ಥಿತ ಪ್ರಯತ್ನ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ. ವಿಡಿಯೋದಲ್ಲಿ 6 ನಿಮಿಷ 58 ಸೆಕೆಂಡ್‌ಗಳ ಅವದಿಯಲ್ಲಿ ಸೋನಿಯಾ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತು ಮುಗಿಸುವಾಗ ಮೈಕ್‌ಅನ್ನು ಪಾಸ್‌ ಮಾಡಲು ನೀರು ತುಂಬಿದ ಲೋಟವನ್ನು ಮಲ್ಲಿಕಾರ್ಜುನ ಖರ್ಗೆ ತೆಗೆದಿಡುತ್ತಾರೆ. ಆಗ ಮಾತನಾಡಿ ಮುಗಿಸಿದ್ದ ಸೋನಿಯಾ ಗಾಂಧಿಯನ್ನು ಸೌಜನ್ಯದಿಂದ ನೀರು ಬೇಕೆ ಎಂದು ಕೇಳುತ್ತಾರೆ, ಹಾಗೆಯೇ ರಾಹುಲ್ ಗಾಂಧಿಯನ್ನು ಕೇಳುತ್ತಾರೆ ಇಬ್ಬರು ಬೇಡ ಎನ್ನುತ್ತಾರೆ. ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆ ನೀರು ಕುಡಿಯುವುದನ್ನು ಮೂಲ ವಿಡಿಯೋದಲ್ಲಿ ನೋಡಬಹುದು.

ಕೆಲವರು ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡು ಕಾಂಗ್ರೆಸ್‌ನಲ್ಲಿ ಗುಲಾಮಗಿರಿ ಪದ್ದತ್ತಿ ಹೇಗಿದೆ ನೋಡಿ ಎಂದು ಹಂಚಿಕೊಂಡಿದ್ದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಏನನ್ನಾದರೂ ಉಪಯೋಗಿಸುವಾಗ ಪಕ್ಕದಲ್ಲಿರುವವರನ್ನು ಕೇಳುವುದು ಸೌಜನ್ಯ ಮತ್ತು ಗೌರವ ಎಂದು ಕಮೆಂಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕಾರ್ತಿಕೇನ್ ಎಂಬ ಎಕ್ಸ್‌ ಖಾತೆ ಬಳಕೆದಾರರೊಬ್ಬರು ರಿಷಿ ಟ್ವಿಟ್‌ಗೆ ಪ್ರತಿಕ್ರಿಯಿಸಿ ರಿಯಾಲಿಟಿ ನೋಡಿ ಎಂದು ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆಗೆ ನೀರು ನೀಡುತ್ತಿರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಕಾಂಗ್ರೆಸ್‌ನ ನಿಜವಾದ ಆಶಯ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್‌ ಪಕ್ಷದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿ ಆಯಾಸವಾಗಿದೆ ಎಂಬ ಕಾರಣಕ್ಕೆ ಸೋನಿಯಾ ಗಾಂಧಿಯವರಿಗೆ ಸೌಜನ್ಯಕ್ಕೆ ನೀರು ಬೇಕಾ ಎಂದು ಕೇಳುವ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೃಶ್ಯಗಳನ್ನು ತಿರುಚಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅನುಮತಿ ಪಡೆದು ನೀರು ಕುಡಿತುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಮೆರಿಕಾದ ಖ್ಯಾತ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಭಾರತದ ಮಾಧ್ಯಮಗಳ ಕುರಿತು ವ್ಯಂಗ್ಯಚಿತ್ರ ಬಿಡಿಸಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights