ಮಹಿಳೆಯ ಮೇಲೆ ಎರಡು ಬಾರಿ ಕಾರು ಚಲಾಯಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್!: ವಿಡಿಯೋ ವೈರಲ್

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬ ಮಹಿಳೆಯೊಬ್ಬಳ ಮೇಲೆ ಎರಡು ಬಾರಿ ಕಾರು ಚಲಾಯಿಸಿರುವ ದುರ್ಘಟನೆ ದೆಹಲಿಯಲ್ಲಿ ಜರುಗಿದೆ. ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಘಟನೆಗೆ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ದೆಹಲಿಯ ಚಿಲ್ಲಾ ಗ್ರಾಮದ ಬಳಿ ನಿನ್ನೆ ಘಟನೆ ಜರುಗಿದ್ದು, ಆರೋಪಿ ಸಬ್ ಇನ್ಸ್‌ಪೆಕ್ಟರ್ ಪಾನಮತ್ತನಾಗಿದ್ದ ಎನ್ನಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ವೈರಲ್ ವಿಡಿಯೋ ದಲ್ಲಿ ತೋರಿಸುವಂತೆ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಬರುತ್ತಿದ್ದು ಅವರ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿದೆ. ಕೂಡಲೇ ಸುತ್ತ ನೆರೆದಿದ್ದ ಜನರು ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಆದರೆ ಕಾರು ಚಾಲಕ ಪೊಲೀಸ್‌ ತಪ್ಪಿಸಿಕೊಳ್ಳಲು ಯತ್ನಸಿ ಜನಗಳ ನಡುವೆಯೇ ಮತ್ತೆ ಯದ್ವತದ್ವಾ ಕಾರು ಓಡಿಸಿ ಮತ್ತೆ ಗಾಯಗೊಂಡ ಮಹಿಳೆ ಮೇಲೆ ಕಾರು ಚಲಾಯಿಸಿದ್ದಾನೆ.

ಇದರಿಂದ ಕ್ರೋಧಗೊಂಡ ಜನರು ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ. ನಂತರ ಪೊಲೀಸರು ಆರೋಪಿ ಸಬ್ ಇನ್ಸ್‌ಪೆಕ್ಟರ್‌ನನ್ನು ಬಂಧಿಸಿದ್ದಾರೆ. ಗಾಯಗೊಂಡ ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಚಿನ್ನದ ಮಾಸ್ಕ್ ಮಾಡಿಸಿಕೊಂಡ ಭೂಪ: ಇದಕ್ಕೆ ಖರ್ಚಾದ ಹಣವೆಷ್ಟು ಗೊತ್ತೆ?

ಇದನ್ನೂ ಓದಿ: ಟಿಕ್‌ ಟಾಕ್ ಬ್ಯಾನ್‌ನಿಂದ ಕಂಪನಿಗಾದ ನಷ್ಟವೆಷ್ಟು ಗೊತ್ತೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights