ಬಿಗ್ ಬಾಸ್ ಮನೆಯ ಹುಡುಗರಿಗೆ ಪ್ರೇಮ ಪತ್ರ ಬರೆಯಲು ಪೇಪರ್ ಬೇಕಂತೆ…

ಪ್ರೇಮ… ಪ್ರೇಮ.. ಪ್ರೇಮ… ಬಿಗ್ ಬಾಸ್ ಮನೆಯಲ್ಲಿ ಪ್ರೇಮಂದೇ ಆಟ. ಅಷ್ಟಕ್ಕೂ ಯಾರೀ ಪ್ರೇಮ? ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಹೆಸರಿನವರು ಯಾರೂ ಇಲ್ಲವಲ್ಲಾ ಅಂತೀರಾ..? ಅದೇ ಕಣ್ರಿ ಪ್ರೇಮ ಪತ್ರ.

ಹೌದು… ಬಿಗ್ ಬಾಸ್ ಮನೆಯ ಹುಡುಗರಿಗೆ ಪ್ರೇಮ ಪತ್ರ ಬರೆಯುವ ಟಾಸ್ಕ್ ಕೊಟ್ಟಿದ್ದೇ ಕೊಟ್ಟಿದ್ದು ಬಾಯ್ಸ್ ಹಾಸ್ಟೆಲ್ ನಲ್ಲಿ ಹುಡುಗರು ನಿದ್ದೆನೇ ಮಾಡುತ್ತಿಲ್ಲ. ಹಗಲು ರಾತ್ರಿ ಪ್ರೇಮ ಪತ್ರ ಬರೆಯುದರ ಬಗ್ಗೆಯೇ ಚಿಂತೆ ಮಾಡುತ್ತಿರುತ್ತಾರೆ. ಅದೆಷ್ಟರ ಮಟ್ಟಿಗೆ ಅಂದರೆ ಬಿಗ್ ಬಾಸ್ ಈಗಾಗಲೇ ಕೊಟ್ಟ ಪೇಪರ್ ಖಾಲಿಯಾಗಿ ಮತ್ತಿಷ್ಟು ಪೇಪರ್ ಕೊಡಿ ಎನ್ನುವ ಮಟ್ಟಿಗೆ ಹುಡುಗರು ಪ್ರೇಮ ಪತ್ರ ಬರೆಯುವ ಕುತೂಹಲದಲ್ಲಿದ್ದಾರೆ.

ಟಾಸ್ಕ್ ಏನಂದ್ರೆ ಬಿಗ್ ಮನೆಯ ಬಾಯ್ಸ್ ಹಾಸ್ಟೆಲ್ನ ಹುಡುಗರು ಗರ್ಲ್ಸ್ ಹಾಸ್ಟೆಲ್ ಹುಡುಗಿಯರಿಗೆ ಪ್ರೇಮ ಪತ್ರ ಕೊಡಬೇಕು. ಅದನ್ನು ಹುಡುಗಿಯರು ಬಾಯ್ಸ್ ಹಾಸ್ಟೆಲ್ನ ವಾರ್ಡನ್ ಹಾಗೂ ಗರ್ಲ್ಸ್ ಹಾಸ್ಟೆಲ್ನ ವಾರ್ಡನ್ ಸಿಧಿ ಸುಬ್ಬಯ್ಯ ಅವರಿಂದ ಕಾಪಾಡಿಕೊಳ್ಳಬೇಕು. ಹೀಗೆ ಕೊನೆಯಲ್ಲಿ ಯಾರು ಅತೀ ಹೆಚ್ಚು ಪತ್ರ ಹೊಂದಿರುತ್ತಾರೋ ಅವರು ಬಿಗ್ ಬಾಸ್ ಮನೆಯ ಮುಂದಿನ ಕ್ಯಾಪ್ಟನ್ಸಿ ಟಾಸ್ಕ್ ಗೆ ಅರ್ಹರಾಗುತ್ತಾರೆ.

ಹೀಗಾಗಿ ಹುಡುಗರು ಪತ್ರ ಬರೆಯುವುದರಲ್ಲಿ ಬ್ಯುಸಿಯಾದರೆ, ಹುಡುಗಿಯರು ಅದನ್ನ ಕಾಪಾಡಿಕೊಳ್ಳುವುದರಲ್ಲಿ ಬ್ಯುಸಿ. ಇತ್ತ ವಾರ್ಡನ್ ಗಳಾದ ಪ್ರಶಾಂತ್ ಹಾಗೂ ಸಿಧಿ ಪತ್ರಗಳನ್ನು ಹುಡುಕುವುದರಲ್ಲಿ ಬ್ಯುಸಿ. ಹೀಗಾಗಿ ಬಿಗ್ ಬಾಸ್ ಮನೆಯ ಹುಡುಗರಿಗೆ ಪ್ರೇಮ ಪತ್ರ ಬರೆಯಲು ಪೇಪರೇ ಸಾಲುತ್ತಿಲ್ಲವಂತೆ. ಹೀಗಾಗಿ ಒಟ್ಟಿಗೆ ಸೇರಿ ಹುಡುಗರೆಲ್ಲರು ಬಿಗ್ ಬಾಸ್ ಗೆ ಪೇಪರ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಈ ಆಟ ಮಾತ್ರ ಬಲೂ ಜೋರಾಗೇ ನಡೆಯುತ್ತಿದೆ. ಬಿಗ್ ಬಾಸ್ ನೋಡುಗರು ಈ ಆಟವನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights