ಫ್ಯಾಕ್ಟ್‌ಚೆಕ್: ಸಿದ್ದರಾಮಯ್ಯನವರ ಹೆಸರಿನಲ್ಲಿ ಹರಿದಾಡುತ್ತಿರುವುದು ನಕಲಿ ಪತ್ರ

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪತ್ರದ ಸಾರಾಂಶದ ಪ್ರಕಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರುವ ಕಾರಣಕ್ಕೆ ಕ್ಷಮೆ ಕೋರುತ್ತ ಪಕ್ಷದ ಕೆಲವು ಆಂತರಿಕ ವಿಷಯಗಳನ್ನು ಸೋನಿಯಾ ಗಾಂಧಿಯವರ ಗಮನಕ್ಕೆ ತರುವ ಉದ್ದೇಶದಿಂದ ಈ ಪತ್ರವನ್ನು ಬರೆದಿರುವಂತೆ ಕಾಣುತ್ತಿದೆ.

ಮುಖ್ಯವಾಗಿ KPCC ಅಧ್ಯಕ್ಷರಾಗಿರುವ DK ಶಿವಕುಮಾರ್ ಆವರ ವಿರುದ್ದ ಆರೋಪಗಳನ್ನು ಮಾಡುತ್ತ ತನ್ನ ಆಪ್ತರಿಗೆ ವಿಧಾನ ಸಭಾ ಚುನಾವಣೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿರುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

ಸಿದ್ದರಾಮಯ್ಯ ಸೋನಿಯಾ ಗಾಂಧಿಯವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ
ಸಿದ್ದರಾಮಯ್ಯ ಸೋನಿಯಾ ಗಾಂಧಿಯವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ

ಪತ್ರ ಈ ಕೆಳಗನಂತಿದೆ:

Opposition Leader of Assembly
Legislative
SIDDARAMAIAH
Leader of Opposition Karnataka Legislative Assembly

ಇವರಿಗೆ,
ಶ್ರೀಮತಿ ಸೋನಿಯಾಗಾಂಧಿ ಜೀ ಸಂಸದರು ನಂ.10, ಜನಪರ
ನವ ದೆಹಲಿ
ಗೌರವಾನ್ವಿತ ಶ್ರೀಮತಿ ಸೋನಿಯಾ ಗಾಂಧಿ ಜೀ ಅವರೇ,

ತಮಗೆ ಹಾಗೂ ತಮ್ಮ ಕುಟುಂಬ ವರ್ಗದವರಿಗೆ ನಮಸ್ಕಾರಗಳು, ರಾಹುಲ್ ಗಾಂಧಿಯವರ ಯಾತ್ರೆಯಲ್ಲಿ ನಾನು ಭಾಗವಿಸಲಿಲ್ಲ ದಯಮಾಡಿ ಕ್ಷಮೆ ಇರಲಿ.

ಪಕ್ಷದ ಕೆಲವು ಆಂತರಿಕ ವಿಚಾರಗಳನ್ನು ತಮ್ಮ ಗಮನಕ್ಕೆ ತರುವ ಉದ್ದೇಶದಿಂದ ಈ ಪತ್ರ ಬರೆಯುತ್ತಿದ್ದೇನೆ ನನಗೆ ರಾಜಕೀಯ ಆಶ್ರಯ ನೀಡಿದ ಕಾಂಗ್ರೆಸ್‌ ಗೆ ನಾನು ಚಿರಋಣೆ, ಎಲ್ಲರನ್ನು ನಿಯಂತ್ರಣದಲ್ಲಿಟ್ಟುಕೊಂಡ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಮಾದರಿಯಲ್ಲಿಯೇ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುತ್ತಿರುವ ತಮ್ಮ ನಾಯಕತ್ವವನ್ನು ಪಕ್ಷದ ಪ್ರತಿಯೊಬ್ಬ ಸದಸ್ಯರೂ ಗೌರವಿಸುತ್ತಾರೆ. ಅದಕ್ಕೆ ಕಿಂಚಿತ್ತೂ ಕುಂದುಬರದಂತೆ ನೋಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ

ಆದರೆ, ಕರ್ನಾಟಕದಲ್ಲಿ ನಮ್ಮ ಪಕ್ಷದವರಿಂದಲೇ ತಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಕೆಪಿಸಿಸಿಯ ಹಾಲಿ ರಾಜ್ಯಾಧ್ಯಕ್ಷರು, ಪಕ್ಷದ ಮೂಲ ತತ್ತ್ವ, ಸಿದ್ಧಾಂತಗಳಿಗೆ ವಿರುದ್ಧವಗಿ ನಡೆದುಕೊಳ್ಳುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ 3ರಂದು ಅವರು ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿಯು ಮಾಧ್ಯಮಗಳ ಮೂಲಕ ಈ ಹಿಂದೆ ನನಗೆ ತಿಳಿದ ನಂತರ, ನನ್ನ ಬೆಂಬಲಿಗರು ಆ ಬೆಳವಣಿಗೆಗೆ ಬಲವಾಗಿ ಪ್ರತಿರೋಧ ವ್ಯಕ್ತ ಪಡಿಸಿದ್ದರು. ಪರಿಣಾಮವಾಗಿ  ಅದು ಮುಂದೂಡಲ್ಪಟ್ಟು ಸಂಕ್ರಾಂತಿಯ ನಂತರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿತು,

ಆದರೆ, ಗುಂಪುಗಾರಿಕೆಯ ಲಕ್ಷಣಗಳು, ಸ್ವಜನಪಕ್ಷಪಾತ ಮತ್ತೆ ನನ್ನ ಬೆಂಬಲಿಗರ ಮೇಲಿನ ಹಗೆ ಹೆಚ್ಚು ಗೋಚರಿಸಿದರ ಪರಿಣಾಮ ನನ್ನ ಬೆಂಬಲಿಗರು ಮತ್ತೊಮ್ಮೆ ಪ್ರತಿಭಟಿಸಿದರು. ತದನಂತರ ಪಟ್ಟಿ ಬಿಡುಗಡೆ ಸ್ಥಗಿತಗೊಳಿಸಿದ ಅಧ್ಯಕ್ಷರು ಪಕ್ಷದ ಫೆಬ್ರವರಿ 2ರ ಚುನಾವಣಾ ಸಮಿತಿ ಸಭೆಯ ಬಳಿಕ ಕೇಂದ್ರಕ್ಕೆ ಕಳಿಸುವುದಾಗಿ ಹೇಳಿದ್ದರು. ಆದರೆ, ಇದೀಗ ಸಭೆ ಮುಗಿದಿದ್ದು ಅವರ ಮುಂದಿನ ನಡೆ ಅನುಮಾನಾಸ್ಪದವಾಗಿದೆ.

ಅಧ್ಯಕ್ಷ ಡಿಕೆರವರ ಆದೇಶದ ಮೇರೆಗೆ, ಚುನಾವಣಾ ಕಣಕ್ಕೆ ಇಳಿಯುವ ಅಭ್ಯರ್ಥಿಗಳ ಮಾದರಿ ಅರ್ಜಿಗಳನ್ನು ಹಾಗಗೂ ಹೆಸರುಗಳನ್ನು ಈಗಾಗಲೇ www.kpcc.in ನಲ್ಲಿ ಆಪ್‌ಲೋಡ ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಅರ್ಹತಾ ಮಾನದಂಡಕ್ಕಿಂತಲೂ ಹೆಚ್ಚಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನನ್ನ ಗುಂಪಿನಲ್ಲಿದ್ದರೆ, ಕಾಂಗ್ರೆಸ್ ಪಕ್ಷದ Triple C – CCC’ ತತ್ತ್ವ ಸಿದ್ಧಾಂತಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮಿಗಿಲಾಗಿ ಅವರೆಲ್ಲರೂ ನಿಮ್ಮ ನಾಯಕತ್ವವನ್ನು ಗೌರವಿಸುವವರು,

ಇದೇ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಇವರೆಲ್ಲರನ್ನು ಪಕ್ಷದ ಚಟುವಟಿಕೆಗಳಿಂದ ದೂರ ಇಟ್ಟಿದ್ದಾರೆ. ಅಲ್ಲದೇ, ಟಿಕೆಟ್ ಆಯ್ಕೆ ವಿಚಾರದಲ್ಲೂ ಕಡೆಗಣಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದು ನಮ್ಮ ಪಕ್ಷದ ಗೌರವ ಹೆಚ್ಚಿಸುವ ಎಲ್ಲ ಅರ್ಹತೆ ಹೊಂದಿರುವ ಟಿಕೆಟ್ ಆಕಾಂಕ್ಷಿಗಳು ನನ್ನ ಬೆಂಬಲಿಗರು ಎನ್ನುವ ಒಂದೇ ಕಾರಣಕ್ಕೆ ತಿರಸ್ಕಾರದ ದೃಷ್ಟಿಯಿಂದ ನೋಡುವುದು ಸರಿಯಲ್ಲ.

ಕೆಪಿಸಿಸಿ ಅಧ್ಯಕ್ಷ ಡಿಕೆಯವರ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾದ ಪಕ್ಷದ ನಾಯಕರು ಸಹ ಮುಂದಿನ ದಿನಗಳಲ್ಲಿ ತಮಗೆ ಪತ್ರವನ್ನು ಬರೆದು ಹಾಗು ಅರ್ಜಿಗಳನ್ನು ನೇರವಾಗಿ ಕಳುಹಿಸಿ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳನ್ನು ಕಡೆಗಣಿಸಿದರೆ ಅವರೆಲ್ಲರೂ ಬೇರೆ ಪಕ್ಷಗಳಿಗೆ ವಲಸೆ ಹೋಗುವ ಆಪಾಯ ತಳ್ಳಿಹಾಕುವಂತಿಲ್ಲ, ಇಂತಹ ಘಟನೆಗಳಿಗೆ ತಾವು ಆವಕಾಶ ಮಾಡಿಕೊಡುವುದಿಲ್ಲ ಎಂಬ ವಿಶ್ವಾಸ ನನ್ನದು.

ಕೆಪಿಸಿಸಿ ಅಧ್ಯಕ್ಷ ಡಿಕೆ ಯವರ ವರ್ತನೆಯಿಂದ ನಮ್ಮ ನಿಷ್ಠಾವಂತರು ಮೂಲೆ ಗುಂಪಾಗಾಬಾರದು. ಹಾಗಾಗಿ, ಇವರನ್ನು ಗಮನದಲ್ಲಿಟ್ಟುಕೊಳಬೇಕು ಎಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ ಮಾಡುತ್ತೇನೆ. ನಿಮ್ಮ ಕೃಪಾದೃಷ್ಟಿಯಿಂದ ಇವರೆಲ್ಲರ ಉಮೇದುವಾರಿಕೆಯನ್ನು ಶೀಘ್ರದಲ್ಲಿ www.kpcc.in ವೆಬ್‌ಸೈಟ್‌ನಲ್ಲಿ ನೋಡುತ್ತೇನೆ ಎಂಬ ಅಚಲ ವಿಶ್ವಾಸ ನನಗಿದೆ.

ಈ ಮೇಲಿನ ಪತ್ರವನ್ನು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿ ಬರೆದಿದ್ದಾರೆಂದು ಹರಿಯ ಬಿಡಲಾಗಿದೆ. ಆದರೆ ಈ ಪತ್ರವನ್ನು ನಾನು ಬರೆದಿಲ್ಲ ಇದು ನಕಲಿ ಪತ್ರ ಎಂದು ಸ್ವತಃ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಹೆಸರಿನಲ್ಲಿ ಹರಿದಾಡುತ್ತಿದೆ ನಕಲಿ ಪತ್ರ:

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾದ ಪತ್ರ ನಕಲಿಯಾಗಿದ್ದು, ಸಿದ್ದರಾಮಯ್ಯರವರ ಹೆಸರಿನಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸೆಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಸ್ಪಷ್ಟಪಡಿಸಿದ್ದಾರೆ.

“ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರ ಸಂಬಂಧವನ್ನು ಕೆಡಿಸುವ ದುರುದ್ದೇಶದಿಂದಲೇ ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಈ ಪತ್ರಕ್ಕೂ ನನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ”. ಎಂದು ಟ್ವೀಟ್ ಮಾಡಿದ್ದಾರೆ.

.

ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರ ಸಂಬಂಧವನ್ನು ಕೆಡಿಸುವ ದುರುದ್ದೇಶದಿಂದಲೇ ಯಾರೋ ಕಿಡಿಗೇಡಿಗಳು ಈ ಕೃತ್ಯನಡೆಸಿದ್ದಾರೆ. ಈ ಪತ್ರಕ್ಕೂ ನನಗೂ ಸಂಬಂಧ ಇಲ್ಲ. ಮುಂದಿನ ಚುನಾವಣೆಯಲ್ಲಿ ಗೆಲುವಿನ ಹಾದಿಯಲ್ಲಿರುವ ನಮ್ಮ‌ ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದಲೇ ಈ ಖೊಟ್ಟಿ ಪತ್ರವನ್ನು ಹರಿಯಬಿಡಲಾಗಿದೆ. ಈ ಬಗ್ಗೆ ನಾನು ಪೋಲಿಸರಿಗೆ ದೂರು ನೀಡಲಿದ್ದು, ದುಷ್ಕೃತ್ಯದ ಹಿಂದಿನ ದುರುಳರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುತ್ತಾರೆಂದು ನಂಬಿದ್ದೇನೆ ಎಂದು  ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಾಗಾಗಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಬಾಕ್ಸರ್‌ಅನ್ನು ಭಾರತದ ವಿಜಯಲಕ್ಷ್ಮಿ ಸೋಲಿಸಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights