ದೇಶದಲ್ಲಿ 38,079 ಹೊಸ ಕೊರೊನಾ ಕೇಸ್ : 560 ಜನ ಬಲಿ..!
ದೇಶದಲ್ಲಿ 38,079 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 560 ಜನ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡಿದೆ.
ಕಳೆದ 24 ಗಂಟೆಗಳಲ್ಲಿ ದಾಖಲಾದ 38,079 ಕೊರೊನಾ ಪ್ರಕರಣಗಳ ಪೈಕಿ ಕೇರಳದಲ್ಲಿ 13,750 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 7,761 ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 2,345 ಪ್ರಕರಣಗಳು, ತಮಿಳುನಾಡು 2,312 ಪ್ರಕರಣಗಳು ಮತ್ತು ಒಡಿಶಾದಲ್ಲಿ 2,070 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ 560 ಜನ ಮಹಾಮಾರಿಗೆ ದೇಶದಲ್ಲಿ ಬಲಿಯಾಗಿದ್ದು, ಇದರಲ್ಲಿ ಮಹಾರಾಷ್ಟ್ರದಲ್ಲಿ 167 ಸಾವುಗಳು ವರದಿಯಾಗಿದ್ದು, ಕೇರಳದಲ್ಲಿ 130 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 43,916 ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ಮೂಲಕ ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,02,27,792ಕ್ಕೆ ತಲುಪಿದೆ.
ದೇಶಾದ್ಯಂತ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 4,24,025ರಷ್ಟಿದ್ದರೆ, ಸಕ್ರಿಯ ಪ್ರಕರಣಗಳು ಒಟ್ಟು ಕ್ಯಾಸೆಲೋಡ್ನ ಶೇಕಡಾ 1.59 ರಷ್ಟಿದೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಹಿಂದಿನ ದಿನದಲ್ಲಿ ಭಾರತ 19,98,715 ಪರೀಕ್ಷೆಗಳನ್ನು ನಡೆಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 42,12,557 ಲಸಿಕೆ ಪ್ರಮಾಣವನ್ನು ನೀಡಲಾಯಿತು, ಒಟ್ಟು 39,96,95,879 ಪ್ರಮಾಣವನ್ನು ನೀಡಲಾಗಿದೆ.

