ಫ್ಯಾಕ್ಟ್‌ಚೆಕ್: ಕಾಫಿಗೆ ನಿಂಬೆ ರಸ ಬೆರೆಸಿ ಕುಡಿದರೆ ದೇಹದ ತೂಕ ಕಡಿಮೆ ಆಗುವುದೇ?

ನೀವು ಕುಡಿಯುವ ಕಾಫಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿದರೆ ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ ಎಂದು ಹೇಳುವ ವಿಡಿಯೊವೊಂದು ವೈರಲ್ ಆಗಿದೆ. ಕಾಫಿಗೆ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ ಮತ್ತು ಕೇವಲ 5 ದಿನಗಳಲ್ಲಿಯೇ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಂದೇಶ ಸಾರುತ್ತಿರುವ ಒಂದು ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಮಹಿಳೆಯೊಬ್ಬರು ಅರ್ಧ ನಿಂಬೆ ರಸ ಮತ್ತು ಅರ್ಧ ಸ್ಪೂನ್ ಕಾಫಿ ಡಿಕಾಕ್ಷನ್‌ಗೆ ಒಂದು ಲೋಟ ಬಿಸಿ ನೀರನ್ನು ಸೇರಿಸಿ ಸೇವಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹೀಗೆ ಮಾಡುತ್ತ ದೇಹದ ತೂಕವನ್ನು ಕಳೆದುಕೊಳ್ಳುವಂತೆ ವಿಡಿಯೋದಲ್ಲಿ ತೋರಿಸಲಾಗಿದೆ. ಇದನ್ನು ವೈದ್ಯರ ಸಲಹೆ ಎಂಬಂತೆ  ವೀಡಿಯೊದಲ್ಲಿ ತೋರಿಸಲಾಗಿದೆ. ಇಂತಹದ್ದೇ ಸೂಚನೆಗಳನ್ನು ನೀಡುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by Meka Russell (@mzluvbubblez909)

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಸತ್ಯಾಸ್ಯತೆಗಳನ್ನು ಪರಿಶೀಲಿಸಲು ಏನ್‌ಸುದ್ದಿ. ಕಾಂ ವಾಟ್ಸಾಪ್‌ಗೆ ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಗಳು ಬಂದಿದ್ದು ವಿಡಿಯೊದಲ್ಲಿ ತಿಳಿಸಿರುವಂತೆ ಅಭ್ಯಾಸಗಳನ್ನು ಮಾಡಿದರೆ ದೇಹದ ಕೊಬ್ಬು (Fat) ಕರಗುವುದೇ, ಇದಕ್ಕೆ ವೈದ್ಯರ ಸಲಹೆ ಏನೆಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪೌಷ್ಟಿಕ ತಜ್ಞರಾದ ರುತ್ ಟಂಗ್ ಅವರು ಇಂತಹ ಸುದ್ದಿಗಳನ್ನು ತಳ್ಳಿ ಹಾಕುವುದಲ್ಲದೆ ಇವರು “ಬರೀ ಬೆಳಗ್ಗೆ ಎದ್ದು ಕಾಫಿಯಲ್ಲಿ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿಕೊಂಡು ಕುಡಿದ ತಕ್ಷಣ ನಿಮ್ಮ ದೇಹದ ತೂಕ ಕಡಿಮೆ ಆಗುವುದಿಲ್ಲ” ಎಂದು ಹೇಳಿದ್ದಾರೆ. ಜನರು ತಮ್ಮ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅವರ ಒಂದು ಜೀವನಶೈಲಿಯಲ್ಲಿ ಅಗತ್ಯವಾದ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಬೇಕು ಎಂದು ಹೇಳಿದ್ದಾರೆ.

“ಈ ಕಾಫಿ ಮತ್ತು ನಿಂಬೆ ಹಣ್ಣಿನ ರಸದಲ್ಲಿ ಎರಡರಲ್ಲೂ ದೇಹದ ತೂಕವನ್ನು ಕಡಿಮೆ ಮಾಡುವಂತಹ ಯಾವುದೇ ರೀತಿಯ ಗುಣಲಕ್ಷಣಗಳಿಲ್ಲ. ಅದರಲ್ಲೂ ಎರಡೂ ಸೇರಿಸಿ ಕುಡಿದರೂ ದೇಹದ ತೂಕವನ್ನು ಕಡಿಮೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ. ದೇಹದ ತೂಕ ಕಡಿಮೆ ಮಾಡುವುದಿಲ್ಲ, ಆದರೆ ಬೇರೆ ಆರೋಗ್ಯಕರ ಪ್ರಯೋಜನಗಳನ್ನು ಇದು ಹೊಂದಿದೆ ಎಂದು ಹೇಳಿದರು.

https://www.youtube.com/shorts/7Hh6ZNrxhUs

“ಕಾಫಿಯಲ್ಲಿರುವ ಕೆಫಿನ್ ಎಂಬ ಅಂಶವು ವ್ಯಕ್ತಿಯನ್ನು ತುಂಬಾನೇ ಅಲರ್ಟ್ ಆಗಿರುವಂತೆ ಮತ್ತು ನರ ಸ್ನಾಯುಗಳ ಕೆಲಸವನ್ನು ವೇಗಗೊಳಿಸುತ್ತವೆ. ಕಾಫಿ ನಿಮ್ಮ ಜಡತ್ವಕ್ಕೆ ಬ್ರೇಕ್ ಹಾಕುವುದಲ್ಲದೆ ನಿಮ್ಮನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಇನ್ನೊಂದು ಕಡೆ ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ನಿಮ್ಮ ದೇಹಕ್ಕೆ ಬೇಕಾಗುವ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.

https://www.youtube.com/shorts/4zGP2LdtVEA

ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಯಾವುದೇ ರೀತಿಯ ಅಡ್ಡ ಮಾರ್ಗಗಳು ಇಲ್ಲ. ಇದನ್ನು ನೀವು ನಿಯಮಿತವಾಗಿ ವ್ಯಾಯಾಮ, ಉತ್ತಮ ಜೀವನಶೈಲಿ ಮತ್ತು ಆಹಾರ ನಿಯಂತ್ರಣದಿಂದ ಮಾತ್ರ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಇಂತಹ ಟಿಕ್ ಟಾಕ್ ವಿಡಿಯೊ ಮತ್ತು ಜಾಹಿರಾತುಗಳನ್ನು ನಂಬಿ ಮೋಸಹೋಗದೆ ನಿಮ್ಮ ದಿನ ದಿತ್ಯದ ಜೀವನ ಶೈಲಿಯನ್ನು ಕ್ರಮ ಬದ್ದಗೊಳಿಸಿಕೊಂಡರೆ ಸ್ಥೂಲಕಾಯದಿಂದ ದೂರವಾಗಬಹುದು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ದೋನಿ ಇಸ್ಲಾಂಗೆ ಮತಾಂತರ ಎಂದು ಎಡಿಟ್ ಫೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights