ಫ್ಯಾಕ್ಟ್‌ಚೆಕ್: ದೋನಿ ಇಸ್ಲಾಂಗೆ ಮತಾಂತರ ಎಂದು ಎಡಿಟ್ ಫೋಟೋ ಹಂಚಿಕೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ MS ಧೋನಿ ತಕಿಯಾ (ಮುಸ್ಲಿಂ ಕ್ಯಾಪ್) ಧರಿಸಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ “ಧೋನಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ” ಎಂದು ವ್ಯಾಪಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ MS ಧೋನಿ ಮುಸ್ಲಿಂ ಕ್ಯಾಪ್ ಧರಿಸಿರುವ ಫೋಟೋ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೊಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ 2010 ರ NDTVಯ ಕ್ರೀಡಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನ ಲಭ್ಯವಾಯಿತ್ತು. ಈ ಲೇಖನದಲ್ಲಿ, ಧೋನಿ ತಮ್ಮ ಹೆಂಡತಿಯೊಂದಿಗೆ ನಿಂತು ಬಾಲ್ಕನಿಯಿಂದ ಕೈ ಬೀಸುತ್ತಿರುವ ಫೋಟೋವನ್ನು ನೋಡಬಹುದು. ಆದರೆ ಈ ಫೋಟೋ ವೈರಲ್ ಆಗಿರುವ ಪೋಟೋಗೂ ಭಿನ್ನವಾಗಿದ್ದು ಇದನ್ನು ಎಡಿಟ್ ಮಾಡಿ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ ಅನ್ನಿಸುತ್ತದೆ.

ಎರಡೂ ಚಿತ್ರಗಳನ್ನು ಹೋಲಿಸಿದಾಗ, ವೈರಲ್ ಚಿತ್ರವನ್ನು ಎಡಿಟ್ ಮಾಡಿ ತಕಿಯಾ (ಮುಸ್ಲಿಂ ಕ್ಯಾಪ್) ಇರಿಸುವ ಮೂಲಕ ಮತ್ತು ದೋನಿಯ ಹಣೆಯಿಂದ ಕುಂಕುಮ್/ಸಿಂಧೂರವನ್ನು ಅಳಿಸುವ ಮೂಲಕ ಮಾರ್ಫ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಟಿ-ಶರ್ಟ್, ಕೈ ಸನ್ನೆಗಳು, ಹಿನ್ನೆಲೆಯಲ್ಲಿರುವ ಗೋಡೆ, ನೆರಳುಗಳು ಮುಂತಾದ ಎಲ್ಲಾ ಇತರ ಅಂಶಗಳು ಎರಡೂ ಚಿತ್ರಗಳಲ್ಲಿ ಒಂದೇ ರೀತಿ ಇದ್ದು ಉಳಿದ ಅಂಶಗಳನ್ನು ಎಡಿಟ್ ಮಾಡಲಾಗಿದೆ.

ಇದಲ್ಲದೆ, ಧೋನಿ ಇಸ್ಲಾಂಗೆ ಮತಾಂತರಗೊಂಡ ಬಗ್ಗೆ ಯಾವುದೇ ವರದಿಗಳಿಲ್ಲ. ಒಂದು ವೇಳೆ ಧೋನಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರೆ ಅದು ಮುಖ್ಯವಾಹಿನಿಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತಿತ್ತು. ಆದರೆ 2010 ರಲ್ಲಿ ತನ್ನ ಹೆಂಡತಿಯೊಂದಿಗೆ ಬಾಲ್ಕನಿಯಿಂದ ಮಾಧ್ಯಮಗಳ ಕಡೆಗೆ ಕೈಬೀಸಿದ ಸಂದರ್ಭದ ಫೋಟೋವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಎಂಎಸ್ ಧೋನಿ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ ಎಂದು ಅವರ ಮಾರ್ಫ್ ಮಾಡಿದ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ದೋನಿ ತಲೆಯ ಮೇಲೆ ಮುಸ್ಲಿಂ ಟೋಪಿಯನ್ನು ಡಿಜಿಟಲ್ ಆಗಿ ಇರಿಸಿ ಮತ್ತು ಹಣೆಯಿಂದ ಸಿಂಧೂರವನ್ನು ಅಳಿಸಿಹಾಕುವ ಮೂಲಕ ಇದನ್ನು ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಮಾಜಿ ರಾಷ್ಟ್ರಪತಿಗೆ ಅಗೌರವ ತೋರಿಲ್ಲ, ಆದರೆ ಫೋಟೋಗ್ರಾಫರ್‌ ಕಡೆ ಹೆಚ್ಚು ಗಮನ ಹರಿಸಿದ್ದಾರೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights