FACT CHECK | ಕೇರಳದಲ್ಲಿ ಸೇನಾಧಿಕಾರಿಯ ಮಗಳು ಲವ್‌ ಜಿಹಾದ್‌ನಿಂದ ಮತಾಂತರ ಎಂಬುದು ಸುಳ್ಳು! ಹಾಗಿದ್ದರೆ ವಾಸ್ತವವೇನು?

“ನಿಗೂಢವಾಗಿ ನಾಪತ್ತೆಯಾಗಿದ್ದ ತಿರುವನಂತಪುರದ ಸೇನಾಧಿಕಾರಿಯೊಬ್ಬರ ಪುತ್ರಿ ಅಪರ್ಣಾ (21) ಲವ್ ಜಿಹಾದ್‌ ಬಲೆಗೆ ಎಂಬ ಹೇಳಿಕೆಯೊಂದಿಗೆ ವಾಟ್ಸಾಪ್‌ನಲ್ಲಿ ಹುಡುಗಿಯೊಬ್ಬಳ ಚಿತ್ರದೊಂದಿಗೆ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ ಸಂದೇಶದಲ್ಲಿ ಹೀಗೆ ಬರೆಯಲಾಗಿದ್ದು,  ತಿರುವನಂತಪುರದಲ್ಲಿ ಸೇನಾಧಿಕಾರಿಯೊಬ್ಬರ ಮಗಳು ಅಪರ್ಣಾ (21) ಲವದ ಜಿಹಾದ್ ಬಲೆಗೆ ಪೊಲೀಸರು ಪತ್ತೆ ಹಚ್ಚಿದಾಗ, ಮಸೀದಿಯಲ್ಲಿ  ಕುರಾನ್ ಕಲಿಯುತ್ತದ್ದಾಳೆ. ಇವಳ ಜೊತೆ 72 ಹಿಂದೂ ಹುಡುಗಗಿಯರು ಸಹ ಕುರಾನ್ ಕಲಿಯುತ್ತಿದ್ದಾರೆ. ಹಿಂದೂ ಹುಡುಗಿಯರನ್ನು ಹೇಗೆ ಲವ್ ಬಲೆಗೆ ಬೀಳಿಸಿಕೊಳ್ಳಲು ಮುಸ್ಲಿಂ ಹುಡುಗರಿಗೆ  ಮಸೀದಿಯಲ್ಲಿ ಹೆಚ್ಚಿನ ಹಣ ನೀಡಲಾಗುತ್ತಿದೆ. ಅದರ ಫಲವೇ ಇದು. ಮುಂದೆ ಇವರು ಯಾವ ದಂಧೆ ಪಾಲಾಗುವರೋ. (ಹಿಂದೂಗಳು ತಮ್ಮ ಮಕ್ಕಳಿಗೆ ಧರ್ಮ ಶಿಕ್ಷಣ ಕೊಡದಿದ್ದರೆ ಇದೇ ಪಾಡು) ಎಂಬ ಕೋಮು ದ್ವೇಷದ ಹಿನ್ನಲೆಯ ಸಂದೇಶವನ್ನು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಸಂದೇಶವನ್ನು ಗಮನಿಸಿದ ಹಲವರು ಏನ್‌ಸುದ್ದಿ.ಕಾಂ ವಾಟ್ಸಾಪ್‌ಗೆ ಸಂದೇಶಗಳನ್ನು ಪಾರ್ವಡ್‌ ಮಾಡುವ ಮೂಲಕ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಸಂದೇಶದಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವಾಟ್ಸಾಪ್‌ ಸಂದೇಶದಲ್ಲಿ ಪ್ರಸಾರ ಆಗುತ್ತಿರುವ ಹೇಳಿಕೆಯನ್ನು ಪರಿಶೀಲನೆ ನಡೆಸಿದ್ದು, ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಮಲಯಾಳಂ ಪತ್ರಿಕೆಯೊಂದರ ವರದಿಯೊಂದು ಪತ್ತೆಯಾಗಿತ್ತು. ಈ ವರದಿಯಲ್ಲಿ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ಮದುವೆ ನಿಶ್ಚಯವಾಗಿರುವ ಯುವತಿ ಅನ್ಯ ಧರ್ಮದ ಯುವಕನೊಂದಿಗೆ ಪರಾರಿ ಎಂಬ ಸುದ್ದಿ ವರದಿಯಾಗಿದೆ. ಮನೆಯವರ ಒತ್ತಾಯಕ್ಕೆ ಮಣಿದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಬಳಿಕ ಪ್ರಿಯಕರನೊಂದಿಗೆ ಶಾರ್ಜಾಕ್ಕೆ ತೆರಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದರಲ್ಲಿ ಮತಾಂತರದ ಬಗ್ಗೆ ಅಥವಾ ಇತರ ಮಾಹಿತಿಯನ್ನು ನೀಡಲಾಗಿಲ್ಲ.

ಮಲಯಾಳಂ ಸ್ಥಳೀಯ ಪತ್ರಿಕೆಯಲ್ಲಿ ಕಂಡು ಬಂದ ವರದಿ
ಮಲಯಾಳಂ ಸ್ಥಳೀಯ ಪತ್ರಿಕೆಯಲ್ಲಿ ಕಂಡು ಬಂದ ವರದಿ

ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ,  2018 ಮತ್ತು 2020 ರಲ್ಲಿ ಇದೇ ರೀತಿಯ ಸುದ್ದಿ ವೈರಲ್‌ ಆಗಿತ್ತು ಮತ್ತು ಈ ಸುದ್ದಿ 2016ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. . ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ವೈರಲ್‌ ಫೋಟೋದಲ್ಲಿರುವ ಯುವತಿ ಸೇನಾಧಿಕಾರಿಯ ಮಗಳು ಅಪರ್ಣ ಎಂಬುದು ಸುಳ್ಳಾಗಿದೆ. ಈ ಪೋಸ್ಟ್‌ನಲ್ಲಿ ನೀಡಲಾದ ಫೋಟೋ ಕಾಞಂಗಾಡ್‌ನಿಂದ ಕಾಣೆಯಾದ ಹುಡುಗಿಯದ್ದಾಗಿದೆ.

ಅಪರ್ಣಾ ಪ್ರಕರಣದ ಕುರಿತು ಮಾಧ್ಯಮಂ ವರದಿ
ಅಪರ್ಣಾ ಪ್ರಕರಣದ ಕುರಿತು ಮಾಧ್ಯಮಂ ವರದಿ

29 ಜುಲೈ 2016ರಲ್ಲಿ ಅಪರ್ಣಾ ಅವರು ಮಂಚೇರಿಯ ಸತ್ಯಸರಣಿ ಟ್ರಸ್ಟ್‌ನ ಮರ್ಕಸುದ್ದಾವಾ ಎಂಬ ಸಂಸ್ಥೆಗೆ ಯಾರ ಒತ್ತಡ ಮತ್ತು ಬಲವಂತವಿಲ್ಲದೆ ಇಸ್ಲಾಂ ಬಗ್ಗೆ ಕಲಿಯಲು ಬಂದಿದ್ದೇನೆ ಎಂದು ಹೇಳಿದರು. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟ್ರಸ್ಟ್‌ನ ಪದಾದಿಕಾರಿಗಳು, ಇಲ್ಲಿಗೆ ಯಾರನ್ನೂ ಒತ್ತಾಯ ಮಾಡಿ ಕರೆಯುವುದಿಲ್ಲ. ನಾವು ಇಲ್ಲಿಗೆ ಇಸ್ಲಾಂ ಕುರಿತು ಅಭ್ಯಾಸ ನಡೆಸಲು ಬರುವವರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಮಾಹಿತಿಯನ್ನು ಕೂಡ ನೀಡಿದ್ದಾರೆ.

2019 ಜುಲೈ 29ರಂದು ಅಪರ್ಣಾ ತಾನೆ ಸ್ವ ಇಚ್ಚೆಯಿಂದ ಇಸ್ಲಾಂ ಧರ್ಮದ ಕುರಿತು ಅಧ್ಯಯನ ನಡೆಸಲು ಬಂದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಳು
2019 ಜುಲೈ 29ರಂದು ಅಪರ್ಣಾ ತಾನೆ ಸ್ವ ಇಚ್ಚೆಯಿಂದ ಇಸ್ಲಾಂ ಧರ್ಮದ ಕುರಿತು ಅಧ್ಯಯನ ನಡೆಸಲು ಬಂದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಳು

ಇನ್ನು, ತಿರುವನಂತಪುರಂನಿಂದ ಕಾಣೆಯಾದ ಅಪರ್ಣ 2016ರಲ್ಲಿ ಸುದ್ದಿಗೋಷ್ಠಿ ನಡೆಸಿ ತಾನೆ ಸ್ವ ಇಚ್ಚೇಯಿಂದ ಇಸ್ಲಾಂ ಕುರಿತು ಅಭ್ಯಾಸ ನಡೆಸುತ್ತಿದ್ದೇನೆ ಎಂದು ಹೇಳಿದ್ದರು, ಆದರೆ ವೈರಲ್‌ ಫೋಟೋದಲ್ಲಿರುವ ಹುಡುಗಿಗೂ  ತಿರುವನಂತಪುರಂನ ಅಪರ್ಣಾ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲಎಂಬುದು ಈ ಎಲ್ಲಾ ಅಂಶಗಳಿಂದ ಪತ್ತೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ಸಂಬಂಧವಿಲ್ಲ ಘಟನೆಯ ಒಂದು ಎಳೆಯನ್ನು ಹಿಡಿದು ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಧಾರ್ಮಿಕ ಕೋಮು ವಿಷ ಬೀಜ ಬಿತ್ತುವ ಉದ್ದೇಶದಿಂದ ಸುಳ್ಳು ಪ್ರತಿಪಾದನೆಯೊಂದಿಗೆ ಸಂದೇಶವನ್ನು ಹಂಚಿಕೊಳ್ಳಲಾಗುತ್ತದೆ. ಈ ಸಂದೇಶದಲ್ಲಿ ಉಲ್ಲೇಖ ಮಾಡಿರುವ ಅಷ್ಟೂ ಅಂಶಗಳು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಂಜಾಬ್ ಸಿಎಂ ಭಗವಂತ್ ಮಾನ್ ಮೇಲ್ ಸಾರ್ವಜನಿಕರಿಂದ ಹಲ್ಲೆ ನಡೆಯಿತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights