15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಪಟ್ಟಿ ಕೇಳಿದ ತಾಲಿಬಾನ್; ಮದುವೆಗೆ ಒತ್ತಾಯ!

ಆಫ್ಘಾನಿಸ್ತಾನದ ಹೆಚ್ಚು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ತಾಲಿಬಾನ್‌ ಯತ್ನಿಸುತ್ತಿದೆ. ತಾನಿಬಾನಿಗಳನ್ನು ಹಿಮ್ಮೆಟ್ಟಲು ಅಫ್ಘಾನ್‌ ಸೇನೆ ಘರ್ಷಣೆ ನಡೆಸುತ್ತಿದೆ. ಈ ಹೊತ್ತಿನಲ್ಲಿ ತಾಲಿಬಾನಿಗಳು ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿ ತಮ್ಮದೇ ಕಾನೂನುಗಳನ್ನು ಹೇರಲು ಮುಂದಾಗಿರುವ ತಾಲಿಬಾನ್‌, ಅಲ್ಲಿನ ಧಾರ್ಮಿಕ ಮುಖಂಡರಿಗೆ 15 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರು ಮತ್ತು 45 ವರ್ಷ ಒಳಗಿನ ವಿಧವೆಯ ಪಟ್ಟಿಯನ್ನು ನೀಡುವಂತೆ ಆದೇಶ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ತಾಲಿಬಾನ್ ಗುಂಪಿನಲ್ಲಿರುವ ತಮ್ಮ ಸದಸ್ಯರಿಗೆ ಮದುವೆ ಮಾಡಿಸುವ ಉದ್ದೇಶದಿಂದ 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು 45 ವರ್ಷದೊಳಗಿನ ವಿಧವೆಯರ ಪಟ್ಟಿಯನ್ನು ನೀಡುವಂತೆ ತಾವು ವಶಪಡಿಸಿಕೊಂಡಿರುವ ಪ್ರದೇಶಗಳಲ್ಲಿನ ಎಲ್ಲಾ ಇಮಾಮ್‌ಗಳು ಮತ್ತು ಮುಲ್ಲಾಗಳಿಗೆ ಆದೇಶಿಸಿದೆ ಎಂದು ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಹೆಸರಿನಲ್ಲಿ ಹೊರಡಿಸಲಾದ ಪತ್ರದಲ್ಲಿ ತಿಳಿಸಲಾಗಿದೆ.

ಇರಾನ್, ಪಾಕಿಸ್ತಾನ, ಉಜ್ಬೇಕಿಸ್ತಾನ್ ಮತ್ತು ತಜಿಕಿಸ್ತಾನ್‌ನ ಗಡಿಯಲ್ಲಿರುವ ಹಲವು ಪ್ರಮುಖ ಜಿಲ್ಲೆಗಳು ಮೇಲೆ ತಾಲಿಬಾನ್ ಹಿಡಿತ ಸಾಧಿಸಿದೆ. ಹೀಗಾಗಿ ತಮ್ಮ ಪಡೆಯಲ್ಲಿರುವವರಿಗೆ ಮದುವೆ ಮಾಡಲು ಈ ಆದೇಶವನ್ನು ಹೊರಡಿಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಘರ್ಷಣೆಯಲ್ಲಿ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಸಾವು!

ಅಲ್ಲದೆ, ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದ ತಖಾರ್‌ನಲ್ಲಿರುವ ಮಹಿಳೆಯರು ಏಕಾಂಗಿಯಾಗಿ ತಮ್ಮ ಮನೆಗಳಿಂದ ಹೊರ ಹೋಗುವಂತಿಲ್ಲ. ಒಂದು ವೇಳೆ ಹೊರ ಹೋಗುವುದಾದರೆ ಅವರೊಂದಿಗೆ ಪುರುಷರನ್ನು ಕರೆದೊಯ್ಯಬೇಕು. ಪುರುಷರು ಗಡ್ಡವನ್ನು ತೆಗೆಯುವಂತಿಲ್ಲ ಎಂದೂ ತಾಲಿಬಾನ್‌ ತನ್ನ ಆದೇಶ ಪತ್ರದಲ್ಲಿ ಸೂಚಿಸಿದೆ.

ಈಗ, ತಾಲಿಬಾನ್‌ ಅಧಿಕಾರಿ ವಹಿಸಿಕೊಂಡಾಗಿನಿಂದ ನಾವು ಖಿನ್ನತೆಗೆ ಒಳಗಾಗಿದ್ದೇವೆ. ನಾವು ಮನೆಯಲ್ಲಿಯೂ ಜೋರಾಗಿ ಮಾತನಾಡುವಂತಿಲ್ಲ. ಹಾಡು ಕೇಳುವಂತಿಲ್ಲ. ಮಹಿಳೆಯರನ್ನು ಶುಕ್ರವಾರ ಮಾರುಕಟ್ಟೆಗೆ ಕಳುಹಿಸಲೂ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಹೋದರೆ, ಅವರು ಕುಟುಂಬದ ಬಗ್ಗೆ ವಿಚಾರಿಸುತ್ತಾರೆ. ನಂತರ ಮನೆಗೆ ಬಂದು ನೀವು 18 ವರ್ಷಕ್ಕಿಂತ ಮೇಲ್ಪಟ್ಟ ಯುವತಿಯರನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಅದು ಪಾಪ, ಅವರಿಗೆ ಮದುವೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ. ನಮ್ಮ ಹೆಣ್ಣು ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಮದುವೆಯಾಗಿ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಅಫಘಾನ್ ಹಿರಿಯರಾದ ಹಾಜಿ ರೋಜಿ ಬೇಗ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣಗಳು ಜನರನ್ನು ಕೊಲ್ಲುತ್ತಿವೆ: ಯುಎಸ್‌ ಅಧ್ಯಕ್ಷ ಆರೋಪ

Spread the love

Leave a Reply

Your email address will not be published. Required fields are marked *