T-20 ವಿಶ್ವಕಪ್‌ನ ಹೀರೋ ಡೇವಿಡ್ ವಾರ್ನರ್; ಅವರನ್ನು SRH ಕೈಬಿಟ್ಟಿದ್ದೇಕೆ?

ಸೆಪ್ಟೆಂಬರ್‌ನಲ್ಲಿ ಐಪಿಎಲ್ ಫ್ರಾಂಚೈಸಿಯಿಂದ ತಮ್ಮನ್ನು ಕೈಬಿಟ್ಟಾಗಿನಿಂದ ನವೆಂಬರ್‌ನಲ್ಲಿ ಟಿ-20 ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆಲ್ಲುವವರೆಗೆ ಡೇವಿಡ್‌ ವಾರ್ನರ್‌ ಸಾಕಷ್ಟು ಏರುಪೇಟುಗಳನ್ನು ಕಂಡರು. ಇದೆಲ್ಲದರ ನಡುವೆ, ಆಸ್ಟ್ರೇಲಿಯಾ ಚೊಚ್ಚಲ ಟಿ-20 ವಿಶ್ವಕಪ್‌ ಗೆಲ್ಲಲು ಓಪನರ್‌ ಬ್ಯಾಟ್ಸ್‌ಮನ್‌ ವಾರ್ನರ್‌ ನಿರ್ಣಾಯಕ ಪಾತ್ರ ವಹಿಸಿದರು. ಭಾನುವಾರ, ಆಸ್ಟ್ರೇಲಿಯಾ ವಿಶ್ವಕಪ್ ಪ್ರಶಸ್ತಿ ಜಯಿಸಿತು.

UAEಯಲ್ಲಿ ನಡೆದ IPL 2021ರ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಇದೇ ಸಮಯದಲ್ಲಿ ವಾರ್ನರ್‌ ಅವರನ್ನು SRH ತಂಡದ ನಾಯಕತ್ವದಿಂದ ತೆಗೆದು ಹಾಕಲಾಯಿತು. ಮಾತ್ರವಲ್ಲದೆ, ತಂಡದಿಂದಲೂ ಕೈಬಿಡಲಾಯಿತು.

ವರ್ಷಾನುಗಟ್ಟಲೆ ನೀವು ಅತ್ಯಂತ ಹೆಚ್ಚಾಗಿ ಪ್ರೀತಿಸಿದ ತಂಡದಿಂದ ನಿಮ್ಮ ತಪ್ಪಿಲ್ಲದೆಯೂ ನಿಮ್ಮನ್ನು ಕೈಬಿಟ್ಟಾಗ ಮತ್ತು ಕಾರಣ ನೀಡದೇ ನಾಯಕತ್ವದಿಂದ ಕಿತ್ತುಹಾಕಿದಾಗ, ಅದು ತುಂಬಾ ನೋವುಂಟುಮಾಡುತ್ತದೆ. ಆದರೆ, ಭಾರತದಲ್ಲಿನ ಅಭಿಮಾನಿಗಳು ಯಾವಾಗಲೂ ನಮ್ಮ ಜೊತೆ ಇರುತ್ತಾರೆ. ಅಲ್ಲಿ ನನಗಾಗಿ ಮತ್ತು ಅವರಿಗಾಗಿ ನಾವು ಆಡುತ್ತೇವೆ. ನಾವು ಮನರಂಜನೆಗಾಗಿ ಆಡುತ್ತೇವೆ. ನಾವು ಉತ್ತಮ ಪ್ರದರ್ಶನವನ್ನು ನೀಡಲು ಆಡುತ್ತೇವೆ” ಎಂದು ದಿ ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ವಾರ್ನರ್ ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಒಳಗೇ ಮುಂಬೈ ಗುಂಪಿದೆ; ತಂಡವನ್ನೂ ತೊರೆಯಲಿದ್ದಾರೆ ಕೊಹ್ಲಿ: ಮಾಜಿ ಕ್ರಿಕೆಟಿಗ

2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ ಪ್ರಶಸ್ತಿಗೆ ಕೊಂಡೊಯ್ದ ಡೇವಿಡ್ ವಾರ್ನರ್, ಐಪಿಎಲ್ 2021ರ ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದಾಗ್ಯೂ, SRH ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳದಿದ್ದರೂ, ಅವರು ಕಠಿಣ ತರಬೇತಿ ಪಡೆಯುತ್ತಿದ್ದರು ಎಂದು ಅವರು ಹೇಳಿದ್ದರು.

“ನನಗೆ ಐಪಿಎಲ್ ತಂಡದಲ್ಲಿ ಸ್ಥಾನ ಸಿಗದಿರಲು ಕಾರಣವೇನಿರಬಹುದು. ನಾನು ಅತ್ಯಂತ ಕಠಿಣ ತರಬೇತಿಯನ್ನು ಪಡೆದುಕೊಳ್ಳುತ್ತಿದೆ. ನಾನು ಒಂದು ದಿನವೂ ಪ್ರಾಕ್ಟೀಸ್‌ಗೆ ತಪ್ಪಿಸಿಕೊಳ್ಳಲಿಲ್ಲ. ನಾನು ನೆಟ್‌ಗಳ ಮಧ್ಯೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದೆ. ಎಲ್ಲವೂ ಕಾರ್ಯರೂಪಕ್ಕೆ ಬರುವ ವೇಳೆಗೆ ನನ್ನನ್ನು ಕೈಬಿಡಲಾಯಿತು. ಇದು ಕೇವಲ ಸಮಯದ ವಿಷಯವಾಗಿದೆ. ಆದ್ದರಿಂದ, ನನಗೆ ನೋವಾಗಿದೆ. ಆದರೂ, ನನಗೆ ಇನ್ನೊಂದು ಅವಕಾಶವಿದೆ ಎಂದು ತಿಳಿದಿತ್ತು” ವಾರ್ನರ್ ತಿಳಿಸಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ತನ್ನ ಚೊಚ್ಚಲ ಟಿ-20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. ಡೇವಿಡ್ ವಾರ್ನರ್ ಅವರು ಅದ್ವಿತೀಯ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾದರು. ಈ ಟೂರ್ನಿಯಲ್ಲಿ ವಾರ್ನರ್‌ 7 ಇನ್ನಿಂಗ್ಸ್‌ಗಳಲ್ಲಿ 289 ರನ್ ಗಳಿಸಿದರು.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ; ಐಐಟಿ ಪದವೀಧರನ ಬಂಧನ

Spread the love

Leave a Reply

Your email address will not be published. Required fields are marked *