ಇದ್ದಕ್ಕಿದ್ದಂತೆ ಮದುವೆ ಮೆರೆವಣಿಯಲ್ಲಿ ಪಿಪಿಇ ಕಿಟ್ ಧರಿಸಿದ್ದ ಆಂಬ್ಯುಲೆನ್ಸ್ ಚಾಲಕನ ನೃತ್ಯ : ಮದ್ವೆ ಮಂದಿ ಶಾಕ್!

ರಸ್ತೆಯಲ್ಲಿ ಮದುವೆಯ ಮೆರವಣಿಗೆ ಹೋಗುತ್ತಿದ್ದಾಗ ಪಿಪಿಇ ಕಿಟ್ ಧರಿಸಿದ್ದ ಆಂಬ್ಯುಲೆನ್ಸ್ ಡ್ರೈವರ್ ಆಗಮಿಸಿ ಇದ್ದಕ್ಕಿದ್ದಂತೆ ನೃತ್ಯ ಮಾಡುವುದನ್ನು ಕಂಡು ಮದ್ವೆ ಮಂದಿ ಶಾಕ್ ಆದ ಘಟನೆ ಉತ್ತರಾಖಂಡ್ ದಲ್ಲಿ ನಡೆದಿದೆ.

ಸೋಮವಾರ ರಾತ್ರಿ ಸುಶಿಲಾ ತಿವಾರಿ ವೈದ್ಯಕೀಯ ಕಾಲೇಜಿನ ಹೊರಗೆ ಈ ಘಟನೆ ನಡೆದಿದೆ. ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಗೆ ಚಿಕಿತ್ಸೆ ನೀಡಲು ದೇಶದ ವೈದ್ಯಕೀಯ ವ್ಯವಸ್ಥೆ ಹೆಣಗಾಡುತ್ತಿರುವ ಸಮಯದಲ್ಲಿ ಮದ್ವೆ ಮೆರವಣಿಗೆಯಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಮೈಚಳಿಬಿಟ್ಟು ಕುಣಿದಿದ್ದಾರೆ. ಇದ್ದಕ್ಕಿದ್ದಂತೆ ಮೆರವಣಿಗೆಯಲ್ಲಿ ಸ್ಟೆಪ್ಸ ಹಾಕಲು ಶುರು ಮಾಡಿದ ವ್ಯಕ್ತಿಯನ್ನು ಕಂಡು ಮದ್ವೆ ಮಂದಿ ಶಾಕ್ ಆದರು. ನಂತರ ಆತ ಚಾಲಕನೆಂಬುದನ್ನ ತಿಳಿದು ಆತನೊಂದಿಗೆ ಎಲ್ಲರೂ ಸ್ಟೆಪ್ಸ್ ಹಾಕಿದ್ದಾರೆ.

ಅಂದಹಾಗೆ ಮಹೇಶ್ ಸೈಫ್ ಎಂಬಾತ ಮದ್ವೆ ಮೆರವಣಿಗೆಯಲ್ಲಿ ನೃತ್ಯ ಮಾಡಿದ ಚಾಲಕ.

ಉತ್ತರಾಖಂಡ್ ದ ಡೆಹ್ರಾಡೂನ್‌ನಿಂದ 280 ಕಿ.ಮೀ ದೂರದಲ್ಲಿರುವ ಹಲ್ದ್ವಾನಿ ನಗರದಲ್ಲಿ ಪ್ರಸ್ತುತ ಕೋವಿಡ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಮದುವೆ ಸಮಾರಂಭಗಳಿಗೆ 50 ಜನರಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಪ್ರತಿದಿನ 18 ಗಂಟೆಗಳ ಕಾಲ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಕೆಲಸದ ಒತ್ತಡಕ್ಕೆ ಮಣಿದು ಪಿಪಿಇ ಕಿಟ್ ಧರಿಸಿದ್ದರು. ಈ ವೇಳೆ ಮದ್ವೆ ಮೆರವಣಿಗೆ ಹೊರಟಿತ್ತು. ಇದರಲ್ಲಿ ಬಾಲಿವುಡ್ ಹಿಟ್‌ ಸಾಂಗ್ ಗಳು ಪ್ಲೈ ಮಾಡಲಾಗಿತ್ತು. ಈ ಹಾಡುಗಳಿಗೆ ಚಾಲಕ ಉತ್ಸಾಹದಿಂದ ನೃತ್ಯ ಮಾಡಿದ್ದಾರೆ.

ಆಂಬ್ಯುಲೆನ್ಸ್ ಚಾಲಕನ ನೃತ್ಯದ ವಿಡಿಯೋವನ್ನು ವಿವಾಹದ ಅತಿಥಿಯೊಬ್ಬರು ಚಿತ್ರೀಕರಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights