ಫ್ಯಾಕ್ಟ್‌ಚೆಕ್ : ಯೂಟ್ಯೂಬ್‌ಗೆ ಹೆಚ್ಚು ವೀವ್ಸ್ ಬರಲಿಲ್ಲ ಎಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ?

ಹೈದರಾಬಾದ್ ಮೂಲದ ಯೂಟ್ಯೂಬರ್ ಒಬ್ಬರು ತನ್ನ ಯೂಟ್ಯೂಬ್ ಚಾನೆಲ್‌ಗೆ ಹೆಚ್ಚು ವೀಕ್ಷಣೆಗಳು ಬರಲಿಲ್ಲ ಎಂಬ  ಕೊರಗಿನಲ್ಲಿ ಆತ್ಮಹತ್ಯ ಮಾಡಿಕೊಂಡಿದ್ದಾನೆ ಎಂಬ ಹೇಳಿಕೆಯೊಂದಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ, ಈ ಘಟನೆಗೆ ಸಂಬಂಧಿಸಿದಂತೆ ಹಲವು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ವರದಿಗಳ ಪ್ರಕಾರ, IIITM ಗ್ವಾಲಿಯರ್‌ನ 23 ವರ್ಷದ ವಿದ್ಯಾರ್ಥಿ ಸಿ. ಧೀನಾ ಅವರು ‘seLFlo’ ಎಂಬ ಗೇಮಿಂಗ್ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಅವರು 21 ಜುಲೈ 2022 ರಂದು ತಮ್ಮ ಅಪಾರ್ಟ್ಮೆಂಟ್‌ನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಸಾವಿಗೂ ಮುನ್ನ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಸೈದಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದರಿಂದ ಸುಳಿವು ಪಡೆದು, ಅವರ ಟ್ವಿಟ್ಟರ್ ಖಾತೆಯಲ್ಲಿ ಪರಿಶೀಲಿಸಿದಾಗ ಪತ್ರವನ್ನು ಕಂಡುಕೊಂಡಿದ್ದೇವೆ. ಅವರು ಅದನ್ನು 21 ಜುಲೈ 2022 ರಂದು 4:38 AM ಕ್ಕೆ ಪೋಸ್ಟ್ ಮಾಡಿದ್ದಾರೆ.  ಅದನ್ನು ಇಲ್ಲಿ ಕಾಣಬಹುದು. ಈ ಪತ್ರದ ಪ್ರಕಾರ, ಧೀನಾ ಬಾಲ್ಯದ ಆಘಾತ, ಖಿನ್ನತೆ, ಆತಂಕ, ಪ್ಯಾನಿಕ್ ಅಟ್ಯಾಕ್, ಅಸಮರ್ಪಕ ಪೋಷಕತ್ವ ಮುಂತಾದ ಹಲವಾರು ಸಮಸ್ಯೆಗಳೊಂದಿಗೆ ಬಳಲುತ್ತಿದ್ದರು. ಆದರೂ, YouTube ಚಾನಲ್ ‘seLFlo’ ಅನ್ನು ತುಂಬಾ ಇಷ್ಟಪಟ್ಟು ನಡೆಸುತ್ತಿದ್ದರು , ಏಕೆಂದರೆ ಅದು ಅವರಿಗೆ ಸಂವಹನ ನಡೆಸಲು ಅವಕಾಶವನ್ನು ನೀಡಿತ್ತು. ಸ್ನೇಹಪರ ಮತ್ತು ಬೆಂಬಲ ನೀಡುವ ಜನರೊಂದಿಗೆ. ವಾಸ್ತವವಾಗಿ, ಅವರು ತಮ್ಮ ಚಾನಲ್ ಬೆಳವಣಿಗೆಯಿಂದ ತೃಪ್ತರಾಗಿದ್ದಾರೆ ಎನ್ನಲಾಗಿದೆ.

ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರತಿ ಲಭ್ಯವಾಗಿದ್ದು. ಅದನ್ನು ಇಲ್ಲಿ ಕಾಣಬಹುದು.  “21-07-2022 ರಂದು ನನ್ನ ಮಗ ಸಿ ಧೀನಾ, ವಯಸ್ಸು 23, IIIT ಗ್ವಾಲಿಯರ್‌ನಲ್ಲಿ 5 ನೇ ವರ್ಷದ ವ್ಯಾಸಂಗ ಮಾಡುತ್ತಿದ್ದ,  ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ನಮ್ಮದೇನೂ ತಪ್ಪಿಲ್ಲ. ಆದ್ದರಿಂದ ಆದಷ್ಟು ಬೇಗ ಕಾರ್ಯವಿಧಾನದ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಲಾಗಿದೆ. ಎಂದು ಮೃತ ಯುವಕನ ತಂದೆ ಸ್ಪಷ್ಟವಾಗಿ ಪೊಲೀಸರಿಗೆ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಆತ್ಮಹತ್ಯೆಗೆ ಶರಣಾದ ಯುವಕನು, ಬಾಲ್ಯದ ಆಘಾತ, ಖಿನ್ನತೆ, ಆತಂಕ,  ಪೋಷಕರ ಪ್ರೀತಿಯ ಕೊರತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು  ತಿಳಿದುಬಂದಿದೆ. ಅವರ ಯೂಟ್ಯೂಬ್ ಚಾನೆಲ್‌ಗೆ ಹೆಚ್ಚು ವೀವ್ಸ್ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಸುಳ್ಳು, ಆತ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್‌ ಬರೆದಿದ್ದು ಅದನ್ನು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾನೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ ಫ್ಯಾಕ್ಟ್‌ಚೆಕ್: ಪೈಪ್‌ಲೈನ್ ಮೂಲಕ ಮದ್ಯ ಸರಬರಾಜು ಮಾಡಲಿದೆಯೇ ಕೇಂದ್ರ ಸರ್ಕಾರ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights