ಸಚಿನ್‌ ಪುತ್ರನನ್ನು ಖರೀದಿಸಿದ ಮುಂಬೈ ಇಂಡಿಯನ್ಸ್‌; ಅರ್ಜುನ್‌ ತೆಂಡೂಲ್ಕರ್‌ರನ್ನು ಟ್ರೋಲ್‌ ಮಾಡಿದ ನೆಟ್ಟಿಗರು!

2021ರ ಐಪಿಎಲ್‌ ಟೂರ್ನಿಗಾಗಿ ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಚಿನ್‌ ತೆಂಡೂಲ್ಕರ್‌ ಅವರ ಮಗ ಅರ್ಜುನ್‌ ತೆಂಡೂಲ್ಕರ್‌ ಅವರನ್ನು 20 ಲಕ್ಷ ರೂಗೆ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ. ಅರ್ಜುನ್‌ ಅವರನ್ನು ತಂಡಕ್ಕೆ ತೆಗೆದುಕೊಂಡಿರುವುದು ಮ್ಯಾನೇಜ್‌ಮೆಂಟ್‌ ಕೋಟಾ ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

ಇದು ಸ್ವಜನಪಕ್ಷಪಾತವಲ್ಲವೇ? ಆತನಿಗಿಂತಲೂ ಪ್ರತಿಭಾವಂತರು ಇದ್ದರೂ ಅವರನ್ನೇಕೆ ಖರೀದಿಸಿಲ್ಲ? ಸಚಿನ್ ಪ್ರತಿನಿಧಿಸುತ್ತಿದ್ದ ಮುಂಬೈ ತಂಡವೇ ಆತನನ್ನು ಕೊಳ್ಳಲು ಕಾರಣವೇನು? ಇದು ಮ್ಯಾಜೇನ್‌ಮೆಂಟ್ ಕೋಟಾದಲ್ಲಿ ಸೇರಿಸಿಕೊಂಡಂತೆ ಅಲ್ಲವೇ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅದೇ ರೀತಿ ಅರ್ಜುನ್ ತೆಂಡೂಲ್ಕರ್ ನಿಜಕ್ಕೂ ಪ್ರತಿಭಾವಂತ ಎಂದಿರುವ ಹಲವರು ಆತನ ಪ್ರದರ್ಶನದ ವಿಡಿಯೋಗಳನ್ನು ಹಾಕಿ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಸಾಕಷ್ಟು ಟ್ರೋಲ್‌ಗಳು ವ್ಯಕ್ತವಾದ ಬೆನ್ನಲ್ಲೆ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲ ಜಯವರ್ಧನೆ ಸ್ಪಷ್ಟನೆ ನೀಡಿದ್ದು, “ಆತನ ಕೌಶಲ್ಯ ಮತ್ತು ಪ್ರತಿಭೆಯ ಆಧಾರದಲ್ಲಿಯೇ ಅರ್ಜುನ್‌ ಕೊಂಡುಕೊಳ್ಳಲಾಗಿದೆ. ಇದು ಅರ್ಜುನ್‌ಗೆ ಕಲಿಕೆಯ ಪ್ರಕ್ರಿಯೆಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಆತ ಮುಂಬೈ ಪರವಾಗಿ ಆಡಲು ಆರಂಭಿಸಿದ ಮತ್ತು ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಪಾಲಾಗಿದ್ದಾನೆ. ಆತ ವಿಕಾಸಗೊಳ್ಳುತ್ತಾನೆ, ಇನ್ನು ಚಿಕ್ಕ ವಯಸ್ಸಾದರೂ, ಫೋಕಸ್ ಉಳ್ಳವನಾಗಿದ್ದಾನೆ” ಎಂದಿದ್ದಾರೆ.

ಆದರೆ ಟ್ವಿಟರ್‌ನಲ್ಲಿ ಮಾತ್ರ ಅರ್ಜುನ್ ಕಾಲೆಳೆದು ಟ್ರೋಲ್ ಮಾಡಲಾಗುತ್ತಿದೆ. ಇತ್ತೀಚೆಗೆ ರೈತ ಹೋರಾಟದ ವಿರುದ್ಧ ಮತ್ತು ಬಿಜೆಪಿ ಸರ್ಕಾರದ ಪರವಾಗಿ ಟ್ವೀಟ್ ಮಾಡಿದ ಸೆಲೆಬ್ರಿಟಿಗಳಲ್ಲಿ ಸಚಿನ್ ಕೂಡ ಒಬ್ಬರಾಗಿದ್ದರು. ಈ ಹಿನ್ನೆಲೆಯಲ್ಲಿಯೂ ಸಹ ಅವರ ಮಗನನ್ನು ಟ್ರೋಲ್ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. ಅಜಯ್ ಧುಮಲ್ ಎಂಬುವವರು ಟ್ವೀಟ್ ಮಾಡಿ ನೀವು ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದರೆ ಹೇಗೆ ಎಂದು ಅರ್ಜುನ್ ತೆಂಡೂಲ್ಕರ್‌ರವರನ್ನು ಉಲ್ಲೇಖಸಿದ್ದಾರೆ.

https://twitter.com/ajaydhumal5500/status/1362430129675329546?s=20

“ಅರ್ಜುನ್ ತೆಂಡೂಲ್ಕರ್ ಸ್ವಜನಪಕ್ಷಪಾತತ ಅತಿ ಕೆಟ್ಟ ಉತ್ಪನ್ನ ಎಂದು ಈಗ ಕಂಗನಾ ಕರೆಯುತ್ತಾರೆಯೇ? ಅವರಿನ್ನು ಜಯ್ ಶಾ ಕುರಿತು ಮಾತನಾಡಬೇಕಿದೆ” ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಸ್ತುವಾರಿ ಶ್ರೀವತ್ಸ ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್‌ರನ್ನು ಬಿಜೆಪಿ ಖರೀದಿಸಿದೆ, ಅವರ ಮಗನನ್ನು ಅಂಬಾನಿ ಖರೀದಿಸಿದ್ದಾರೆ ಎಂದು ದಿ ಬ್ಯಾಡ್ ಇಂಜಿನಿಯರ್ ಎಂಬುವವರು ಟ್ರೋಲ್ ಮಾಡಿದ್ದಾರೆ.

ಸ್ವಜನಪಕ್ಷಪಾತ ಎಂದು ಕಿರುಚುತ್ತಿದ್ದವರು ಈಗ ಎಲ್ಲಿದ್ದಾರೆ? ಎಂದು ರಿಯಾ ಆಂದೋಲನ್‌ಜೀವಿ ಟ್ವೀಟ್ ಮಾಡಿದ್ದಾರೆ.

ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಟ್ವೀಟ್ ಮಾಡಿ “ವಂಶಪಾರಂಪರ್ಯ ಅಥವಾ ರಕ್ತಗುಣದಿಂದ ಕ್ರಿಕೆಟ್ ಆಡಲಾಗುವುದಿಲ್ಲ, ಹಾಗಾಗಿ ನಾನು ಅರ್ಜುನ್ ತೆಂಡೂಲ್ಕರ್ ಪರ ತಿಂತುಕೊಳ್ಳುತ್ತೇನೆ. ಏಕೆಂದರೆ ಆತನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲ ಬದಲಿಗೆ ಮುಂಬೈ ಇಂಡಿಯನ್‌ನಂತಹ ಖಾಸಗಿ ತಂಡ ಕೊಂಡುಕೊಂಡಿದೆ. ಅಂತಿಮವಾಗಿ ಆತ ಮೈದಾನದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಕ್ರೀಡೆಗಳಲ್ಲಿ ಶಾರ್ಟ್‌ಕಟ್ ಇರುವುದಿಲ್ಲ, ಅಂತಿಮವಾಗಿ ಪ್ರತಿಭೆಯೊಂದೇ ಉಳಿಯುವುದು” ಎಂದಿದ್ದಾರೆ.

ಇದನ್ನೂ ಓದಿ: IPL 2021: ಕನ್ನಡಿಗ ಕೆ.ಗೌತಮ್‌ ಭಾರೀ ಮೊತ್ತಕ್ಕೆ ಸೇಲ್‌; IPLಗೆ ಬಿಕರಿಯಾದ ಆಟಗಾರರ ಪಟ್ಟಿ ಹೀಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights