ಫ್ಯಾಕ್ಟ್‌ಚೆಕ್ : ಪರೀಕ್ಷೆಯಲ್ಲಿ ಪಾಸ್ ಮಾಡಲು ಮೌಲ್ಯಮಾಪಕನಿಗೆ ಲಂಚ ನೀಡಿದ ಹಳೆಯ ಫೋಟೋ ಹಂಚಿಕೆ

ಬಿಹಾರದ ವಿದ್ಯಾರ್ಥಿಯೊಬ್ಬ ತನ್ನನ್ನು ರಸಾಯನಶಾಸ್ತ್ರದ ವಿಷಯದಲ್ಲಿ ಪಾಸು ಮಾಡಲು ಮೌಲ್ಯಮಾಪಕನಿಗೆ ಲಂಚ ನೀಡಲು ಉತ್ತರ ಪತ್ರಿಕೆಯಲ್ಲಿ 500 ರೂಪಾಯಿಗಳನ್ನು ಇಟ್ಟಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ತನ್ನನ್ನು ಪಾಸು ಮಾಡುವಂತೆ ಬಿಹಾರದ ವಿದ್ಯಾರ್ಥಿಯೊಬ್ಬ ಮೌಲ್ಯಮಾಪಕನಿಗೆ 500 ಲಂಚ ನೀಡಿದ್ದಾನೆ. ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಗೂಗಲ್ ರಿವರ್ಸ್ ಇಮೇಜ್‌ ಮೂಲಕ ಸರ್ಚ್ ಮಾಡಿದಾಗ 2018 ರಲ್ಲಿ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಗಳಲ್ಲಿ ಸಂಭವಿಸಿದ ಘಟನೆಗಳನ್ನು ವರದಿ ಮಾಡುವ ಹಿಂದೂಸ್ತಾನ್ ಟೈಮ್ಸ್ ಲೇಖನವು ಲಭ್ಯವಾಗಿದೆ. ವರದಿಯ ಪ್ರಕಾರ, ವಿದ್ಯಾರ್ಥಿಯೊಬ್ಬ ತಾನು ಬರೆದ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ತನ್ನನ್ನು ಪಾಸು ಮಾಡುವಂತೆ ತನ್ನ ಉತ್ತರ ಪತ್ರಿಕೆಗಳಲ್ಲಿ 100 ರೂಗಳ 5 ನೋಟುಗಳನ್ನು  ಇಟ್ಟು ಮೌಲ್ಯಮಾಪಕರನ್ನು ವಿನಂತಿಸಿದ್ದನು ಎಂದು ವರದಿಯಾಗಿದೆ. ಆಗ ಹಲವು ಮಾಧ್ಯಮ ಸಂಸ್ಥೆಗಳು ಈ ಘಟನೆಯನ್ನು ವರದಿ ಮಾಡಿದ್ದವು. ಈ ಲೇಖನಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಸ್ಟ್‌ನಲ್ಲಿ ಹೇಳುವಂತೆ ಬಿಹಾರದ ಪ್ರೌಢಶಾಲೆಯೊಂದರಲ್ಲಿ ಇಂತಹ ಘಟನೆಗಳು ಇತ್ತೀಚೆಗೆ ನಡೆದಿವೆಯೇ ಎಂದು ಪರಿಶೀಲಿಸಿದಾಗ, ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಮುಖ್ಯವಾಗಿ ಕಳೆದ ಎರಡು ವರ್ಷದಿಂದ ಕೋವಿಡ್  ಕಾರಣಕ್ಕೆ ಶಾಲೆಗಳೇ ಸರಿಯಾಗಿ ನಡೆದಿಲ್ಲ ಅಂದ ಮೇಲೆ ಇಂತಹ ಘಟನೆ ಹೇಗೆ ನಡೆಯಲು ಸಾಧ್ಯ? ಆದರೆ ಉತ್ತರ ಪ್ರದೇಶದ ಹಳೆಯ ಫೋಟೋವನ್ನು ಬಳಸಿಕೊಂಡು ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆ ಎಂದು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ವಿದ್ಯಾರ್ಥಿ ತನ್ನ ಪರೀಕ್ಷಾ ಮೌಲ್ಯಮಾಪಕನಿಗೆ ಲಂಚ ನೀಡುತ್ತಿರುವಂತೆ 2018 ರ ಉತ್ತರ ಪ್ರದೇಶದ ಘಟನೆಯ ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಯೂಟ್ಯೂಬ್‌ಗೆ ಹೆಚ್ಚು ವೀವ್ಸ್ ಬರಲಿಲ್ಲ ಎಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights