ಹವಾಮಾನ ಬದಲಾವಣೆ ತಗ್ಗಿಸಲು ಕರ್ನಾಟಕಕ್ಕೆ 52 ಲಕ್ಷ ಕೋಟಿ ರೂ. ಅಗತ್ಯ!

ಹವಾಮಾನ ಬದಲಾವಣೆಯ ಅಳವಡಿಕೆ ಮತ್ತು ತಗ್ಗಿಸುವಿಕೆಯ ಪ್ರಯತ್ನಗಳಿಗಾಗಿ ಕರ್ನಾಟಕಕ್ಕೆ 2025 ರ ವೇಳೆಗೆ 20,88,041.23 ಕೋಟಿ ರೂಪಾಯಿ ಮತ್ತು 2030 ರ ವೇಳೆಗೆ 52,82,744.32 ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಹಣವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಬೇಕಾಗುತ್ತದೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಅಂದಾಜಿಸಿದೆ.

EMPRI ಸಿದ್ಧಪಡಿಸಿದ 2015ರ ವರದಿಯ ಎರಡನೇ ಆವೃತ್ತಿಯಾದ ಹವಾಮಾನ ಬದಲಾವಣೆಯ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ-2 ರ ಕರಡಿಯಲ್ಲಿ ಈ ವೆಚ್ಚದ ಅಂದಾಜು ರಚಿಸಲಾಗಿದೆ. ವರದಿಯ ಅನುಮೋದನೆ ಮತ್ತು ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ.

ಈ ಆವೃತ್ತಿಯನ್ನು ತಯಾರಿಸಲು 15 ಹವಾಮಾನ ಮಾದರಿಗಳನ್ನು ಬಳಸಲಾಗಿದೆ. 2015ರ ವರದಿಯಲ್ಲಿ ಮಾಡಿದ ಶಿಫಾರಸುಗಳ ಮೇಲೆ ಮಾಡಲಾಗಿರುವ ಸಾಧನೆಗಳು ಮತ್ತು ಕಾರ್ಯಗಳನ್ನು ಮೌಲ್ಯಮಾಪನವನ್ನು ಪರಿಸರ ಮತ್ತು ಶಿಕ್ಷಣ ಕೇಂದ್ರವು ನಡೆಸುತ್ತಿದೆ ಎಂದು EMPRI ಮಹಾನಿರ್ದೇಶಕ ಜಗಮೋಹನ್ ಶರ್ಮಾ ಮಂಗಳವಾರ ಹೇಳಿದ್ದಾರೆ.

ಬೆಂಗಳೂರು ಹವಾಮಾನ ಬದಲಾವಣೆ ಉಪಕ್ರಮ-ಕರ್ನಾಟಕ ಆಯೋಜಿಸಿದ್ದ “COP-26 ಗ್ಲಾಸ್ಗೋ, ಹವಾಮಾನ ಬದಲಾವಣೆ ಶಿಫಾರಸುಗಳು ಮತ್ತು ಕರ್ನಾಟಕದ ಮೇಲೆ ಪರಿಣಾಮ” ಕುರಿತ ಚರ್ಚೆಯಲ್ಲಿ ಮಾತನಾಡಿದ ಶರ್ಮಾ ಅವರು, ಬೇಸಿಗೆ ಮತ್ತು ಚಳಿಗಾಲದ ತಾಪಮಾನವು 0.5 ರಿಂದ 2.5 ಡಿಗ್ರಿ ಸೆಲ್ಸಿಯಸ್‌ಗೆ ಬದಲಾಗುತ್ತದೆ ಮತ್ತು ಮಳೆಯ ದಿನಗಳು ಹೆಚ್ಚಾಗುತ್ತವೆ, ಇದು ರಬಿ ಮತ್ತು ಖಾರಿಫ್ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಅಂದಾಜಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಗದಿತ ಸ್ಥಳದಲ್ಲಿ ನಿಲ್ಲಿಸದ KSRTC ಬಸ್: ಕೋರ್ಟ್‌ ಮೆಟ್ಟಿಲೇರಿದ ಪ್ರಯಾಣಿಕರಿಗೆ ಜಯ; 1000 ರೂ. ಪರಿಹಾರ!

“ಹವಾಮಾನ ಬದಲಾವಣೆಯನ್ನು ಎಲ್ಲಾ ಕೋನಗಳಿಂದ ಪರಿಹರಿಸಬೇಕು, ವಿಶೇಷವಾಗಿ ತಳಮಟ್ಟದಲ್ಲಿ ಹವಾಮಾನ ಬದಲಾವಣೆಯ ನೇರ ಪರಿಣಾಮವನ್ನು ಎದುರಿಸಲು ಸಿದ್ದರಾಗಬೇಕು. ಅದಕ್ಕಾಗಿ, ಮೌಲ್ಯಮಾಪನ ಮತ್ತು ಪರಿಹಾರ ಕ್ರಮಗಳನ್ನು ಪಂಚಾಯತ್ ಮಟ್ಟದಲ್ಲಿ ರೂಪಿಸಬೇಕು” ಎಂದು ಡಾ.ಎಚ್.ಎನ್.ರವೀಂದ್ರನಾಥ್ ಸಲಹೆ ನೀಡಿದ್ದಾರೆ.

ಹವಾಮಾನ ಬದಲಾವಣೆಯನ್ನು ಪರಿಹರಿಸುವ ಯೋಜನೆಗಳಿಗೆ ಹಣವನ್ನು ನೀಡಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿದೆ. ಹೀಗಾಗಿ, ಕರ್ನಾಟಕ ಮತ್ತು ಭಾರತ ಅಂತಹ ಯೋಜನೆಗಳನ್ನು ಸಿದ್ಧಪಡಿಸಲು ಪ್ರಾರಂಭಿಸಬೇಕು. ಆಗ ಮಾತ್ರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರಿಸರ ಪ್ರಭಾವವನ್ನು ಪರಿಹರಿಸಲು ಹಣ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಬೆಳೆ ಪದ್ಧತಿ ಬದಲಾಗಿದೆ

ರಾಜ್ಯ ಸರ್ಕಾರವು ಕಾರ್ಯಗತಗೊಳಿಸುವ ಸಣ್ಣ ಯೋಜನೆಗಳು ಪ್ರಮುಖವಾಗಿ ಪರಿಸರ ಮತ್ತು ಪರಿಸರ ಸಂಬಂಧಿತ ವಲಯದ ಮೇಲೆ ಪರಿಣಾಮ ಬೀರುತ್ತವೆ. ಸೌರಶಕ್ತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಶೇ.80ರಷ್ಟು ಸೌರ ಫಲಕಗಳು ಚೀನಾದಲ್ಲಿ ತಯಾರಾಗಿರುವುದು ಅನೇಕರಿಗೆ ತಿಳಿದಿಲ್ಲ. ಒಮ್ಮೆ ಅವುಗಳನ್ನು ಭಾರತದಲ್ಲಿ ತಯಾರಿಸಿದರೆ, ಡೈನಾಮಿಕ್ಸ್ ಬದಲಾಗುತ್ತದೆ ಎಂದು ರವೀಂದ್ರನಾಥ್ ಹೇಳಿದ್ದಾರೆ.

COP-26 ನಲ್ಲಿ ಭಾರತವು ದ್ವೀಪ ರಾಷ್ಟ್ರಗಳಿಗೆ ಸಹಾಯ ಮಾಡಲು ಬದ್ಧವಾಗಿದೆ. ಆದರೆ, ಕರ್ನಾಟಕದಲ್ಲಿ 94 ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳು ಈಗಾಗಲೇ ಮಣ್ಣಿನ ಸವೆತಕ್ಕೆ ಸಾಕ್ಷಿಯಾಗುತ್ತಿವೆ, ಅದರ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಮಳೆಗಾಲ ಬದಲಾದಂತೆ ಬೆಳೆ ಬೆಳೆಯುವ ಮಾದರಿ ಮತ್ತು ಪದ್ದತಿ ಬದಲಾಗಿದೆ. ಒಣ ಪ್ರದೇಶಗಳು ಮತ್ತು ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಹೆಚ್ಚು ಮಳೆ ಕಂಡುಬರುತ್ತದೆ. ಅಲ್ಲಿನ ಮಣ್ಣು ಕಡಿಮೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: T-20 ವಿಶ್ವಕಪ್‌ನ ಹೀರೋ ಡೇವಿಡ್ ವಾರ್ನರ್; ಅವರನ್ನು SRH ಕೈಬಿಟ್ಟಿದ್ದೇಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights