ಚಿತ್ರದುರ್ಗ: ನನ್ನ ಸಾವಿಗೆ ಪೊಲೀಸರೇ ಕಾರಣ; ಗೋಡೆ ಮೇಲೆ ರಕ್ತದಿಂದ ಬರೆದು ವ್ಯಕ್ತಿ ಆತ್ಮಹತ್ಯೆ

ತನ್ನ ಸಾವಿಗೆ ಪೊಲೀಸರೇ ಕಾರಣ ಎಂದು ಗೋಡೆಯ ಮೇಲೆ ಬರೆದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಚಿತ್ರದುರ್ಗ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ವೆಂಕಟೇಶ್ ಎಂದು ಗುರುತಿಸಲಾಗಿದೆ. ಇವರು ಹಿರಿಯೂರು  ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅಂಗಡಿ ಮಳಿಗೆಯೊಂದರ ಮೇಲೆ ಪಂಚೆಯಿಂದ ನೇಣು ಬಿಗಿದುಕೊಂಡು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾವಿಗೂ ಮುನ್ನ ತನ್ನ ಕೈ ಕೊಯ್ದುಕೊಂಡು, ತನ್ನ ರಕ್ತದಿಂದಲೇ ಗೋಡೆ ಮೇಲೆ ‘ನನ್ನ ಸಾವಿಗೆ ಪೊಲೀಸರೇ ಕಾರಣ’ ಎಂದು ಬರೆದಿದ್ದಾರೆ. ಗೋಡೆ ಬರಹ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಸಾರ್ವಜನಿಕರು ಪೊಲೀಸರಿಗೆ ಈ ಮಾಹಿತಿ ನೀಡಿದ್ದು, ಎಸ್‌ಪಿ ಜಿ.ರಾಧಿಕಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಡೆ ಮೇಲೆ ‘ನನ್ನ ಸಾವಿಗೆ ಪೊಲೀಸರೇ ಕಾರಣ, ಮದುವೆ..’ ಎಂಬ ಇತ್ಯಾದಿ ಅಸ್ಪಷ್ಟ ಬರಹಗಳು ಕಂಡುಬಂದಿವೆ. ತನಿಖೆಗೆ ಎಫ್​ಎಸ್‌ಎಲ್ ವಿಧಿ ವಿಜ್ಞಾನ ತಜ್ಞರನ್ನು ಕೋರಲಾಗಿದೆ.

ವೆಂಕಟೇಶ್‌ ಅವರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯಾವುದಾದರೂ ದೂರು ನೀಡಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು. ವಿವರವಾದ ತನಿಖೆ ನಡೆಸಬೇಕು ಎಂದು ಎಸ್‌ಪಿ ರಾಧಿಕಾ ಆದೇಶಿಸಿದ್ದಾರೆ.

ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.

ಇದನ್ನೂ ಓದಿ: ನಟ ಸುಶಾಂತ್‌ ಸಿಂಗ್‌ ಕುಟುಂಬದ ಸದಸ್ಯರು ತೆರಳುತ್ತಿದ್ದ ವಾಹನಕ್ಕೆ ಅಪಘಾತ; ಐವರ ದುರ್ಮರಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights