ಕೇರಳ: ಮೊಬೈಲ್‌ ಗೇಮ್‌ನಿಂದ ಹಣ ಕಳೆದುಕೊಂಡ ಬಾಲಕ ಆತ್ಮಹತ್ಯೆ

ಬಾಲಕನೊಬ್ಬ ಮೊಬೈಲ್ ಗೇಮ್‌ಗಳ ಗೀಳಿನಿಂದ ಹಣ ಕಳೆದುಕೊಂಡು, ಮನೆಯವರು ಬೈಯುತ್ತಾರೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ.

ಆನ್‌ಲೈನ್‌ ಗೇಮ್‌ಗಳ ಆವಳಿ ಹೆಚ್ಚಾಗುವ ಮೊದಲು ಯುವಜನರು ಕ್ರೀಡೆಗಳ ಮೇಲೆ ಬೆಟ್ಟಿಂಗ್‌ ಆಡುವ ಮೂಲಕ ಹಣ ಕಳೆದುಕೊಂಡು ಅತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದರು. ಈಗ, ಬಾಲಕರು ಮತ್ತು ಯುವಜನರು ಮೊಬೈಲ್ ಗೇಮ್‌ಗಳ ಗೀಳು ಹತ್ತಿಸಿಕೊಂಡಿದ್ದಾರೆ. ಈ ಗೇಮ್‌ಗಳು ಹಣ ಕಸಿಯುವುದಷ್ಟೇ ಅಲ್ಲದೇ ಸಾವಿಗೂ ಕೂಡ ಆಹ್ವಾನ ನೀಡುತ್ತದೆ ಎಂಬುದಕ್ಕೆ ದೇಶದಲ್ಲಿ ಹಲವು ನಿದರ್ಶನಗಳು ಸಿಕ್ಕಿವೆ. ಇದಕ್ಕೆ ಕೇರಳದ ಬಾಲಕನ ಸಾವು ಮತ್ತೊಂದು ನಿದರ್ಶನವಾಗಿದೆ.

ಮೃತ ವಿದ್ಯಾರ್ಥಿಯನ್ನು ಎಸ್. ಆಕಾಶ್ (14) ಎಂದು ಗುರುತಿಸಲಾಗಿದೆ. ತ್ರಿಶೂರ್‌ನ ಇರಿಂಜಲಕುಡ ಬಳಿಯ ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಮಂಗಳವಾರ ಸಂಜೆ ಆಕಾಶ್ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕಾಶ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಾಂಶುಪಾಲೆ, ಶಿಕ್ಷಕನ ಬಂಧನ

ಬಳಿಕ ಹುಡುಕಾಟದ ವೇಳೆ ಬುಧವಾರ ಕೊಳದ ಬಳಿ ಬಾಲಕನ ಪಾದರಕ್ಷೆ ಹಾಗೂ ಸೈಕಲ್ ದೊರೆತಿದೆ. ತಕ್ಷಣ ಪೊಲೀಸರು ಅಕ್ಕ-ಪಕ್ಕ ಹುಡುಕಿದ್ದು, ಕೊಳದಲ್ಲಿ ಆಕಾಶ್‌ನ ಮೃತದೇಹ ಕಾಣಿಸಿದೆ.

“ಒಂಬತ್ತನೇ ತರಗತಿ ಓದುತ್ತಿದ್ದ ಆಕಾಶ್‌ “ಫ್ರೀ ಫೈರ್” (Free Fire) ನಂತಹ ಮೊಬೈಲ್ ಗೇಮ್‌ಗಳಿಗೆ ಹಣವನ್ನು ಖರ್ಚು ಮಾಡಿದ್ದಾರೆ. ಇದಿಂದ ಆತನ ತಂದೆ ಬೈದಿದ್ದಾರೆ ಎಂದು ಶಂಕಿಸಲಾಗಿದೆ. ಇದರಿಂದ ಬಾಲಕ ಇಂತಹ ನಿರ್ಧಾರ  ಮಾಡಿದ್ದಾರೆ” ಎಂದು ಇರಿಂಜಲಕುಡ ಪೊಲೀಸರು ತಿಳಿಸಿದ್ದಾರೆ.

ಇನ್ನು ಕೆಲವು ವರದಿಗಳ ಪ್ರಕಾರ ಆಕಾಶ್ ಮೊಬೈಲ್ ಗೇಮ್‌ನಲ್ಲಿ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಇದರಿಂದ ಮನೆಯಲ್ಲಿ ಬೈಯಬಹುದು ಎಂದು ಹೆದರಿ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.

ಇದನ್ನೂ ಓದಿ: ಚಿತ್ರದುರ್ಗ: ನನ್ನ ಸಾವಿಗೆ ಪೊಲೀಸರೇ ಕಾರಣ; ಗೋಡೆ ಮೇಲೆ ರಕ್ತದಿಂದ ಬರೆದು ವ್ಯಕ್ತಿ ಆತ್ಮಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights