ಭಾರತದಲ್ಲಿ ಒಂದೇ ದಿನ 22,771 ಕೋವಿಡ್ ಪ್ರಕರಣಗಳು ಪತ್ತೆ

ಕೇಂದ್ರ ಆರೋಗ್ಯ ಸಚಿವಾಲಯದ ಶನಿವಾರದ ಅಂಕಿ ಅಂಶಗಳು ಆತಂಕ ಮೂಡಿಸಿದ್ದು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 22,771 ಪ್ರಕರಣಗಳು ದಾಖಲಾಗಿವೆ. ಭಾರತವು ಕೊರೊನಾ ವೈರಸ್ ಪ್ರಕರಣಗಳಲ್ಲಿ ಮತ್ತೊಂದು ಏರಿಕೆ ದಾಖಲಿಸಿ, ಒಟ್ಟು ಸೋಂಕಿತರ ಪ್ರಮಾಣ 6,48,315 ಕ್ಕೆ ತಲುಪಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 2,35,433 ಆಗಿದ್ದು, ಒಂದೇ ದಿನದಲ್ಲಿ 442 ರೋಗಿಗಳು  ಸಾವನಪ್ಪಿದ್ದಾರೆ. ಒಟ್ಟಾರೆ ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 18,655 ಕ್ಕೆ ತಲುಪಿದೆ.

ಶುಕ್ರವಾರ ಬೆಳಿಗ್ಗೆ 20,903 ಪ್ರಕರಣಗಳ ದಾಖಲೆಯ ನಂತರವೂ, ಭಾರತ ಸತತ ಎರಡನೇ ದಿನ 20,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ.

ಆರೋಗ್ಯ ಸಚಿವಾಲಯದ ಕೋವಿಡ್ -19 ಡ್ಯಾಶ್‌ಬೋರ್ಡ್ ಪ್ರಕಾರ, ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 14,335 ರೋಗಿಗಳು ವೈರಲ್ ಕಾಯಿಲೆಯಿಂದ ಗುಣಮುಖರಾಗಿದ್ದರಿಂದ ಚೇತರಿಕೆಯ ಪ್ರಮಾಣವು 60.80% ಕ್ಕೆ ಸುಧಾರಿಸಿದೆ.

ಈವರೆಗೆ ದೇಶಾದ್ಯಂತ 3,94,226 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,35,433 ಆಗಿದೆ.

ಭಾರತದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾದ ಮಹಾರಾಷ್ಟ್ರದಲ್ಲಿ 1,92,990 ಕೋವಿಡ್ -19 ಪ್ರಕರಣಗಳು ಮತ್ತು ಇದುವರೆಗೆ 8,376 ಸಾವುನೋವುಗಳಿವೆ.

ಉದ್ದೇಶಿತ ಪರೀಕ್ಷೆಯಿಂದಾಗಿ ರಾಜ್ಯವು ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ತಿಳಿಸಿದ್ದಾರೆ. ಹಾಗೆಯೇ ಸ್ವತಂತ್ರ  ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದರೂ, ಪ್ರಮಾಣವು ತೀವ್ರವಾಗಿ ಏರುತ್ತಿಲ್ಲ ಎಂದೂ ತಿಳಿಸಿದ್ದಾರೆ.

ದಕ್ಷಿಣದ ರಾಜ್ಯಗಳಲ್ಲಿ  ತಮಿಳುನಾಡು ಈಗ 1,00,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. ಅಲ್ಲಿ 1,02,721 ಸೋಂಕಿತ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 1,385 ಕ್ಕೆ ತಲುಪಿದೆ.

ಈವರೆಗೆ 95,40,132 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಅದರಲ್ಲಿ 2,42,383 ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 94,695 ಕೋವಿಡ್ -19 ಪ್ರಕರಣಗಳು ದಾಖಲಾಗಿದೆ.


ಇದನ್ನೂ ಓದಿ: ಮಹಿಳೆಯ ಮೇಲೆ ಎರಡು ಬಾರಿ ಕಾರು ಚಲಾಯಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್!: ವಿಡಿಯೋ ವೈರಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights