ಮಂಗನ ಕಾಯಿಲೆಗೆ ಮಂಕಾದ ಉತ್ತರ ಕನ್ನಡ : ಒಂದೇ ದಿನ 5 ಪ್ರಕರಣ ದಾಖಲು

ದೇಶವ್ಯಾಪಿ ಭಯದ ವಾತಾವರಣ ಸೃಷ್ಟಿ ಮಾಡಿದ ಕೊರೊನಾದ ಜೊತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕೂಡ ಜನರಲ್ಲಿ ಭೀತಿ ಹುಟ್ಟಿಸಿದೆ.

ಹೌದು… ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕೋರ್ಲಕೈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ರವಿವಾರ ಒಂದೇ ದಿನಕ್ಕೆ 4 ಕೆ.ಎಫ್.ಡಿ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇಂದು ಮತ್ತೊಂದು ಪ್ರಕರಣ ದಾಖಲಾಗಿ ಜನ ಇನ್ನಷ್ಟು ಆತಂಕ ಪಡುವಂತೆ ಮಾಡಿದೆ.ಇದು ರಾಜ್ಯಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಈಗಾಗಲೇ ಕೊರೊನಾ ಸೋಕು ಹರಡಿರುವವರಲ್ಲಿ ಬೇರೆ ಕಾಯಿಲೆಗಳು ಅಥವ ವಯೋಸಹಜ ಕಾಯಿಲೆಗಳು ಇದ್ದರೆ ಚಿಕಿತ್ಸೆ ನೀಡುವುದು, ಆ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ. ಹೀಗಿರುವಾಗ ಮಂಗನ ಕಾಯಿಲೆಯೊಂದು ಹರಡುತ್ತಿರುವುದು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯನ್ನು ಫಜೀತಿಗೆ ಸಿಲುಕಿದಂತಾಗಿದೆ.

ಈ ಹಿಂದೆ ಹಾಗೂ ಹೊಸದಾಗಿ ದಾಖಲಾದ ಪ್ರಕರಣಗಳನ್ನು ಒಟ್ಟುಗೂಡಿಸಿದರೆ ಕೆ.ಎಫ್.ಡಿ ಪ್ರಕರಣಗಳು ಸಿದ್ದಾಪುರ ವ್ಯಾಪ್ತಿಯಲ್ಲೇ 32 ದಾಖಲಾಗಿವೆ. ಹೀಗಾಗಿ ಈ ಸ್ಥಳದಲ್ಲಿ ಆತಂಕ ಹೆಚ್ಚಾಗಿದ್ದು ಕೋರ್ಲಕೈ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗನ ಕಾಯಿಲೆ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇಂದು ಸಂಜೆ ರಾಜ್ಯ ಆರೋಗ್ಯ ಮಹಾನಿರ್ದೇಶಕರ ಜೊತೆ ವಿಡಿಯೋ ಸಂವಾದ ನಡೆಯಲಿದೆ. ಜೊತೆಗೆ ಕಾಯಿಲೆ ತೀವ್ರತೆಯ ಬಗ್ಗೆ ಜಂಟಿ ನಿರ್ದೇಶಕರು ವರದಿ ಸಲ್ಲಿಸೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಮಂಗನ ಕಾಯಿಲೆ ಹೆಚ್ಚಾಗದಂತೆ ತಡೆಯುವುದು ಸದ್ಯದ ಪರಿಸ್ಥಿತಿಗೆ ತುರ್ತಾಗಿ ಆಗಬೇಕಾದಂತ ಕೆಲಸವಾಗಿದ್ದು ರಾಜ್ಯ ಆರೋಗ್ಯ ಇಲಾಖೆ ಇದನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವುದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights