ಭಾರತದಲ್ಲಿ ಮುಂದುವರೆದ ಕೊರೊನಾ ಹಾವಳಿ : 81 ಲಕ್ಷ ದಾಟಿದ ಕೊರೊನಾ ಕೇಸ್!

ಕಳೆದ ಮೂರು ನಾಲ್ಕು ದಿನದಿಂದ ದೇಶದಲ್ಲಿ ಕೊರೊನಾ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಕ್ಷಿಣಿಸಿದಂತೆ ಕಾಣಿಸುತ್ತಿದೆ. ಹಾಗಂತಾ ನಾವು ಕೊರೊನಾ ವೈರಸ್ ನನ್ನು ನಿರ್ಲಕ್ಷಿಸುವಂತಿಲ್ಲ. ಆದರೂ ಮಹಾಮಾರಿ ಕೊರೊನಾ ವೈರಸ್ ಗೆ ಲಸಿಕೆ ಇಲ್ಲ ಎನ್ನುವುದು ಗಮನಾರ್ಹ ವಿಷಯ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 48,268 ಸೋಂಕಿತರು ದಾಖಲಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 81 ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿಯುತ್ತದೆ.

ದೇಶದಲ್ಲಿ ಈಗ 81,37,119 ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳ ಅವಧಿಯಲ್ಲಿ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾದ ಭಾರತದಲ್ಲಿ 551 ಸಾವುಗಳನ್ನು ವೈರಸ್‌ಗೆ ಸಂಬಂಧಿಸಿದೆ ಎಂದು ವರದಿ ಹೇಳುತ್ತದೆ. ಈವರೆಗೆ ದೇಶದ ಒಟ್ಟು ಸಾವುನೋವುಗಳ ಸಂಖ್ಯೆ 1,21,641 ಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇಕಡಾ 91 ದಾಟಿದೆ, ಸಾವಿನ ಪ್ರಮಾಣ ಶೇಕಡಾ 1.49 ರಷ್ಟಿದೆ.

ಸೋಂಕಿತರು ಹಾಗೂ ಗುಣಮುಖರಾಗುವವರ ಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಚೇತರಿಕೆ ಪ್ರಮಾಣ ನೆಮ್ಮದಿ ತರುತ್ತದೆ. ಆದರೂ ಕೊರೊನಾಗೆ ಲಸಿಕೆ ಇಲ್ಲದಿದ್ದರಿಂದ ಜಾಗೃತರಾಗಿರುವುದು ಮುಖ್ಯವಾಗಿದೆ. ಹಿರಿಯರಲ್ಲಿ ಹೆಚ್ಚು ಪರಿಣಾಮ ಉಂಟು ಮಾಡುವ ವೈರಸ್ ವಯೋ ಸಹಜ ಕಾಯಿಲೆಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತದೆ. ಹೀಗಾಗಿ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದ್ದರು ಎಚ್ಚರಿಕೆಯಿಂದಿರುವುದು ಅವಶ್ಯಕ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights