FACT CHECK | ಪಂಜಾಬ್ ಸಿಎಂ ಭಗವಂತ್ ಮಾನ್ ಮೇಲ್ ಸಾರ್ವಜನಿಕರಿಂದ ಹಲ್ಲೆ ನಡೆಯಿತೇ?

ಆಪ್ ಮುಖಂಡ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗೆ ಸಾರ್ವಜನಿಕರು ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಹಳದಿ ಪೇಟ ಧರಿಸಿದ ವ್ಯಕ್ತಿಯ ಮೇಲೆ ಜನರ ಗುಂಪು ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಕಾಣಬಹುದು.

Fact Check: No, Punjab CM Bhagwant Mann Wasn't Thrashed By Public As Claimed In Viral Video

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಅವರ ಸಹಿಯ ಉಡುಪಿನ ಭಾಗವಾಗಿ ಹಳದಿ ಪೇಟವಿರುವುದರಿಂದ ಜನರು ಅವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿರುವವರು ಹೇಳಿಕೊಂಡಿದ್ದಾರೆ.

Fact Check: No, Punjab CM Bhagwant Mann Wasn't Thrashed By Public As Claimed In Viral Video

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು  “ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಫೇಸ್‌ಬುಕ್‌ನಲ್ಲೂ ಹಂಚಿಕೊಳ್ಳಲಾಗಿದೆ. ಹಾಘಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 13 ಏಪ್ರಿಲ್ , 2024 ರಂದು @JKROZANANEWS ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವ  ವಿಡಿಯೋ ಪೋಸ್ಟ್‌ಗೆ ಲಭ್ಯವಾಯಿತು. ಜಮ್ಮುವಿನಲ್ಲಿ ಸಂಘಟನೆಯ ರ್ಯಾಲಿಯಲ್ಲಿ ಯುವ ಜಟ್ ಸಭಾದ ಅಧ್ಯಕ್ಷ ಅಮನ್‌ದೀಪ್ ಸಿಂಗ್ ಬೋಪರಾಯ್ ಮೇಲೆ ದಾಳಿ ಮಾಡಲಾಗಿದೆ ಎಂದು ಅದು ಹೇಳಿದೆ.

Fact Check: No, Punjab CM Bhagwant Mann Wasn't Thrashed By Public As Claimed In Viral Video

 YuvaJattSabhaJK ಎಂಬ Instagram ಪುಟದಲ್ಲಿ ಅಪ್‌ಲೋಡ್ ಮಾಡಿರುವ ಅಂತಹದ್ದೇ ವಿಡಿಯೋ ಲಭ್ಯವಾಗಿದೆ. ಯುವ ಜಟ್ ಸಭಾದ ಅಧ್ಯಕ್ಷ ಅಮನದೀಪ್ ಸಿಂಗ್ ಬೋಪರಾಯ್ ಎಂಬುವವರ ಮೇಲೆ 150ಕ್ಕೂ ಅಧಿಕ ಮಂದಿ ಹಲ್ಲೆ ನಡೆಸಲು ಮುಂದಾಗಿರುವುದು ಹೇಡಿತನ ಎಂಬ ಶಿರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ಮತ್ತೊಂದು ಸ್ಥಳೀಯ ಸುದ್ದಿ ವಾಹಿನಿಯು ಜಮ್ಮುವಿನ ಗೋಲೆ ಗುಜ್ರಾಲ್ ಎಂಬ ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ ವಿಡಿಯೋ ವರದಿಯನ್ನು ಪ್ರಕಟಿಸಿದ್ದು, ಅಮನದೀಪ್ ಅವರ ಹೇಳಿಕೆಯನ್ನು ಬಿತ್ತರಿಸಿದೆ. ವೈರಲ್ ವೀಡಿಯೊದಲ್ಲಿ ದಾಳಿಗೊಳಗಾದ ವ್ಯಕ್ತಿ ಧರಿಸಿದ್ದ ಅದೇ ಹಳದಿ ಪೇಟ ಮತ್ತು ಕಂದು ಬಣ್ಣದ ಜಾಕೆಟ್  ಧರಿಸಿರುವುದನ್ನು ಕಾಣಬಹುದು.

ಅಮನದೀಪ್ ಸಿಂಗ್ ಬೋಪರಾಯ್ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಜನರ ಗುಂಪು ನಡೆಸಿದ ದಾಳಿಯನ್ನು ವಿವರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದು ‘ಚುನಾವಣೆ ಸಮಯದಲ್ಲಿ ಹಿಂದೂ ಮತ್ತು ಸಿಖ್ ಸಮುದಾಯಗಳ ನಡುವೆ ಬಿರುಕು ಸೃಷ್ಟಿಸಲು ಜಮ್ಮು ಕಾಶ್ಮೀರದಲ್ಲಿ  ಯುವ ಜಟ್ ಸಭಾ ಆಯೋಜಿಸಿದ್ದ ರ್ಯಾಲಿಯ ಮೇಲೆ ಪೂರ್ವ ಯೋಜಿತ ದಾಳಿ ನಡೆಸಲಾಗಿದೆ’ ಎಂದು ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮೇಲೆ ನಿಜವಾಗಿಯೂ ಜನರ ಗುಂಪು ಹಲ್ಲೆ ನಡೆಸಿದೆಯೇ ಎಂದು ಪರಿಶೀಲಿಸಿದಾಗ, ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಜಮ್ಮುವಿನಲ್ಲಿ ಯುವ ಜಟ್ ಸಭಾದ ಅಧ್ಯಕ್ಷ ಅಮನದೀಪ್ ಸಿಂಗ್ ಬೋಪರಾಯ್ ಮೇಲೆ ಗುಂಪೊಂದು ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು, ಪಂಜಾಬ್ ಸಿಎಂ ಭಗವಂತ್ ಮಾನ್ ಮೇಲೆ ನಡೆದ ದಾಳಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಲ್ಲೆಗೊಳಗಾದ ನಂತರ ಆಸ್ಪತ್ರೆ ಸೇರಿದ್ರಾ ಕನ್ಹಯ್ಯ ಕುಮಾರ್ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights