FACT CHECK | ಹಲ್ಲೆಗೊಳಗಾದ ನಂತರ ಆಸ್ಪತ್ರೆ ಸೇರಿದ್ರಾ ಕನ್ಹಯ್ಯ ಕುಮಾರ್ ?

ಈಶಾನ್ಯ ದಿಲ್ಲಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕನ್ಹಯ್ಯಾ ಕುಮಾರ್ ಅವರ ಮೇಲೆ ಇತ್ತೀಚೆಗೆ ಏಳೆಂಟು ಜನರ ಗುಂಪು ಹಲ್ಲೆ ನಡೆಸಿತ್ತು. ಕನ್ಹಯ್ಯಾ ಅವರನ್ನು ಥಳಿಸಿರುವ ದುಷ್ಕರ್ಮಿಗಳು, ಅವರ ಮೇಲೆ ಕಪ್ಪು ಇಂಕ್ ಕೂಡ ಎಸೆದಿದ್ದರು. ಈಗ ಕನ್ಹಯ್ಯಾ ಕುಮಾರ್ ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಒಂದೇ ಚಪ್ಪಲಿ ಏಟಿಗೆ ಹೀಗೆ ಆಸ್ಪತ್ರೆ ಸೇರಿದ್ದಾರೆ ಎನ್ನುವುದಾದರೆ, ಮುಂದಿನ ಸಲ ನಾನು ಶೂ ಧರಿಸಿ ಹೋಗುತ್ತೇನೆ ಎಮದು ಪ್ರತಿಪಾದಿಸಿ ಕನ್ಹಯ್ಯಾ ಕುಮಾರ್ ರೋಹಿತ್ ವೇಮುಲಾ ಚಿತ್ರವಿರುವ ಟೀ ಶರ್ಟ್ ಧರಿಸಿ ಮಲಗಿರುವ ಫೋಟೊವನ್ನು ಎಕ್ಸ್‌ ಖಾತೆ ಬಳಕೆದಾರರು ಹಂಚಿಕೊಳ್ಳಲಾಗಿದೆ.

ಮೋದಿ ಪರಿವಾರ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಮೇ 20 ರಂದು ಕನ್ಹಯ್ಯಾ ಕುಮಾರ್ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದನ್ನು ಇತ್ತೀಚೆಗೆ ಅವರ ಮೇಲಿನ ದಾಳಿಗೆ ಲಿಂಕ್ ಮಾಡಿದೆ. ಇದರೊಂದಿಗೆ ಒಂದೇ ಚಪ್ಪಲಿಯಿಂದ ಈ ಸ್ಥಿತಿ ಸಂಭವಿಸಿದೆ, ಈಗ ನಾನು ಶೂಗಳನ್ನು ಧರಿಸಬೇಕು ಎಂದು ಬರೆಯಲಾಗಿದೆ. ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಕನ್ಹಯ್ಯಾ ಕುಮಾರ್ ಅವರ ವೈರಲ್ ಪೋಸ್ಟ್‌ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, 7 ಮೇ 2016 ರಂದು NDTV ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ.

vishvasnews

NDTV ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಉಪವಾಸ ಸತ್ಯಾಗ್ರಹದ ನಂತರ ಅಸ್ವಸ್ಥರಾಗಿದ್ದು ಅವರನ್ನು ಜೆಎನ್‌ಯು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಹಾಗಾಗಿ ಈ ಚಿತ್ರ 2024ರ ಲೋಕಸಭಾ ಚುನಾವನೇಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

21 ಮೇ 2024 ರಂದು ಟಿವಿ 9 ಭಾರತ್ ವರ್ಷ್ ತನ್ನ ವೆಬ್‌ಸೈಟ್‌ನಲ್ಲಿ ಮೇ 17 ರಂದು ಕನ್ಹಯ್ಯಾ ಕುಮಾರ್ ಮೇಲೆ ದಾಳಿ ಮಾಡಲಾಗಿದೆ ಎಂದು ಸುದ್ದಿ ಪ್ರಕಟಿಸಿತು. ಈ ಪ್ರಕರಣದಲ್ಲಿ ಆರೋಪಿ ಅಜಯ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕರ್ಕರ್ದೂಮ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.

ಪೂರ್ವ ದಿಲ್ಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ಮೇ 17 ರಂದು ಕನ್ಹಯ್ಯಾ ಕುಮಾರ್ ಮೇಲೆ ದಾಳಿ ಮಾಡಲಾಗಿದೆ, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಾಳಿಕೋರರ ಪೈಕಿ ಇಬ್ಬರು ಸಹ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಅವರ ಮೇಲೆ ತಾವೇ ದಾಳಿ ನಡೆದಿರುವುದಾಗಿ ಪ್ರತಿಪಾದಿಸಿದ್ದಾರೆ. ಅವರು ದೇಶವನ್ನು ವಿಭಜಿಸುವ ಘೋಷಣೆಗಳನ್ನು ಕೂಗಿದ್ದು, ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದಕ್ಕಾಗಿ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕನ್ಹಯ್ಯ ಕುಮಾರ್‌,‘ಕ್ಷೇತ್ರದಲ್ಲಿ ನನ್ನ ಪ್ರತಿಸ್ಪರ್ಧಿಯಾಗಿರುವ ಬಿಜೆಪಿಯ ಮನೋಜ್‌ ತಿವಾರಿ ಅವರೇ ಈ ದಾಳಿ ನಡೆಸುವಂತೆ ಕುಮ್ಮಕ್ಕು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ನನ್ನ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಹಾಲಿ ಸಂಸದ ತಿವಾರಿ, ನನ್ನ ಮೇಲೆ ಹಲ್ಲೆ ನಡೆಸಲು ಗೂಂಡಾಗಳನ್ನು ಕಳುಹಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. ‘ಈ ರೀತಿಯ ಹಿಂಸಾ ಪ್ರವೃತ್ತಿಗೆ ಮೇ 25ರಂದು ಜನರು ಮತದಾನದ ಮೂಲಕ ಉತ್ತರ ನೀಡುವರು’ ಎಂದೂ ಅವರು ಹೇಳಿದ್ದಾರೆ. ಹಾಗಾಗಿ ಕನ್ಹಯ್ಯ ಮೇಲೆ ದಾಳಿ ನಡೆದ ನಂತರ ಆಸ್ಪತ್ರೆ ಸೇರಿದ್ದಾರೆ ಎಂಬುದು ಸುಳ್ಳು.

ವೈರಲ್ ಚಿತ್ರದ ಕುರಿತು ಮತ್ತಷ್ಟು ಮಾಹಿತಿಗಾಗಿ ವಿಶ್ವಾಸ್‌ ನ್ಯೂಸ್ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ತಂಡದ ಗಿರೀಶ್ ಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಕನ್ಹಯ್ಯಾ ಕುಮಾರ್ ಅವರ ವೈರಲ್ ಫೋಟೊ ಹಳೆಯದು ಮತ್ತು ಅವರು ಜೆಎನ್‌ಯು ಕಾಲೇಜಿನ ಹೋರಾಟದ ಸಂದರ್ಭದ್ದು ಎಂದು ಖಚಿತಪಡಿಸಿದ್ದಾರೆ.

2016 ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಉಪವಾಸ ಸತ್ಯಾಗ್ರಹದಿಂದ ಅಸ್ವಸ್ಥರಾಗಿ ಆಸ್ಪತ್ರೆ ಶೇರಿದ್ದ 8 ವರ್ಷದ ಹಳೆಯ ಚಿತ್ರವನ್ನು, 2024ರ ಲೋಕಸಭಾ ಚುನಾವಣೆಯಲ್ಲಿ ನಡೆದ ದಾಳಿಗೆ ಸಂಬಂಧಿಸಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | RSS ಮುಖ್ಯಸ್ಥ ಮೋಹನ್ ಭಾಗವತ್ ಕಾಂಗ್ರೆಸ್‌ ಕೊಡುಗೆಯನ್ನು ಹೊಗಳಿದ್ದಾರೆ ಎನ್ನಲಾದ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights