ಟಿಎಂಸಿ ನಾಯಕರ ಮೇಲೆ ‘ತಾಲಿಬಾನ್‌ ಶೈಲಿ’ಯಲ್ಲಿ ದಾಳಿ ನಡೆಸಿ; ಬಿಜೆಪಿಗರಿಗೆ ಕರೆ ನೀಡಿದ ಬಿಜೆಪಿ ಶಾಸಕ!

ಟಿಎಂಸಿ ನಾಯಕರು ಅಂಗರ್ತಲಾ ವಿಮಾನ ನಿಲ್ದಾಣದಲ್ಲಿ ಬಂದಿಳಿದರೆ, ಅವರ ಮೇಲೆ ತಾಲಿಬಾನ್‌ ಶೈಲಿಯಲ್ಲಿ ದಾಳಿ ನಡೆಸಿ ಎಂದು ತ್ರಿಪುರಾ ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್ ಅವರು ತಮ್ಮ ಕಾರ್ಯಕರ್ತರಿಗೆ ಕರೆನೀಡಿದ್ದು, ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

ಕೇಂದ್ರ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವೆ ಪ್ರತಿಮಾ ಭೌಮಿಕ್ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದಅರುಣ್ ಚಂದ್ರ ಭೌಮಿಕ್, “ಪಶ್ಚಿಮ ಬಂಗಾಳದ ಟಿಎಂಸಿ ನಾಯಕರು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಚೋದನೆಯೊಂದಿಗೆ ತ್ರಿಪುರಾದ ಬಿಪ್ಲಬ್ ದೇಬ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಲುಗಾಡಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ತಾಲಿಬಾನಿ ಶೈಲಿಯಲ್ಲಿ ಅವರ (ಟಿಎಂಸಿ ನಾಯಕರು) ಮೇಲೆ ದಾಳಿ ಮಾಡುವಂತೆ ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿದರೆ, ನಾವು ಅವರ ಮೇಲೆ ತಾಲಿಬಾನಿ ಶೈಲಿಯಲ್ಲಿ ದಾಳಿ ಮಾಡಬೇಕು. ನಾವು ನಮ್ಮ ಸರ್ಕಾರವನ್ನು ಪ್ರತಿ ಹನಿ ರಕ್ತದಿಂದ ರಕ್ಷಿಸುತ್ತೇವೆ ಎಂದು ಭೌಮಿಕ್ ಹೇಳಿದ್ದಾರೆ.

ಇದನ್ನೂ ಓದಿ: 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಪಟ್ಟಿ ಕೇಳಿದ ತಾಲಿಬಾನ್; ಮದುವೆಗೆ ಒತ್ತಾಯ!

ಭೌಮಿಕ್ ಅವರ ಹೇಳಿಕೆಯನ್ನು ಖಂಡಿಸಿರುವ ಟಿಎಂಸಿ ಯುವ ನಾಯಕ ಹಾಗೂ ಮಾಜಿ ಸಂಸದ ರಿತಬ್ರಾತಾ ಬ್ಯಾನರ್ಜಿ, “ಟಿಎಂಸಿ ನಾಯಕರ ಮೇಲೆ ದಾಳಿ ಮಾಡಲು ಬಿಜೆಪಿ “ಥೈಂಗರೆ ಬಾಹಿನಿ” (ಗೂಂಡಾಗಿರಿ ಪಡೆ) ರಚಿಸಿದೆ. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತ್ರಿಪುರಾಕ್ಕೆ ಭೇಟಿ ನೀಡಿದಾಗ ಅವರ ಕಾರಿನ ಮೇಲೆ ಬಿಜೆಪಿ ಗೂಂಡಾಗಳ ಗುಂಪು ದಾಳಿ ನಡೆಸಿತ್ತು” ಎಂದು ಹೇಳಿದ್ದಾರೆ.

ತ್ರಿಪುರಾ ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್
ತ್ರಿಪುರಾ ಬಿಜೆಪಿ ಶಾಸಕ ಅರುಣ್ ಚಂದ್ರ ಭೌಮಿಕ್

“ಇಡೀ ವಿಶ್ವವು ತಾಲಿಬಾನ್ ಅನ್ನು ಟೀಕಿಸುತ್ತಿರುವ ಸಮಯದಲ್ಲಿ, ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಶಾಸಕರೊಬ್ಬರು ತಾಲಿಬಾನಿ ಶೈಲಿಯಲ್ಲಿ ಪಶ್ಚಿಮ ಬಂಗಾಳದಿಂದ ಬರುವ ಟಿಎಂಸಿ ನಾಯಕರ ಮೇಲೆ ದಾಳಿ ಮಾಡಲು ಕೇಳಿದ್ದಾರೆ. ನಾವು ವಿಮಾನ ನಿಲ್ದಾಣದಲ್ಲಿ ಇಳಿದರೆ ನಮ್ಮ ಮೇಲೆ ಅರುಣ್ ಚಂದ್ರ ಭೌಮಿಕ್ ತಾಲಿಬಾನಿ ಶೈಲಿಯ ದಾಳಿ ನಡೆಸುತ್ತೇವೆ ಎಂಬ ಮನಸ್ಥಿತಿ ಖಂಡನೀಯ” ಎಂದು ಬ್ಯಾನರ್ಜಿ ಹೇಳಿದರು.

“ಕೇಂದ್ರ ಸರ್ಕಾರ ತಾಲಿಬಾನ್‌ಗಳನ್ನು ಬೆಂಬಲದಲ್ಲಿದೆಯೇ? ತಾಲಿಬಾನ್ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡಿದೆ. ಬಿಜೆಪಿಯು ತಾಲಿಬಾನ್ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ಈ ಸ್ಥಿತಿಯಲ್ಲಿ ಇದು ಸಹಜ ಪ್ರಶ್ನೆಯಾಗಿದೆ” ಎಂದು ಅವರು ಪ್ರಶ್ನಿಸಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ತನ್ನ ಬೆಂಬಲ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಆ ಹತಾಶೆಯಿಂದಾಗಿ ಟಿಎಂಸಿ ಮೇಲೆ ರಾಜಕೀಯ ದಾಳಿ ಮಾಡಲು ಮುಂದಾಗಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಭಯೋತ್ಪಾದನೆ: ಲೈಂಗಿಕ ಗುಲಾಮಗಿರಿಯ ಅಪಾಯದಲ್ಲಿ ಆಫ್ಘಾನ್ ಮಹಿಳೆಯರು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights