ತಂದೆ-ತಾಯಿ ಬರೆದ ಪತ್ರ ಓದಿ ಅರವಿಂದ್ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ ಉರುಡುಗ..!
ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್. ಮಾತ್ರವಲ್ಲದೇ ಮನೆಯ ಕೆಲ ಸದಸ್ಯರ ಕಣ್ಣಿಗೆ ಅರವಿಂದ್ ಆಪ್ತಳು ಎಂದು ಗುರುತಿಸಿಕೊಂಡವರು. ಇವರಿಗೆ ತಂದೆ-ತಾಯಿ ಬರೆದ ಪತ್ರ ದೊರೆತಿದ್ದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹೌದು.. ಮನೆಯ ಸದಸ್ಯರಿಗೆ ಕೊಟ್ಟ ಸ್ಕಿಪ್ಪಿಂಗ್ ಟಾಸ್ಕ್ ನಲ್ಲಿ ಪ್ರತಿ ಸ್ಪರ್ಧಿ ವಿರುದ್ಧ ವಿನ್ ಆದರೆ ಅಂಥವರಿಗೆ ಮನೆಯ ಬರೆದ ಪತ್ರವನ್ನು ಓದಲು ನೀಡುವುದಾಗಿ ಬಿಗ್ ಬಾಸ್ ತಿಳಿಸಿದ್ದರು. ಟಾಸ್ಕ್ ನಂತೆ ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿ ಮಧ್ಯೆ ಸ್ಕಿಪ್ಪಂಗ್ ಆಡುವಾಗ ದಿವ್ಯ ವಿನ್ ಆಗಿ ಲೆಟರ್ ಪಡೆದುಕೊಂಡರು. ಪೋಷಕರು ಬರೆದ ಪತ್ರ ಓದಿದ ದಿವ್ಯ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ತಂದೆ-ತಾಯಿಯ ಪ್ರೀತಿಯ ಮಾತುಗಳನ್ನು ಓದಿದ ದಿವ್ಯ ಅರವಿಂದ್ ಹೆಗಲ ಮೇಲೆ ತಲೆ ಇಟ್ಟು ಅತ್ತಿದ್ದಾರೆ. ಕೆಲ ನಿಮಿಷಗಳ ನಂತರ ದಿವ್ಯ ಸಮಾಧಾನಗೊಂಡರು. ಆದರೆ ಆಟದಲ್ಲಿ ಸೋತ ಪ್ರಶಾಂತ್ ಕೂಡ ತಮ್ಮ ಮನೆಯವರು ಬರೆದ ಪತ್ರವನ್ನು ಓದಲಾಗದೇ ಕಣ್ಣೀರಿಟ್ಟರು.
ಒಟ್ಟಿನಲ್ಲಿ ಈ ಟಾಸ್ಕ್ ನನ್ನು ಗೆದ್ದು ಪೋಷಕರು ತಮಗಾಗಿ ಬರೆದ ಪತ್ರಗಳನ್ನು ಪಡೆಯಲು ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಕಾತುರರಾಗಿದ್ದಾರೆ. ಮುಂದಿನ ಆಟದಲ್ಲಿ ಯಾರು ಸೋಲುತ್ತಾರೆ ಯಾರು ಗೆದ್ದು ಪೋಷಕರು ಬರೆದ ಪತ್ರಗಳನ್ನು ಓದುತ್ತಾರೆ ಕಾದು ನೋಡಬೇಕಿದೆ.